8 ವರ್ಷಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪರಿಚಯಿಸಲಾದ ಏಷ್ಯಾ ಕಪ್ ಟ್ರೋಫಿಗಾಗಿ ಏಷ್ಯಾದ ಅಗ್ರ ಆರು ತಂಡಗಳು ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ 13 ಪಂದ್ಯಗಳನ್ನು ಆಡಲಿದೆ.
ಹೀಗೆ ಎರಡೂ ಟೀಂ ಇದೀಗ ಏಷ್ಯಾಕಪ್-2022 ಮೂಲಕ ಭರ್ಜರಿ ಸೆಣೆಸಾಟಕ್ಕೆ ಸಜ್ಜಾಗಿವೆ. ಹೀಗೆ ಹೈವೋಲ್ಟೇಜ್ ಪಂದ್ಯದ ಹೊತ್ತಲ್ಲೇ ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ.
Asia Cup: ಕ್ರಿಕೆಟ್ ಅಭಿಮಾನಿಗಳು ಪ್ರಸ್ತುತ ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ಗಾಗಿ ಕಾಯುತ್ತಿದ್ದಾರೆ. ಈ ಪಂದ್ಯದ ವೇಳೆ, ವಿಶ್ವದ ಇಬ್ಬರು ಅತ್ಯುತ್ತಮ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವಿನ ಬ್ಯಾಟಿಂಗ್ ಅಬ್ಬರವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಮಾರ್ಚ್ 2021ರಲ್ಲಿ ಭಾರತ ತಂಡದ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಹಿಂತಿರುಗಿ ನೋಡದೆ ಟೀಂ ಇಂಡಿಯಾ ಪರ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ಆರಂಭದಲ್ಲೂ ಅವರು 44 ಎಸೆತಗಳಲ್ಲಿ 76 ರನ್ ಗಳಿಸಿದ್ದರು.
ವ್ಯಾಪಕ ಟೀಕೆ ಮತ್ತು ಟ್ರೋಲ್ಗಳ ನಡುವೆ ದೇಶ-ವಿದೇಶದ ಸ್ಟಾರ್ ಆಟಗಾರರು ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದ್ದಾರೆ. ಕಿಂಗ್ ಕೊಹ್ಲಿ ಮತ್ತೆ ಕಮ್ಬ್ಯಾಕ್ ಮಾಡುತ್ತಾರೆಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 16 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಇದೀಗ ಪಾಕಿಸ್ತಾನದ ಬ್ಯಾಟ್ಸ್ಮನ್ ಮತ್ತು ನಾಯಕ ಬಾಬರ್ ಅಜಮ್ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆ ಇರುವ ಚಿತ್ರವನ್ನು ಅಜಮ್ ಪೋಸ್ಟ್ ಮಾಡಿದ್ದರು. "ಸದೃಢವಾಗಿರಿ, ಇದೂ ಸಹ ಕಳೆದುಹೋಗುತ್ತದೆ" ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಬಾಬರ್ ಆಜಂ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಜಗತ್ತು ಕಂಡಂತಹ ಶ್ರೇಷ್ಠ ಆಟಗಾರ, ಅವರು ತಮ್ಮ ಕ್ರಿಕೆಟ್ ನ ಅವಧಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ.ಇದೆ ಸಂದರ್ಭದಲ್ಲಿ ಪಾಕಿಸ್ತಾನದ ಬಾಬರ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.ಈಗ ಅವರು ನೀಡುತ್ತಿರುವ ನಿರಂತರ ಪ್ರದರ್ಶನವು ಈಗ ಅವರನ್ನು ಕೊಹ್ಲಿ ಜೊತೆ ಹೋಲಿಕೆ ಮಾಡುವಂತೆ ಮಾಡಿದೆ.
ಈ ವರ್ಷ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಭಾರತದ ಉಮ್ರಾನ್ ಮಲಿಕ್ ಮುಖಾಮುಖಿಯಾಗಬಹುದು.
ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ಐಸಿಸಿಯ ಟೆಸ್ಟ್ ಕ್ರಿಕೆಟ್ ಆಲ್ ರೌಂಡರ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಮರಳಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನ ತಂಡವು ಅಮೋಘ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆಯೇ ಅಳಲು ಶುರು ಮಾಡಿದ್ದಾರೆ.
ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ದ ಪಾಕ್ ತಂಡವು 10 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: ICC T20 World Cup 2021: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪ್ರಕಟಗೊಂಡಿದೆ ಈ ಭವಿಷ್ಯವಾಣಿ, ಈ ತಂಡದ ಗೆಲುವು ನಿಶ್ಚಿತ!
T20 WORLD CUP 2021: ಈ ಪಂದ್ಯ ಸಾಮಾನ್ಯ ಪಂದ್ಯಗಳಂತಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ವಿರಾಟ್ ಕೊಹ್ಲಿ ಕೂಡ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪುನರುಚ್ಛರಿಸಿದ್ದಾರೆ. ಆದರೆ, ಈ ಪಂದ್ಯವು ಸಾಮಾನ್ಯ ಪಂದ್ಯವಲ್ಲ ಎಂದು ಸ್ವತಃ ವಿರಾಟ್ ಗೊತಿರಬೇಕು. ಸಹಜವಾಗಿ, ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಶೇ. 100 ರಷ್ಟು ಗೆಲುವು ದಾಖಲಿಸಿದ ದಾಖಲೆಯನ್ನು ಹೊಂದಿದೆ.
ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಸುದೀರ್ಘ ಆಳ್ವಿಕೆಯನ್ನು ಬುಧವಾರ ಅವರ ಪಾಕಿಸ್ತಾನದ ಸಹವರ್ತಿ ಬಾಬರ್ ಅಜಮ್ ಕೊನೆಗೊಳಿಸಿದರು.ಆ ಮೂಲಕ ಟಾಪ್ ರ್ಯಾಂಕ್ ಗಳಿಸಿದ ನಾಲ್ಕನೇ ಪಾಕಿಸ್ತಾನದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಅವರು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಡುವೆ ಸಾಮ್ಯತೆಯನ್ನು ಕಾಣುತ್ತಿದ್ದಾರೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.