ಲೋಕಸಭಾ ಚುನಾವಣೆ 2019: ಮತಯಂತ್ರಗಳಲ್ಲಿ ಇರಲಿದೆ ಅಭ್ಯರ್ಥಿಗಳ ಫೋಟೋ!

ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದ್ದು, 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಎಲ್ಲಾ ಹಂತಗಳ ಚುನಾವಣೆಯ ಮತಎಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ. 

Last Updated : Mar 10, 2019, 07:15 PM IST
ಲೋಕಸಭಾ ಚುನಾವಣೆ 2019: ಮತಯಂತ್ರಗಳಲ್ಲಿ ಇರಲಿದೆ ಅಭ್ಯರ್ಥಿಗಳ ಫೋಟೋ! title=

ನವದೆಹಲಿ: ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ದಿನಾಂಕ ಕಡೆಗೂ ಹೊರಬಿದ್ದಿದೆ. ಇದೇ ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದ್ದು, 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಎಲ್ಲಾ ಹಂತಗಳ ಚುನಾವಣೆಯ ಮತಎಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂ ಮತಯಂತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಫೋಟೋ ಇರುವುದು ವಿಶೇಷವಾಗಿದೆ. ಲೋಕಸಭಾ ಚುನಾವಣೆಗಳಿಗಾಗಿ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಿದ್ದು, ದೇಶಾದ್ಯಂತ 90 ಕೋಟಿ ಮತದಾರರಿದ್ದಾರೆ.  ಇವರಲ್ಲಿ ಈ ಬಾರಿ 8.4 ಕೋಟಿ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷತೆ
* ದೇಶಾದ್ಯಂತ 10 ಲಕ್ಷ ಮತಗಟ್ಟೆಗಳು 
*  8.4 ಕೋಟಿ ಹೊಸ ಮತದಾರರ ಸೇರ್ಪಡೆ. ಇವರಲ್ಲಿ 18 ರಿಂದ 19 ವರ್ಷ ವಯಸ್ಸಿನ ಮೊದಲ ಮತದಾರರು ಹೊಸದಾಗಿ 1.50 ಕೋಟಿ ಮತದಾರರು ಸೇರ್ಪಡೆ. 
* ಒಟ್ಟಾರೆ ದೇಶಾದ್ಯಂತ 90 ಕೋಟಿ ಮತದಾರರು 
* ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, 11ಕ್ಕೂ ಅಧಿಕ ಗುರುತಿನ ಚೀಟಿ ಬಳಸಿ ಮತದಾನಕ್ಕೆ ಅವಕಾಶ
* 10 ಲಕ್ಷಕ್ಕೂ ಅಧಿಕ ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆಗಳ ಸುರಕ್ಷತೆಗೆ ಕ್ರಮ
* ಎಲ್ಲಾ ಮತಕೇಂದ್ರಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ.
* ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ
* ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್ ಪಿಎಫ್ ಸಿಬ್ಬಂದಿಗಳ ನಿಯೋಜನೆ
* ಮತದಾನ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರ ತನಕ ಧ್ವನಿವರ್ಧಕಗಳ ನಿಷೇಧ.
* 24 ಗಂಟೆಗಳ ಕಾಲ ನಿರ್ವಹಿಸುವ ಚುನಾವಣಾ ಆಯೋಗದ ಸಹಾಯವಾಣಿ ಆರಂಭ-ಹೆಲ್ಪ್ ಲೈನ್ ಸಂಖ್ಯೆ-1950
*  ನೀತಿ ಸಂಹಿತೆ ಉಲ್ಲಂಘನೆಯಾದರೆ ಮೊಬೈಲ್ ಆಪ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ (ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಪ್ರಯೋಗವಾಗಿತ್ತು) 
* 100 ನಿಮಿಷಗಳಲ್ಲಿ ದೂರುದಾರರಿಗೆ ಅಧಿಕಾರಿಗಳಿಂದ ಕ್ರಮಕೈಗೊಂಡ ಬಗ್ಗೆ ಮಾಹಿತಿ 
* ಮತದಾನ ಮಾಡುವ ದಿವ್ಯಾಂಗರಿಗೆ ವಿಶೇಷ ಸೌಲಭ್ಯ: ನೋಂದಣಿ ಮಾಡಲು ಆಪ್ 
* ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜಾಹಿರಾತು 
* ಪರಿಸರ ವಿರೋಧಿ ವಸ್ತುಗಳು ಪ್ರಚಾರಕ್ಕೆ ಬಳಕೆ ಮಾಡುವಂತಿಲ್ಲ.
 

Trending News