Viral Video: ಭಾರತದ ವಿರುದ್ಧ ಪಾಕ್ ಗೆದ್ದ ಬಳಿಕ ಅಳಲು ಶುರು ಮಾಡಿದ ವ್ಯಕ್ತಿ..!

ಭಾರತದ ವಿರುದ್ಧ ಪಾಕಿಸ್ತಾನ ತಂಡವು ಅಮೋಘ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆಯೇ ಅಳಲು ಶುರು ಮಾಡಿದ್ದಾರೆ. 

Written by - Puttaraj K Alur | Last Updated : Oct 25, 2021, 12:50 PM IST
  • ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು 10 ವಿಕೆಟ್ ಗಳ ಹೀನಾಯ ಸೋಲು ಕಂಡ ಟೀಂ ಇಂಡಿಯಾ
  • ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದಂತೆಯೇ ಮುಗಿಲುಮುಟ್ಟಿದ ಪಾಕ್ ಅಭಿಮಾನಿಗಳ ಸಂಭ್ರಮ
  • ಮೈದಾನದಲ್ಲಿಯೇ ಕುಳಿತು ಆನಂದಭಾಷ್ಪ ಸುರಿಸಿದ ಪಾಕ್ ನಾಯಕ ಬಾಬರ್ ಅಜಂ ತಂದೆ
Viral Video: ಭಾರತದ ವಿರುದ್ಧ ಪಾಕ್ ಗೆದ್ದ ಬಳಿಕ ಅಳಲು ಶುರು ಮಾಡಿದ ವ್ಯಕ್ತಿ..!  title=
ಮೈದಾನದಲ್ಲಿಯೇ ಆನಂದಭಾಷ್ಪ ಸುರಿದ ಬಾಬರ್ ಅಜಂ ತಂದೆ

ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್(T20 World Cup 2021) ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತವು 10 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಮೊದಲ ಬಾರಿಗೆ ವಿಶ್ವಕಪ್‌ನಂತಹ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೋಲು ಕಂಡಿದೆಪಾಕ್ ನಾಯಕ ಬಾಬರ್ ಅಜಂ (68) ಮತ್ತು ಮೊಹಮ್ಮದ್ ರಿಜ್ವಾನ್ (79) ಭರ್ಜರಿ ಅರ್ಧಶತಕ ಬಾರಿಸಿ ತಮ್ಮ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು. ಭಾರತದ ವಿರುದ್ಧ ಪಾಕಿಸ್ತಾನವು ಐತಿಹಾಸಿಕ ವಿಜಯ ಸಾಧಿಸಿದ ಬಳಿಕ ದುಬೈನ ಕ್ರೀಡಾಂಗಣದಲ್ಲಿ ವ್ಯಕ್ತಿಯೊಬ್ಬರು ಅಳಲು ಪ್ರಾರಂಭಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತ್ತು. ಭಾರತ ಪರ ನಾಯಕ ವಿರಾಟ್ ಕೊಹ್ಲಿ(57) ಹಾಗೂ ರಿಷಭ್ ಪಂತ್(39) ಗಳಿಸಿ ಮಿಂಚಿದ್ದರು. ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಪಾಕಿಸ್ತಾನ(India Vs Pakistan)ದ ಪಾಲಿಗೆ ಇದು ಐತಿಹಾಸಿಕ ಗೆಲುವಾಗಿದೆ. ಟೀಂ ಇಂಡಿಯಾದ ಬೌಲರ್ ಗಳ ಬೆವರಿಳಿಸಿದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಮೊದಲ ವಿಕೆಟ್ ಗೆ ಮುರಿಯದ ಜೊತೆಯಾಟವಾಡುವ ಮೂಲಕ ತಂಡಕ್ಕೆ ಅವಿಸ್ಮರಣೀಯ ಗೆಲುವು ದಾಖಲಿಸಿದರು.

ಇದನ್ನೂ ಓದಿ: T20 World Cup: ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆಯೇ ಹಾರ್ದಿಕ್ ಪಾಂಡ್ಯ? 

ಭಾರತದ ವಿರುದ್ಧ ಪಾಕಿಸ್ತಾನ ತಂಡವು ಅಮೋಘ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆಯೇ ಅಳಲು ಶುರು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾನಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ಅಂತೀರಾ..? ಅವರು ಬೇರಾರೂ ಅಲ್ಲ. ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಂ(Babar Azam) ತಂದೆ ಅಜಂ ಸಿದ್ದಕ್ಕಿ. ಹೌದು, ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಪದೇ ಪದೇ ಸೋಲು ಕಾಣುತ್ತಿದ್ದ ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಂ ನಾಯಕತ್ವದಲ್ಲಿ ಐತಿಹಾಸಿಕ ಗೆಲುವು ದಕ್ಕಿದೆ. ಇದೇ ಖುಷಿಯಲ್ಲಿ ಬಾಬರ್ ಅಜಂ ತಂದೆ ಅಜಂ ಸಿದ್ದಕಿ ಕ್ರೀಡಾಂಗಣದಲ್ಲಿಯೇ ಆನಂದಭಾಷ್ಪ ಹರಿಸಿದ್ದಾರೆ.

ಭಾರತದ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ(Historic Win) ಮೈದಾನ ಸೇರಿ ಪಾಕ್ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಈ ವೇಳೆ ಮೈದಾನದಲ್ಲಿಯೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಬಾಬರ್ ಅಜಂ ತಂದೆ ಗೆಲುವಿನ ರನ್ ಬರುತ್ತಿದ್ದಂತೆಯೇ ಚಿಕ್ಕಮಗುವಿನಂತೆ ಅಳಲು ಶುರುಮಾಡಿದರು. ಈ ವೇಳೆ ಅನೇಕ ಪಾಕಿಸ್ತಾನಿ ಅಭಿಮಾನಿಗಳು ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಅಲ್ಲದೆ ಅವರ ಕಣ್ಣೀರು ಒರೆಸಲು ಪ್ರಯತ್ನಿಸಿದ್ದಾರೆ. ಪಂದ್ಯ ಗೆದ್ದ ನಂತರ ಇಡೀ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಖುಷಿಯಿಂದ ಕೇಕೆ ಹಾಕಿದರು. ಅದ್ಭುತ ವಿಜಯದ ನಂತರ ಬಾಬರ್ ಅಜಂ ತಂದೆ(Babar Azam Father) ಭಾವುಕರಾಗಿ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: India vs Pakistan T20 World Cup: ನೋಬಾಲ್ ಗೆ ಔಟ್ ಆಗಿದ್ದ ಕೆ.ಎಲ್.ರಾಹುಲ್..! ಕಳಪೆ ಅಂಪೈರಿಂಗ್ ಗೆ ಅಭಿಮಾನಿಗಳ ಆಕ್ರೋಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News