'ನೋವಿಗೆ ನೀನೇ ಮದ್ದು' ಹೊಸ ವರ್ಷದ ಬೆನ್ನಲ್ಲೇ ವಿಶೇಷ ವ್ಯಕ್ತಿಯೊಂದಿಗಿನ ಪೋಟೋ ಶೇರ್‌ ಮಾಡಿದ ಸಾನಿಯಾ ಮಿರ್ಜಾ! ಫ್ಯಾನ್ಸ್‌ ಫುಲ್‌ ಖುಷ್!!‌

Sania Mirza Special Post: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸದ್ಯ ಈ ಚೆಲುವೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ..    

Written by - Savita M B | Last Updated : Jan 2, 2025, 10:30 AM IST
  • ಸಾನಿಯಾ ಮಿರ್ಜಾ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ
  • ಹೊಸ ವರ್ಷವನ್ನು ಆಚರಿಸಲು ಕಾರಣವನ್ನು ವಿವರಿಸುವ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.
'ನೋವಿಗೆ ನೀನೇ ಮದ್ದು' ಹೊಸ ವರ್ಷದ ಬೆನ್ನಲ್ಲೇ ವಿಶೇಷ ವ್ಯಕ್ತಿಯೊಂದಿಗಿನ ಪೋಟೋ ಶೇರ್‌ ಮಾಡಿದ ಸಾನಿಯಾ ಮಿರ್ಜಾ! ಫ್ಯಾನ್ಸ್‌ ಫುಲ್‌ ಖುಷ್!!‌ title=

Sania Mirza: ಸಾನಿಯಾ ಮಿರ್ಜಾ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಆಗಿರುವ ಸಾನಿಯಾ ಮಿರ್ಜಾ ಈ ಬಾರಿಯೂ ಹೊಸ ವರ್ಷವನ್ನು ಆಚರಿಸಲು ಕಾರಣವನ್ನು ವಿವರಿಸುವ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. 

ಸಾನಿಯಾ ಮಿರ್ಜಾ ಅವರ ಸುಂದರ ಫೋಟೋ ಸಾನಿಯಾ ತಮ್ಮ ಫೋಟೋದಲ್ಲಿ 'ದಿಲ್ ತೂ, ಜಾನ್ ತೂ, ದರ್ದ್ ದಿ ದವಾ ತು' ಹಾಡನ್ನು ಸೇರಿಸಿದ್ದಾರೆ. ಇದರೊಂದಿಗೆ ಅವರ ಫೋಟೋದಲ್ಲಿ ವಿಶೇಷ ವ್ಯಕ್ತಿ ಇದ್ದಾರೆ. ಸದ್ಯ ವೈರಲ್‌ ಆಗಿರುವ ಫೋಟೋದಲ್ಲಿ ಸಾನಿಯಾ ಹಾಗೂ ಆ ವಿಶೇಷ ವ್ಯಕ್ತಿ ತುಂಬಾ ಸುಂದರವಾಗಿ ಕಾಣುತ್ತಿದ್ದು, ಅಭಿಮಾನಿಗಳು ಕೂಡ ಫೋಟೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಹಾಗಾದ್ರೆ ಸಾನಿಯಾ ಮಿರ್ಜಾ ಯಾರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ? ಅಂತೀರಾ ಇಲ್ಲಿದೆ ಉತ್ತರ.. 

ಇದನ್ನೂ ಓದಿ-ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ : ಥ್ಯಾಂಕ್ಸ್ ಗಿವಿಂಗ್ ಸಮಾರಂಭದಲ್ಲಿ ಕಿಚ್ಚ ಸುದೀಪ್

ವಾಸ್ತವವಾಗಿ ಸಾನಿಯಾ ತನ್ನ ಮಗ ಇಜಾನ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿ.. ಹೊಸ ವರ್ಷದ ಆರಂಭವು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಫೋಟೋದಲ್ಲಿ ಸಾನಿಯಾ ತುಂಬಾ ಖುಷಿಯಾಗಿ ಕಾಣುತ್ತಿದ್ದಾರೆ ಆದರೆ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ಹಾಡು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. 

 
 
 
 

 
 
 
 
 
 
 
 
 
 
 

A post shared by Sania Mirza (@mirzasaniar)

ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ತನ್ನ ಮಗ ಇಜಾನ್‌ನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ. ಶೋಯೆಬ್ ಮಲಿಕ್ ಕೂಡ ತನ್ನ ಮೂರನೇ ಪತ್ನಿ ಸನಾ ಜಾವೇದ್ ಜೊತೆ  ದುಬೈನಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಸಾನಿಯಾ ಮಿರ್ಜಾ ತಮ್ಮ ವೃತ್ತಿಪರ ಬದ್ಧತೆಗಳಿಗಾಗಿ ಭಾರತಕ್ಕೆ ಬಂದು, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಭೇಟಿ ನೀಡಿದ್ದಾರೆ. ಇದಲ್ಲದೇ ಅಬುಧಾಬಿಯಲ್ಲಿ ನಡೆದ ಟೆನಿಸ್ ಪಂದ್ಯಾವಳಿಯ ಪ್ರಸಾರ ಕಾರ್ಯದಲ್ಲೂ ನಿರತರಾಗಿದ್ದರು. ಸದ್ಯ ಅವರು ತಮ್ಮ ಜೀವನದಲ್ಲಿ ಬಹಿರಂಗವಾಗಿ ಮೋಜು ಮಾಡುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ-ಗುರುನಂದನ್‍ಗೆ ಹುಟ್ಟಹಬ್ಬದ ಸಂಭ್ರಮ: ಹೊಸ ಚಿತ್ರದ ಶೀರ್ಷಿಕೆ ಟೀಸರ್‍ ಅನಾವರಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

Trending News