ನವದೆಹಲಿ: ಟೀಂ ಇಂಡಿಯಾ ಉಪನಾಯಕ ಹಾಗೂ ಆರಂಭಿಕ ಆಟಗಾರ ಕನ್ನಡಿಗ ಕೆ. ಎಲ್. ರಾಹುಲ್ ಮತ್ತೊಂದು ಆಕರ್ಷಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ಟಿ-20 ಪಂದ್ಯಗಳಲ್ಲಿ ಅತಿ ವೇಗವಾಗಿ 1500 ರನ್ಸ್ ಬಾರಿಸಿದ ಕೊಹ್ಲಿ, ಫಿಂಚ್ ಹಾಗೂ ಬಾಬರ್ ಆಜಮ್ ಅವರ ಪಟ್ಟಿಗೆ ರಾಹುಲ್ ಎಂಟ್ರಿ ಹೊಡೆದಿದ್ದಾರೆ. ಏಕದಿನ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಕೆ.ಎಲ್. ರಾಹುಲ್, ಟಿ-20 ಸರಣಿಯ ಮೊದಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದಾರೆ. 40 ಎಸೆತಗಳಲ್ಲಿ ಒಟ್ಟು ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ರಾಹುಲ್ 51 ರನ್ಸ್ ಬಾರಿಸಿದ್ದಾರೆ.
ಇದನ್ನು ಓದಿ- ಈ ಭಾರತೀಯ ಆಟಗಾರ 'ದಿ ವಾಲ್' ರಾಹುಲ್ ದ್ರಾವಿಡ್ ಇದ್ದಂತೆ ಎಂದ ಕೈಫ್...!
ಈ ಅರ್ಧಶತಕದಿಂದ ರಾಹುಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರ 1500 ಕ್ಕೂ ಹೆಚ್ಚು ರನ್ಸ್ ಗಳಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಹುಲ್ (KL Rahul) ಗೂ ಮೊದಲು ಕೊಹ್ಲಿ, ಫಿಂಚ್ ಮತ್ತು ಬಾಬರ್ ಅಜಮ್ ಒಟ್ಟು 39 ಇನ್ನಿಂಗ್ಸ್‌ಗಳಲ್ಲಿ 1500 ರನ್ ಗಳಿಸಿದ್ದಾರೆ.
ಟಿ-20 ಸರಣಿಯಲ್ಲಿ ಕೆ. ಎಲ್. ರಾಹುಲ್ ಅವರ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಪರಿವರ್ತನೆ ಮಾಡಲಾಗಿದೆ. ಏಕದಿನ ಸರಣಿಯಲ್ಲಿ ರಾಹುಲ್ ಮಿಡ್ ಆರ್ಡರ್ ನಲ್ಲಿ ಬ್ಯಾಟಿಂಗ್ ಗೆ ಇಳಿಯುತ್ತಿದ್ದರು. ಆದರೆ, ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಶಿಖರ್ ಧವನ್ ಜೊತೆಗೆ ಆರಂಭಿಕ ಆಟಗಾರನಾಗಿ ಮೈದಾನಕ್ಕೆ ಎಂಟ್ರಿ ನೀಡಿದ್ದಾರೆ. ಆದರೆ, ಅವರ ಈ ಪಾರ್ಟ್ನರ್ ಶಿಪ್ ಹೆಚ್ಚು ಕಾಲ ಉಳಿಯಲಿಲ್ಲ. ರಾಹುಲ್ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇದನ್ನು ಓದಿ- Australia vs India, 1st T20I : ಆಸಿಸ್ ವಿರುದ್ಧ ಭಾರತಕ್ಕೆ 11 ರನ್ ಗಳ ಜಯ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 2-1ರ ಅಂತರದಿಂದ ಸೋಲನ್ನು ಅನುಭವಿಸಿದೆ.