RTE ವಸ್ತುಸ್ಥಿತಿ ತಿಳಿಸುವ "ಶಾಲಾ ಸಮೀಕ್ಷಾ ವರದಿ" ಬಿಡುಗಡೆಗೊಳಿಸಿದ SIO

ಶಿಕ್ಷಣ ಹಕ್ಕು ಕಾಯ್ದೆ (RTE) 2009ರ ಮಾನದಂಡಗಳಿಗೆ ಸಂಬಂಧಿಸಿದಂತೆ ರಾಜ್ಯದ ಶಾಲೆಗಳ ಪ್ರಸ್ತುತ ವಸ್ತುಸ್ಥಿತಿ ತಿಳಿಯಲು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಶಿಫಾರಸು ಮತ್ತು ಸಲಹೆಗಳನ್ನು ನೀಡುವ ಉದ್ದೇಶದಿಂದ ಎಸ್ಐಓ ಕರ್ನಾಟಕವು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ಶಾಲಾ ಸಮೀಕ್ಷೆಯನ್ನು ನಡೆಸಿತ್ತು.

Written by - Zee Kannada News Desk | Last Updated : Jun 15, 2024, 06:02 PM IST
    • ಎಸ್ಐಓ ಕರ್ನಾಟಕದಿಂದ ಪ್ರಕಟವಾದ ಶಾಲಾ ಸಮೀಕ್ಷಾ ವರದಿ
    • ವಸ್ತುಸ್ಥಿತಿ ತಿಳಿಯಲು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ
    • ಪರಿಣಿತರಿಂದ ಲೇಖನಗಳನ್ನು ಒಳಗೊಂಡ ಶಾಲಾ ಸಮೀಕ್ಷಾ ವರದಿಯನ್ನು ಬಿಡುಗಡೆ
RTE ವಸ್ತುಸ್ಥಿತಿ ತಿಳಿಸುವ "ಶಾಲಾ ಸಮೀಕ್ಷಾ ವರದಿ" ಬಿಡುಗಡೆಗೊಳಿಸಿದ SIO title=
School Survey Report

ಬೆಂಗಳೂರು: ಎಸ್ಐಓ ಕರ್ನಾಟಕದಿಂದ ಪ್ರಕಟವಾದ ಶಾಲಾ ಸಮೀಕ್ಷಾ ವರದಿಯನ್ನು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, CERT ಸಂಸ್ಥೆಯ ನಿರ್ದೇಶಕ ರೋಶನ್ ಮೊಹಿದ್ದೀನ್, ಎಸ್.ಐ.ಓ ಕರ್ನಾಟಕದ ರಾಜ್ಯಾಧ್ಯಕ್ಷ ಜೀಶಾನ್ ಆಖಿಲ್, ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಬಿಡುಗಡೆಗೊಳಿಸಿದರು.

ಶಿಕ್ಷಣ ಹಕ್ಕು ಕಾಯ್ದೆ (RTE) 2009ರ ಮಾನದಂಡಗಳಿಗೆ ಸಂಬಂಧಿಸಿದಂತೆ ರಾಜ್ಯದ ಶಾಲೆಗಳ ಪ್ರಸ್ತುತ ವಸ್ತುಸ್ಥಿತಿ ತಿಳಿಯಲು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಶಿಫಾರಸು ಮತ್ತು ಸಲಹೆಗಳನ್ನು ನೀಡುವ ಉದ್ದೇಶದಿಂದ ಎಸ್ಐಓ ಕರ್ನಾಟಕವು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ಶಾಲಾ ಸಮೀಕ್ಷೆಯನ್ನು ನಡೆಸಿತ್ತು. ಅದರ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ಶಿಕ್ಷಣ ತಜ್ಞರು/ವಿಷಯ ಪರಿಣಿತರಿಂದ ಲೇಖನಗಳನ್ನು ಒಳಗೊಂಡ ಶಾಲಾ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: 2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?

