T20 World Cup: ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆಯೇ ಹಾರ್ದಿಕ್ ಪಾಂಡ್ಯ?

T20 World Cup: 2021 ರ ಟಿ 20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ, ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಗಾಯಗೊಂಡರು.

Written by - Yashaswini V | Last Updated : Oct 25, 2021, 06:56 AM IST
  • ನಿನ್ನೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡರು
  • ಈಗ ಅವರು ಪಂದ್ಯಾವಳಿಯಿಂದ ಹೊರಗುಳಿಯುವ ಅಪಾಯದಲ್ಲಿದ್ದಾರೆ
  • ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾದರು
T20 World Cup: ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆಯೇ ಹಾರ್ದಿಕ್ ಪಾಂಡ್ಯ? title=
ಟಿ 20 ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಗುಳಿಯುವ ಅಪಾಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!

T20 World Cup: ಟಿ20 ವಿಶ್ವಕಪ್‌ನ (T20 World Cup) ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಅಂತರದ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಈ ಸೋಲನುಭವಿಸಿದೆ. ಆದರೆ ಈ ಪಂದ್ಯದ ಸಮಯದಲ್ಲಿ ಭಾರತವು ಈ ಸೋಲಿನಿಂದ ಮತ್ತೊಂದು ದೊಡ್ಡ ಹೊಡೆತವನ್ನು ಪಡೆಯಿತು. ವಾಸ್ತವವಾಗಿ, ಟೀಂ ಇಂಡಿಯಾದ ಮಾರಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಈ ಪಂದ್ಯದ ವೇಳೆ ಗಾಯಗೊಂಡರು ಮತ್ತು ಈಗ ಅವರು ಪಂದ್ಯಾವಳಿಯಿಂದ ಹೊರಗುಳಿಯುವ ಅಪಾಯದಲ್ಲಿದ್ದಾರೆ. 

ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆಯೇ ಹಾರ್ದಿಕ್ ಪಾಂಡ್ಯ?
ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾದರು, ನಂತರ ಅವರು ಫೀಲ್ಡಿಂಗ್‌ಗೆ ಬರಲಿಲ್ಲ. ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಪಂದ್ಯದುದ್ದಕ್ಕೂ ಫೀಲ್ಡಿಂಗ್ ಮಾಡಿದರು. ಪಾಂಡ್ಯ ಅವರ ಗಾಯದ ತೀವ್ರತೆಯನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಅವರನ್ನು ಸ್ಕ್ಯಾನ್‌ಗೆ ಕಳುಹಿಸಲಾಗಿದೆ. ಬಿಸಿಸಿಐ (BCCI) ಮಾಧ್ಯಮ ತಂಡ, 'ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಬಲ ಭುಜದ ಗಾಯಕ್ಕೆ ತುತ್ತಾದರು. ಅವರನ್ನು ಮುನ್ನೆಚ್ಚರಿಕೆಯಾಗಿ ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದೆ.

ವಾಸ್ತವವಾಗಿ, ಭಾರತವು ಮುಂದಿನ ಪಂದ್ಯವನ್ನು ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-  India vs Pakistan T20 World Cup Live Score: ಭಾರತದ ವಿರುದ್ಧ ಪಾಕ್ ಗೆ 10 ವಿಕೆಟ್ ಗಳ ಐತಿಹಾಸಿಕ ಗೆಲುವು

ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋಲು:
ಟಿ 20 ವಿಶ್ವಕಪ್‌ನ (T20 World Cup) ಮೊದಲ ಪಂದ್ಯದಲ್ಲಿ, ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಭಾರತದ ಬೌಲರ್ಗಳಾಗಲಿ ಅಥವಾ ವಿರಾಟ್ ಕೊಹ್ಲಿ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಗಳಾಗಲಿ ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ. ಇದರೊಂದಿಗೆ ಭಾರತದ ಟಿ20 ವಿಶ್ವಕಪ್ ಅಭಿಯಾನ ಅತ್ಯಂತ ಕೆಟ್ಟದಾಗಿ ಆರಂಭವಾಯಿತು. ಈಗ ಟೂರ್ನಿಯಲ್ಲಿ ಉಳಿಯಲು ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸುವುದು ಬಹಳ ಮುಖ್ಯವಾಗಿದೆ. 

ಇದನ್ನೂ ಓದಿ- India vs Pakistan T20 World Cup: ನೋಬಾಲ್ ಗೆ ಔಟ್ ಆಗಿದ್ದ ಕೆ.ಎಲ್.ರಾಹುಲ್..! ಕಳಪೆ ಅಂಪೈರಿಂಗ್ ಗೆ ಅಭಿಮಾನಿಗಳ ಆಕ್ರೋಶ

5-1 ದಾಖಲೆ :
ಇಲ್ಲಿಯವರೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ (Pakistan) ಸಾಧ್ಯವಾಗಿರಲ್ಲ. ಆದರೆ ಪಾಕಿಸ್ತಾನ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಎಲ್ಲ ದಾಖಲೆಗಳಿಗೂ ಕಡಿವಾಣ ಹಾಕಿದೆ. ಇದು ಪಾಕಿಸ್ತಾನಕ್ಕೆ 6 ಟಿ20 ಪಂದ್ಯಗಳಲ್ಲಿ ಮೊದಲ ಜಯವಾಗಿದೆ. ಈಗ ಎರಡು ತಂಡಗಳ ನಡುವಿನ ದಾಖಲೆ 5-1 ಆಗಿದೆ. ಅದೇ ಸಮಯದಲ್ಲಿ, ಭಾರತ ಇನ್ನೂ ಏಕದಿನದಲ್ಲಿ 7-0 ದಾಖಲೆಯೊಂದಿಗೆ ಮುಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News