ವಯನಾಡ್'ನಿಂದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ದೇಶಕ್ಕೆ ಯಾವ ಸಂದೇಶ ನೀಡಲು ಹೊರಟಿದೆ? ಒಂದು ರೀತಿಯಲ್ಲಿ ಸಿಪಿಐ ಮತ್ತು ಎಡಪಂಥೀಯರ ವಿರುದ್ಧ ಹೋರಾಡಲು ರಾಹುಲ್ ಗಾಂಧಿಯನ್ನು ಕಣಕ್ಕಿಳಿಸುವ ಮೂಲಕ ಮುಜುಗರ ಉಂಟುಮಾಡಿದೆ ಭಾರತ್ ಕಮ್ಯೂನಿಸ್ಟ್ ಪಕ್ಷದ ನಾಯಕ ಡಿ.ರಾಜಾ ಹೇಳಿದ್ದಾರೆ.
ವೈ.ಎಸ್.ರಾಜಶೇಖರ ರೆಡ್ಡಿ ನಿಧನದ ಬಳಿಕ ತಮ್ಮ ಬಳಿ ಬಂದಿದ್ದ ಜಗನ್ ಮೋಹನ್ ರೆಡ್ಡಿ, ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಮಾಡುವುದಾದರೆ 1500 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು ಎಂದು ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತೀ ಶ್ರೀಮಂತ ಜನರ ಸಾಲ ಮನ್ನಾ ಮಾಡಲು ಸಾಧ್ಯವಾಗಿರುವಾಗ, ಕಾಂಗ್ರೆಸ್ ದೇಶದ ಶೇ.20 ಕಡು ಬಡ ಕುಟುಂಬಗಳಿಗೆ ವಾರ್ಷಿಕವಾಗಿ 72 ಸಾವಿರ ರೂ. ಹಣ ನೀಡುವುದು ಖಂಡಿತಾ ಸಾಧ್ಯ ಎಂದು ರಾಹುಲ್ ಹೇಳಿದ್ದಾರೆ.
ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ 16 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಆದರೆ ವಯನಾಡ್ ಮತ್ತು ವಡಕರ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಲಾಗಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದು, ಮೊದಲ ಜಂಟಿ ರ್ಯಾಲಿ ಏಪ್ರಿಲ್ 7ರಂದು ಮುಸ್ಲಿಂ ಸಮುದಾಯದ ಪ್ರಧಾನವಾಗಿರುವ ಸಹರಾನ್ಪುರದ ದೇವಬಂದ್ನಲ್ಲಿ ನಡೆಯಲಿದೆ.
ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದ್ದು, 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಎಲ್ಲಾ ಹಂತಗಳ ಚುನಾವಣೆಯ ಮತಎಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ.
ನರೇಂದ್ರ ಮೋದಿ ತಾನು ದೇಶದ ಚೌಕಿದಾರ್ ಎನ್ನುತ್ತಾರೆ. ಆದರೆ ಮೋದಿ ಅನಿಲ್ ಅಂಬಾನಿಯ ಚೌಕಿದಾರ್. ಮೋದಿ ಎಲ್ಲಿಗೆ ಹೋದರೂ ಅಂಬಾನಿ, ಅದಾನಿ ಜೊತೆಗಿರುತ್ತಾರೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.