ಸಮೀಕ್ಷೆಯ ವಿಶಿಷ್ಟತೆ

ರಾಜ್ಯದ 19 ಜಿಲ್ಲೆಗಳಲ್ಲಿ ಒಟ್ಟು 151 ಶಾಲೆಗಳನ್ನು ಸಮೀಕ್ಷೆ ನಡೆಸಿದೆ. ಇದರಲ್ಲಿ 103- ನಗರ ಪ್ರದೇಶದ ಶಾಲೆಗಳು, 48- ಗ್ರಾಮೀಣ ಭಾಗದ ಶಾಲೆಗಳು, 119- ಸರ್ಕಾರಿ ಶಾಲೆಗಳು, 32- ಖಾಸಗಿ ಶಾಲೆಗಳು, 73- ಕನ್ನಡ ಮಾಧ್ಯಮ ಶಾಲೆಗಳು, 50- ಉರ್ದು ಮಾಧ್ಯಮದ ಶಾಲೆಗಳು, 21- ಇಂಗ್ಲೀಷ್ ಮಾಧ್ಯಮದ ಶಾಲೆಗಳು, 06- ಮರಾಠಿ ಮಾಧ್ಯಮದ ಶಾಲೆಗಳು, 01- ತೆಲುಗು ಮಾಧ್ಯಮದ ಶಾಲೆಗಳು ಒಳಗೊಂಡಿದೆ.

"ಶಾಲಾ ಸಮೀಕ್ಷಾ ವರದಿ"ಯ ಪ್ರಮುಖ ಅಂಶಗಳು.

1) 151 ಶಾಲೆಗಳಲ್ಲಿ 270 ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ, ಪ್ರತಿಯೊಂದು ಶಾಲೆಯಲ್ಲಿ ಕನಿಷ್ಠ 2 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ ಇದರಲ್ಲಿ ಬಹುತೇಕ ವಲಸೆ ಮತ್ತು ಕಾರ್ಮಿಕರ ಮಕ್ಕಳಾಗಿದ್ದಾರೆ.

2) 151 ಶಾಲೆಗಳಲ್ಲಿ ಕೇವಲ 70 ಶಾಲೆಗಳಲ್ಲಿ ಮಾತ್ರ ಶುದ್ಧ ಕುಡಿಯುವ, ನೀರಿನ ಸೌಲಭ್ಯವಿದೆ, 72 ಶಾಲೆಗಳು (24/7) ಸಾರ್ವಜನಿಕ ನೀರಿನ ವ್ಯವಸ್ಥೆಯ ಮೇಲೆಯೇ ಅವಲಂಬಿತವಿದೆ,09 ಶಾಲೆಗಳಲ್ಲಿ ಯಾವುದೇ ರೀತಿಯ ನೀರಿನ ಸೌಲಭ್ಯವಿಲ್ಲ.

3) 151 ಶಾಲೆಗಳಲ್ಲಿ 117 ರಲ್ಲಿ ಮಾತ್ರ ಪ್ರತ್ಯೇಕ ಶೌಚಾಲಯವಿದೆ, 34 ಶಾಲೆಗಳಲ್ಲಿ ಕೇವಲ ಬಾಲಕಿಯರಿಗೆ ಮಾತ್ರ ಶೌಚಾಲಯವಿದೆ, ಬಹುತೇಕ ಶೌಚಾಲಯಗಳು ತೀರಾ ಕಳಪೆ ಮಟ್ಟದಲ್ಲಿದ್ದು, ಬಾಲಕರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ.

4) 151 ಶಾಲೆಗಳಲ್ಲಿ 56 ಶಾಲೆಗಳಿಗೆ ಇಲಾಖೆ ವತಿಯಿಂದ ಬೋಧನಾ-ಕಲಿಕಾ ಉಪಕರಣ ಒದಗಿಸಲಾಗಿದೆ, ಉಳಿದ 95 ಶಾಲೆಗಳಲ್ಲಿ 75 ಶಾಲೆಯಲ್ಲಿ ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ಬೋಧನಾ-ಕಲಿಕಾ ಉಪಕರಣವನ್ನು ಖರೀದಿಸಿದ್ದಾರೆ, ಇದರಲ್ಲಿ 20 ಶಾಲೆಯಲ್ಲಿ ಶಿಕ್ಷಕರು ಬೋಧನಾ-ಕಲಿಕಾ ಉಪಕರಣವನ್ನು ಬಳಸದೇ ಪಾಠ ಮಾಡುತ್ತಿದ್ದಾರೆ.

