"ನನ್ನ ಮತ್ತು ಲೀಲಾವತಿ ಅವರ ಪರಿಚಯ 40 ವರ್ಷಗಳಷ್ಟು ಹಳೆಯದು. ದುಡ್ಡಿರುವ ಮನುಷ್ಯ ದಾನ- ಧರ್ಮ ಮಾಡಬಹುದು, ಆದರೆ ಆರ್ಥಿಕವಾಗಿ ಶಕ್ತಿ ಇಲ್ಲದ ಅವರು ಸಮಾಜಕ್ಕೆ ಮತ್ತು ಮೂಕ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ಪ್ರಾಥಮಿಕ ಆಸ್ಪತ್ರೆ ಮತ್ತು ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಿದ್ದು ದೊಡ್ಡ ವಿಷಯ. ಈ ಮೂಲಕ ಅವರು ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಕನ್ನಡ ಚಿತ್ರರಂಗ ಕಂಡಂತಹ ಬಹುಮುಖ ಪ್ರತಿಭೆಯಾಗಿದ್ದ ನಟಿ ಲೀಲಾವತಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Actress Leelavathi : ಹಿರಿಯ ನಟಿ ಲೀಲಾವತಿಯವರು ಇನ್ನಿಲ್ಲ. ಕನ್ನಡ ಸಿನಿ ಅಭಿಮಾನಿಗಳ ಭಾಗ್ಯ ದೇವತೆ, ಅಪಾರ ಅಭಿಮಾನಿಗಳನ್ನು ಅಗಲಿ ಕಣ್ಮರೆಯಾಗಿದ್ದಾರೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೌತ್ ಸಿನಿರಂಗದ ದಿಗ್ಗಜ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಲೀಲಮ್ಮ, ತಮ್ಮ ಮಗನ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಮಾತು ಸಧ್ಯ ನೆನಪಾಗುತ್ತದೆ.
Kannada Legendary actress Leelavathi: ಲೀಲಾವತಿ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ.. ಕನ್ನಡದ ಮಾಂಗಲ್ಯ ಯೋಗ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡವರು ನಟಿ ಲೀಲಾವತಿ.. ಹಾಗಾದರೆ ಇದೀಗ ಸ್ಯಾಂಡಲ್ವುಡ್ನ ಹಿರಿಯ ನಟಿಯ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿಯೋಣ..
ದಕ್ಷಿಣ ಭಾರತೀಯ ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ನಟಿ ಲೀಲಾವತಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಅಸುನೀಗಿದ್ದಾರೆ.ಸುಮಾರು 200ಕ್ಕೂ ಸಿನಿಮಾಗಳು, ನಾಟಕಗಳಲ್ಲಿ ನಟಿಸಿದ್ದ ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು.
Kannada Actress Leelavati Death: ಸುಮಾರು 6 ದಶಕಗಳ ವೃತ್ತಿಜೀವನದಲ್ಲಿ ಲೀಲಾವತಿ ಅವರು 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
Actress Leelavathi : ಹಿರಿಯ ನಟಿ ಲೀಲಾವತಿ ಅವರಿಂದು ಇಹಲೋಕ (85) ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಕನ್ನಡ ಕರಾವಳಿಯ ಹಿರಿಯ ನಟಿ ಇಂದು ಅಪಾರ ಅಭಿಮಾನಿಗಳನ್ನ ಒಂಟಿ ಮಾಡಿ ಸ್ವರ್ಗಸ್ಥರಾಗಿದ್ದಾರೆ. ಲೀಲಾವತಿಯವರ ಕುರಿತು ಎಷ್ಟು ಹೇಳಿದರೂ ಕಡಿಮೆ.. ಬನ್ನಿ ಲೀಲಮ್ಮ ನಡೆದು ಬಂದ ಹಾದಿಯನೊಮ್ಮೆ ನೋಡೋಣ..
ವರನಟ ಡಾ.ರಾಜಕುಮಾರ್ ಜೊತೆ 36 ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಅವರಿಗೆ ದೊರೆತ ಪ್ರಮುಖ ಪ್ರಶಸ್ತಿಗಳ ಮಾಹಿತಿ ಇಲ್ಲಿದೆ ನೋಡಿ.
'ನಿಮ್ಮ ಮುಖದಲ್ಲಿನ ಕಳೆ ಅತ್ಯಂತ ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು ಎಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಎಂ.ಲೀಲಾವತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಿದ ಮಾತುಗಳಿವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.