Leelavathi : ಚಂದನವನದ ನಗುಮೊಗದ ʼಲೀಲಮ್ಮʼನವರ ಅಪರೂಪದ ಫೋಟೋಸ್‌ ಇಲ್ಲಿವೆ..!

Actress Leelavathi : ಹಿರಿಯ ನಟಿ ಲೀಲಾವತಿ ಅವರಿಂದು ಇಹಲೋಕ (85) ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಕನ್ನಡ ಕರಾವಳಿಯ ಹಿರಿಯ ನಟಿ ಇಂದು ಅಪಾರ ಅಭಿಮಾನಿಗಳನ್ನ ಒಂಟಿ ಮಾಡಿ ಸ್ವರ್ಗಸ್ಥರಾಗಿದ್ದಾರೆ. ಲೀಲಾವತಿಯವರ ಕುರಿತು ಎಷ್ಟು ಹೇಳಿದರೂ ಕಡಿಮೆ.. ಬನ್ನಿ ಲೀಲಮ್ಮ ನಡೆದು ಬಂದ ಹಾದಿಯನೊಮ್ಮೆ ನೋಡೋಣ..

1 /9

ಹಿರಿಯ ನಟಿ ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ.   

2 /9

ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೀಲಮ್ಮ, ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಾಂತಾ ತುಕಾರಾಂ ಚಿತ್ರಗಳ ನಟನೆಯ ಮೂಲಕ ಕನ್ನಡಿಗರ ಮನದಲ್ಲಿ ಸ್ಮರಣೀಯ ಸ್ಥಾನ ಪಡೆದಿದ್ದಾರೆ.  

3 /9

1999-2000 ಸಾಲಿನಲ್ಲಿ ಕನ್ನಡ ಚಲನಚಿತ್ರರಂಗದ ಜೀವಮಾನ ಸಾಧನೆಗೆ ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ 'ಡಾ.ರಾಜಕುಮಾರ್ ಪ್ರಶಸ್ತಿಯನ್ನು ಲೀಲಾವತಿಯವರಿಗೆ ನೀಡಿ ಗೌರವಿಸಲಾಯಿತು.  

4 /9

ಲೀಲಾವತಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1937ರಲ್ಲಿ ಜನಿಸಿದರು. ವಿಪರ್ಯಾಸ ಅಂದ್ರೆ ತಮ್ಮ 6ನೇ ವಯಸ್ಸಿನಲ್ಲಿಯೇ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು.    

5 /9

ಲೀಲಾವತಿಯವರು ಚಿಕ್ಕಂದಿನಿಂದಲೇ ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದರು.  

6 /9

ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರು.   

7 /9

1949ರಲ್ಲಿ ಶಂಕರ್ ನಾಗ್ ಅಭಿನಯದ ನಾಗಕನ್ನಿಕೆ ಸಿನಿಮಾದ ಮೂಲಕ ನಟಿ ಲೀಲಾವತಿ ಅವರು ಚಂದನವನಕ್ಕೆ ಕಾಲಿಟ್ಟರು.  

8 /9

'ಮಾಂಗಲ್ಯ ಯೋಗ' ಲೀಲಾವತಿಯವರು ಸ್ವತಂತ್ರ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರವಾಗಿದೆ. ರಣಧೀರ ಕಂಠೀರವ ಸಿನಿಮಾದಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಅವರೊಂದಿಗೆ ಲೀಲಾವತಿಯವರು ನಟಿಸಿದರು.  

9 /9

70ರ ದಶಕದ ಬಳಿಕ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ನಟಿಸಿದ್ದರು. ನಾಗರಹಾವು, ಭಕ್ತ ಕುಂಬಾರ, ಗೆಜ್ಜೆ ಪೂಜೆ, ಸಿಪಾಯಿ ರಾಮು, ಮುಂತಾದ ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.