3 ರಲ್ಲಿ 1 ಶಾಲೆಗೆ ಮಾತ್ರ ಇಲಾಖೆಯಿಂದ ಶಿಕ್ಷಕರಿಗೆ ಬೋಧನಾ ಕಲಿಕಾ ಉಪಕರಣವನ್ನು ನೀಡಲಾಗುತ್ತಿದೆ, ಈ ಹಿಂದೆ ಇಲಾಖೆಯೂ ಬೋಧನೋಪಕರಣ ಖರೀದಿಗಾಗಿ ಶಿಕ್ಷಕರಿಗೆ ತಿಂಗಳಿಗೆ 500 ರೂಪಾಯಿಯನ್ನು ನೀಡುತ್ತಿತ್ತು, ಇದೀಗ ಅದು ಸ್ಥಗಿತಗೊಂಡಿದೆ.

ಶಿಫಾರಸುಗಳು:

1)ಆರ್ಟಿಇ 2009 ಅನ್ನು ಸಮಗ್ರವಾಗಿ ಜಾರಿಗೊಳಿಸಲು ಮತ್ತು ಕಾಯ್ದೆಯ ಎಲ್ಲ ಸೆಕ್ಷನ್ ಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸಲಹಾ ಪರಿಷತ್ತನ್ನು ಸಶಕ್ತಗೊಳಿಸಿ, ಸಮಪರ್ಕವಾಗಿ ಜಾರಿಗೆ ತರಬೇಕು

2)6 ರಿಂದ 14 ವರ್ಷದ ವರೆಗೆ ಇರುವ ಇರುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಹುಟ್ಟಿನಿಂದ 18 ವರ್ಷದ ವರೆಗೆ ವಿಸ್ತರಿಸಬೇಕು, ಬಾಲ್ಯ ಪೂರ್ವ ಆರೈಕೆ, ಪೌಷ್ಠಿಕಾಂಶ ಮತ್ತು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯೂ ಕಾಯ್ದೆಯ ಭಾಗವಾಗಬೇಕು, ಅದಕ್ಕಾಗಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

3)ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮತ್ತು ಬಲಪಡಿಸಲು ವಾರ್ಷಿಕ ಆಯವ್ಯಯದಲ್ಲಿ ಶಿಕ್ಷಣಕ್ಕೆ ಒಟ್ಟು ಅನುದಾನದಲ್ಲಿ ಶೇ 20% ಅನುದಾನವನ್ನು ಮೀಸಲಿಡಬೇಕು.

4)ಕಡಿಮೆ ದಾಖಲಾತಿ ಹೊಂದಿರುವ ಅಥವಾ ಏಕೋಪಾಧ್ಯಾಯ ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾಪವನ್ನು ಕೈಬಿಡಬೇಕು ಹಾಗೂ ಅಂತಹ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು.

5)ಶಿಕ್ಷಕರ ಹುದ್ದೆಗಳು ಒಂದು ನಿರ್ದಿಷ್ಟ ಅವಧಿಗಿಂತ ಹೆಚ್ಚಿನ ವರೆಗೆ ಖಾಲಿ ಉಳಿಯದ ಆಗೆ ಕಾನೂನು ರೂಪಿ‌ಸಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಬೇಕು.

ಇದನ್ನೂ ಓದಿ: ತನಗಿಂತ 10 ವರ್ಷ ಕಿರಿಯ ಯುವತಿ ಜತೆ ಇರ್ಫಾನ್ ಪಠಾಣ್ ಮದ್ವೆ! ಸೌಂದರ್ಯದಲ್ಲಿ ನಟಿಯರನ್ನೂ ಮೀರಿಸ್ತಾಳೆ ಈ ಬ್ಯೂಟಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News