ಏಷ್ಯಾ ಕಪ್ 2022: ಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಪ್ರಸ್ತುತ ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ಗಾಗಿ ಕಾಯುತ್ತಿದ್ದಾರೆ. ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇದೇ 28ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದ ವೇಳೆ, ವಿಶ್ವದ ಇಬ್ಬರು ಅತ್ಯುತ್ತಮ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಮಧ್ಯೆ, ವಿರಾಟ್ ಮತ್ತು ಬಾಬರ್ ಇಬ್ಬರಲ್ಲಿ ಏಷ್ಯಾದ ಶ್ರೇಷ್ಠ ಬ್ಯಾಟ್ಸ್ಮನ್ ಯಾರು? ಎಂಬ ಬಗ್ಗೆಯೂ ಹಲವರು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ಅಂಕಿ-ಅಂಶಗಳು ಏನು ಹೇಳುತ್ತೆ? ಇಲ್ಲಿದೆ ನೋಡಿ...
ಈ ವರ್ಷ ಟಿ20ಯಲ್ಲಿ ಉಭಯ ಆಟಗಾರರ ಪ್ರದರ್ಶನ ನೋಡಿದರೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಇಬ್ಬರೂ ಸಹ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಭಾರತ ಕ್ರಿಕೆಟ್ ತಂಡದ ರನ್ ಮಿಷನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಈ ವರ್ಷ 4 ಪಂದ್ಯಗಳಲ್ಲಿ ಕೇವಲ 81 ರನ್ ಗಳಿಸಿದ್ದರೆ, ಬಾಬರ್ 2022 ರಲ್ಲಿ ಒಂದು ಟಿ20 ಪಂದ್ಯವನ್ನು ಆಡಿದರು ಮತ್ತು ಅದರಲ್ಲಿ 66 ರನ್ ಗಳಿಸಿದರು. ಇದೀಗ, ಏಷ್ಯಾಕಪ್ನಲ್ಲಿ ವಿರಾಟ್ ಮರಳುವ ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ವಿರಾಟ್ ಎದುರಾಳಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿದ್ದಾರೆ ಎಂದು ಅಭಿಮಾನಿಗಳು ಭರವಸೆಯಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ- IND vs ZIM : ಇದೀಗ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮೇಲೆ ಕಣ್ಣು, ರಾಹುಲ್ ತಂಡದಲ್ಲಿ ಭಾರಿ ಬದಲಾವಣೆ
ಪಾಕಿಸ್ತಾನ ವಿರುದ್ಧ ವಿರಾಟ್ ದಾಖಲೆ :
ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಎಂದರೆ ವಿಶ್ವದಾದ್ಯಂತ ಭಾರೀ ಕುತೂಹಲ ಇದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತುರರಾಗಿ ಕಾದು ಕುಳಿತಿರುತ್ತದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಿದ ಏಕೈಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. ಪಾಕಿಸ್ತಾನ ವಿರುದ್ಧದ 7 ಟಿ20 ಪಂದ್ಯಗಳಲ್ಲಿ 77ರ ಸರಾಸರಿಯಲ್ಲಿ ವಿರಾಟ್ 311 ರನ್ ಗಳಿಸಿದ್ದು, ಈ ಅವಧಿಯಲ್ಲಿ 3 ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ.
ಭಾರತದ ವಿರುದ್ಧ ಬಾಬರ್ ಅಜಮ್ ದಾಖಲೆ:
ಬಾಬರ್ ಅಜಮ್ ಭಾರತದ ವಿರುದ್ಧ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನ ಪಂದ್ಯದಲ್ಲಿ ಬಾಬರ್ ಅಜಮ್ ಅಜೇಯ 68 ರನ್ ಗಳಿಸಿದರು. ಈ ಬಾರಿಯ ಏಷ್ಯಾಕಪ್ನಲ್ಲಿ ಬಾಬರ್ ಅವರ ರನ್ ತಡೆಯುವುದು ಟೀಂ ಇಂಡಿಯಾಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ- IND vs ZIM : ಮೂರನೇ ಏಕದಿನ ಪಂದ್ಯಕ್ಕೆ ಈ ಆಟಗಾರ ಎಂಟ್ರಿ, ಕ್ಯಾಪ್ಟನ್ ರಾಹುಲ್ ಕ್ಲೀನ್ ಸ್ವೀಪ್ ಕನಸು ನನಸು!
ವಿರಾಟ್ ಮತ್ತು ಬಾಬರ್ ಇಬ್ಬರಲ್ಲಿ ಏಷ್ಯಾದ ಶ್ರೇಷ್ಠ ಬ್ಯಾಟ್ಸ್ಮನ್ ಯಾರು? ಅಂಕಿ-ಅಂಶಗಳು ಏನು ಹೇಳುತ್ತೆ?
ಟಿ20 ಕ್ರಿಕೆಟ್ನಲ್ಲಿ ಒಟ್ಟಾರೆ ಪ್ರದರ್ಶನದ ಬಗ್ಗೆ ಹೇಳುವುದಾದರೆ, ವಿರಾಟ್ ಕೊಹ್ಲಿ ಬಾಬರ್ ಆಜಮ್ಗಿಂತ ಸ್ವಲ್ಪ ಮುಂದಿದ್ದಾರೆ. ವಿರಾಟ್ ಇಲ್ಲಿಯವರೆಗೆ 99 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು 3308 ರನ್ಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 50ಕ್ಕಿಂತ ಹೆಚ್ಚಿದೆ. ಅದೇ ಸಮಯದಲ್ಲಿ, ವಿರಾಟ್ 137 ರ ಶ್ರೇಷ್ಠ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಮಾಡಿರುವುದು ವಿಶೇಷ. ಬಾಬರ್ ಅಜಮ್ ಇಲ್ಲಿಯವರೆಗೆ ಒಟ್ಟು 74 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರ ಬ್ಯಾಟ್ನಿಂದ 2686 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 129 ಆಗಿದ್ದರೆ, ಅವರ ಬ್ಯಾಟಿಂಗ್ ಸರಾಸರಿ 45 ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.