Balakot Air Strike: ಪಾಕಿಸ್ತಾನದ ಎದೆ ನಡುಗಿಸಿದ್ದ ಆ ದಾಳಿಗೆ ಇವತ್ತು ಎರಡು ವರ್ಷ..!

ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ   ನಡೆದು ಇಂದಿಗೆ ಎರಡು ವರ್ಷ. ಫೆಬ್ರವರಿ 26, 2019 ರಂದು ಎಲ್ ಒಸಿ  ದಾಟಿ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿತ್ತು ಭಾರತ..

Written by - Ranjitha R K | Last Updated : Feb 26, 2021, 11:15 AM IST
  • ಬಾಲಕೋಟ್ ವೈಮಾನಿಕ ದಾಳಿ ನಡೆದು ಇಂದಿಗೆ 2 ವರ್ಷ
  • ಎಲ್‌ಒಸಿ ದಾಟಿ ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳನ್ನುಹೊಡೆದುರುಳಿಸಿತ್ತು
  • ಆಪರೇಷನ್ ಬಂದರ್ ಎಂಬ ಹೆಸರಿನಲ್ಲಿ ನಡೆದ ಕಾರ್ಯಾಚರಣೆ
Balakot Air Strike: ಪಾಕಿಸ್ತಾನದ ಎದೆ ನಡುಗಿಸಿದ್ದ ಆ ದಾಳಿಗೆ ಇವತ್ತು ಎರಡು ವರ್ಷ..! title=
ಬಾಲಕೋಟ್ ವೈಮಾನಿಕ ದಾಳಿ ನಡೆದು ಇಂದಿಗೆ 2 ವರ್ಷ (file photo)

ನವದೆಹಲಿ : ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ  (Balakot Air Strike) ನಡೆದು ಇಂದಿಗೆ ಎರಡು ವರ್ಷ. ಫೆಬ್ರವರಿ 26, 2019 ರಂದು ಎಲ್ ಒಸಿ (LOC) ದಾಟಿ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿತ್ತು ಭಾರತ.  ಪಾಕಿಸ್ತಾನದ ನೆಲದಲ್ಲಿ ಬೀಡುಬಿಟ್ಟಿದ್ದ ಜೈಶ್-ಎ-ಮೊಹಮ್ಮದ್ (JeM)ಭಯೋತ್ಪಾದಕ ಶಿಬಿರವನ್ನು ನಮ್ಮ ಹೆಮ್ಮೆಯ ವಾಯುಪಡೆ ಧ್ವಂಸಗೊಳಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ದಾಳಿಯ (Pulwama attack) ನಂತರ ಭಾರತವು ಬಾಲಕೋಟ್ ವಾಯುದಾಳಿ ನಡೆಸಿತ್ತು. ಪುಲ್ವಾಮಾ ದಾಳಿಯಲ್ಲಿ  40 ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸೈನಿಕರು ಹುತಾತ್ಮರಾಗಿದ್ದರು.

ಎಲ್‌ಒಸಿ ದಾಟಿ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಲಾಗಿತ್ತು : 
ಫೆಬ್ರವರಿ 26, 2019 ರಂದು ಮುಂಜಾನೆ 3.30 ರ ಸುಮಾರಿಗೆ 12 ಮಿರಾಜ್ 2000 ಯುದ್ದ ವಿಮಾನ, ಎಲ್‌ಒಸಿ (LOC) ದಾಟಿ ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳನ್ನುಹೊಡೆದುರುಳಿಸಿತ್ತು. ಉರಿ ಮತ್ತು ಬಾಲಕೋಟ್ ವಾಯುದಾಳಿಗಳ (Balakot Air Strike) ಮೂಲಕ,  ಭಯೋತ್ಪಾದಕರ ಪ್ರತಿಯೊಂದು ದುಷ್ಕೃತ್ಯದ ವಿರುದ್ದವೂ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಭಾರತ ಸಾಬೀತುಪಡಿಸಿತ್ತು. 

ಇದನ್ನೂ ಓದಿ : Bharat Bandh today: ದೇಶಾದ್ಯಂತ 8 ಕೋಟಿ ವರ್ತಕರಿಂದ ಭಾರತ್ ಬಂದ್, ಏನಿರುತ್ತೆ? ಏನಿರಲ್ಲ?

ಬಾಲಕೋಟ್ ವಾಯುದಾಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು :

1. ಬಾಲಕೋಟ್‌ನಲ್ಲಿ ವಾಯುಪಡೆಯ ಕಾರ್ಯಾಚರಣೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಇದಕ್ಕೆ 'ಆಪರೇಷನ್ ಬಂದರ್' (Operation Bandar) ಎಂಬ ಕೋಡ್ ಇಡಲಾಗಿತ್ತು.  ಭಾರತೀಯ ವಾಯುಪಡೆಯ ಏಳನೇ ಮತ್ತು ಒಂಬತ್ತನೇ ಸ್ಕ್ವಾಡ್ರನ್‌ಗಳು ಈ ಕಾರ್ಯಾಚರಣೆಯನ್ನು ನಿರ್ವಹಿಸಿತ್ತು. 

2. ಫೆಬ್ರವರಿ 14, 2019 ರಂದು ಪುಲ್ವಾಮಾದಲ್ಲಿ (Pulwama attack) ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಬಾಲಕೋಟ್ ವಾಯುದಾಳಿ ನಡೆಸಲಾಯಿತು. ಫೆಬ್ರವರಿ 14ರಂದು, ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಹಾದುಹೋಗುತ್ತಿದ್ದ ಸಿಆರ್‌ಪಿಎಫ್ (CRPF) ಬೆಂಗಾವಲಿಗೆ ಕಾರು ಡಿಕ್ಕಿ ಹೊಡೆಸಿ ಸ್ಫೋಟಿಸಲಾಗಿತ್ತು.  ಈ ಸ್ಫೋಟದಲ್ಲಿ  42 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. 

3. ಬಾಲಕೋಟ್ ವಾಯುದಾಳಿಯ ಕಾರ್ಯಾಚರಣೆಗೆ  ಮಿರಾಜ್ -2000 ಮತ್ತು ಸುಖೋಯ್ ಎಸ್‌ಯು -30 ಅನ್ನು ಭಾರತೀಯ ವಾಯುಪಡೆಯು (Indian Air Force) ಬಳಸಿಕೊಂಡಿತು.

4. ಬಾಲಕೋಟ್ ವಾಯುದಾಳಿ ಕಾರ್ಯಾಚರಣೆಗೆ 12 ಮಿರಾಜ್ 2000  ಯನ್ನು ಬಳಸಲಾಗಿತ್ತು. ಗ್ವಾಲಿಯರ್ ವಾಯು ನೆಲೆಯಿಂದ ಈ ಯುದ್ದ ವಿಮಾನಗಳು (Fighter Jet) ಹಾರಾಟ ಆರಂಭಿಸಿತ್ತು. 

5. ಭಾರತದ ಯುದ್ದ ವಿಮಾನಗಳು ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿ, ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ ಶಿಬಿರವನ್ನು ಸ್ಫೋಟಿಸಿದ್ದವು. ಈ ದಾಳಿಯಲ್ಲಿ ಇನ್ನೂರು ಐವತ್ತಕ್ಕೂ ಹೆಚ್ಚು ಭಯೋತ್ಪಾದಕರು (Terrorist) ಸಾವನ್ನಪ್ಪಿದ್ದರು. 

ಇದನ್ನೂ ಓದಿ : ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಸಾಮಗ್ರಿ ಹೊತ್ತಿದ್ದ ವಾಹನ ಪತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News