ವಿಶ್ವಕಪ್‌ನಲ್ಲಿ ಫಿಟ್ ಆಗಿರಲು ಈ ಆಟಗಾರ ಬಳಸಿದ ಟ್ರಿಕ್‌ ಇದು.. ಸಂಪೂರ್ಣ ರಹಸ್ಯ ಬಯಲಾಗಿದೆ!

World Cup 2023 : ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದೆ. ಈ ಐಸಿಸಿ ಟೂರ್ನಿಯಲ್ಲಿ ಹಲವು ಆಟಗಾರರು ಗಾಯಗೊಂಡಿದ್ದರು. ಈ ನಡುವೆ ಆಸ್ಟ್ರೇಲಿಯಾದ ಸ್ಟಾರ್‌ ಬ್ಯಾಟ್ಸ್‌ಮನ್ ಫಿಟ್ ಆಗಿರಲು ವಿಶೇಷ ಪ್ಲ್ಯಾನ್‌ ಮಾಡಿದ್ದಾರೆ.

Written by - Chetana Devarmani | Last Updated : Nov 1, 2023, 04:52 PM IST
  • ಏಕದಿನ ವಿಶ್ವಕಪ್ 2023
  • ಐಸಿಸಿ ಟೂರ್ನಿಯ ಅಚ್ಚರಿಯ ಸಂಗತಿ
  • ಮಾರ್ಕಸ್ ಸ್ಟೊಯಿನಿಸ್ ಫಿಟ್ನೆಸ್‌ ಡಯಟ್‌
ವಿಶ್ವಕಪ್‌ನಲ್ಲಿ ಫಿಟ್ ಆಗಿರಲು ಈ ಆಟಗಾರ ಬಳಸಿದ ಟ್ರಿಕ್‌ ಇದು.. ಸಂಪೂರ್ಣ ರಹಸ್ಯ ಬಯಲಾಗಿದೆ!  title=

Marcus Stoinis Diet Plan : ಏಕದಿನ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ಮುಂದುವರೆದಿದೆ. ಈ ಐಸಿಸಿ ಟೂರ್ನಿಯ ವೇಳೆ ಹಲವು ಆಟಗಾರರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಲಹಿರು ಕುಮಾರರಂತಹ ಇನ್ ಫಾರ್ಮ್ ಆಟಗಾರರನ್ನು ಸಹ ಹೊರಗಿಡಬೇಕಾಯಿತು. ಈ ಮಧ್ಯೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೊಯಿನಿಸ್ ಫಿಟ್ ಆಗಿರಲು ವಿಶೇಷ ಪ್ಲ್ಯಾನ್‌ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರು ತಮ್ಮ ಆಹಾರದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಅವರು ವಿಶ್ವಕಪ್ ಸಮಯದಲ್ಲಿ ತಮ್ಮ ವೈಯಕ್ತಿಕ ಅಡುಗೆಯವರೊಂದಿಗೆ ಭಾರತದಾದ್ಯಂತ ಪ್ರಯಾಣಿಸುತ್ತಿದ್ದರು. ಇದರಿಂದ ಅವರು ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಪಡೆಯಬಹುದು. 34 ವರ್ಷದ ಸ್ಟೊಯಿನಿಸ್, ಪ್ರೋಟೀನ್‌ನೊಂದಿಗೆ ಬೇಯಿಸಿದ ಓಟ್ಸ್ ಅನ್ನು ಒಳಗೊಂಡಿರುವ ಹೆಚ್ಚಿನ ಕೊಬ್ಬು, ಕಡಿಮೆ ಕಾರ್ಬೋಹೈಡ್ರೇಟ್ ಡಯಟ್‌ ಪ್ಲ್ಯಾನ್‌ನಲ್ಲಿದ್ದಾರೆ. ವರದಿಯ ಪ್ರಕಾರ, ಮುಂಬೈ ಮೂಲದ ಕೋಚ್ ವೆಲ್ಟನ್ ಸಲ್ಡಾನಾ ಅವರು ಫ್ರೆಂಚ್ ಅಡುಗೆಯಲ್ಲಿ ಪರಿಣತರಾಗಿದ್ದಾರೆ, ಅವರು ವಿಶ್ವಕಪ್‌ಗಾಗಿ ಸ್ಟೊಯಿನಿಸ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾರೆ.

ಇದನ್ನೂ ಓದಿ : ಸಾರಾ ತೆಂಡೂಲ್ಕರ್ ಜೊತೆ ಶುಭ್ಮನ್ ಗಿಲ್ ಡೇಟಿಂಗ್! ಮಾಲ್’ನಲ್ಲಿ ಕಾಣಿಸಿಕೊಂಡ ಪ್ರೇಮಪಕ್ಷಿಗಳ ವಿಡಿಯೋ ವೈರಲ್ 

ವೆಲ್ಟನ್ ಆಸ್ಟ್ರೇಲಿಯನ್ ತಂಡದ ಅಡುಗೆಮನೆಯಲ್ಲಿ ಸ್ಟೊಯಿನಿಸ್‌ಗಾಗಿ ವಿಶೇಷ ಆಹಾರವನ್ನು ತಯಾರಿಸುತ್ತಾರೆ. ಪಾಡ್‌ಕ್ಯಾಸ್ಟ್‌ ಒಂದರಲ್ಲಿ ಸ್ಟೊಯಿನಿಸ್, 'ಹಲವು ಭಾರತೀಯ ಆಟಗಾರರು ಇದನ್ನು ಮಾಡುತ್ತಾರೆ ಮತ್ತು ನಾನು ಅಲ್ಲಿಂದ ಈ ಆಲೋಚನೆಯನ್ನು ಪಡೆದುಕೊಂಡಿದ್ದೇನೆ. ನನ್ನ ಆಹಾರ ಪದ್ಧತಿಯ ಬಗ್ಗೆ ನಾನು ತುಂಬಾ ಶಿಸ್ತುಬದ್ಧವಾಗಿದ್ದೇನೆ ಎಂದಿದ್ದಾರೆ.' ಆಸ್ಟ್ರೇಲಿಯನ್ ತಂಡವು ತನ್ನದೇ ಆದ ಅಡುಗೆಯನ್ನು ಹೊಂದಿದ್ದರೂ, ಸ್ಟೊಯಿನಿಸ್ ತನ್ನ ವೈಯಕ್ತಿಕ ಬಾಣಸಿಗನನ್ನು ಇಟ್ಟುಕೊಂಡಿದ್ದಾರೆ. 

ಅವರು ಬೆಳ್ಳುಳ್ಳಿ ನಾನ್ ತಿನ್ನುವುದಿಲ್ಲ ಎಂದು ವರದಿ ಹೇಳಿದೆ. ಗ್ಲುಟನ್ ಮುಕ್ತ ಬನಾನಾ ಬ್ರೆಡ್ ಮತ್ತು ಹುರಿದ ಹೂಕೋಸು ಭರ್ತಾ ತಿನ್ನುವರು. ಅವರು ಹುರಿದ ಬಟರ್ ಚಿಕನ್ ಅನ್ನು ಸಹ ತಿನ್ನುತ್ತಾರೆ. 

ಇದನ್ನೂ ಓದಿ : ಶಮಿ ಪತ್ನಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಕೆಂಡಾಮಂಡಲವಾದ ಫ್ಯಾನ್ಸ್! ಏನಿದೆ ಆ ಪೋಸ್ಟ್ ನಲ್ಲಿ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News