CSK Team : ಫಾರ್ಮ್‌ಗೆ ಮರಳಿ ಧೋನಿಯ ಅತ್ಯಂತ ವಿಶ್ವಾಸಾರ್ಹ ಆಲ್‌ರೌಂಡರ್!

ಧೋನಿಯ ಅತ್ಯಂತ ನಂಬಿಕಸ್ಥ ಆಲ್ ರೌಂಡರ್ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

Written by - Channabasava A Kashinakunti | Last Updated : May 9, 2022, 03:56 PM IST
  • ಫಾರ್ಮ್‌ಗೆ ಮರಳಿದ ಈ ಆಟಗಾರ
  • ಕಳೆದ ಸೀಸನ್ ನಲ್ಲಿ ಈ ತಂಡ ಚಾಂಪಿಯನ್ ಆಗಿತ್ತು
  • ಗೆಲುವು ಚೆನ್ನೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದ
CSK Team : ಫಾರ್ಮ್‌ಗೆ ಮರಳಿ ಧೋನಿಯ ಅತ್ಯಂತ ವಿಶ್ವಾಸಾರ್ಹ ಆಲ್‌ರೌಂಡರ್! title=

Moeen Ali Performance In IPL 2022 : ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫಾರ್ಮ್‌ಗೆ ಮರಳುತ್ತಿದೆ. ಕಳೆದ 5 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿರುವ ಚೆನ್ನೈ ಪ್ಲೇಆಫ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಯಶಸ್ವಿ ಪ್ರದರ್ಶನ ನೀಡಿದರು. ಧೋನಿಯ ಅತ್ಯಂತ ನಂಬಿಕಸ್ಥ ಆಲ್ ರೌಂಡರ್ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

ಫಾರ್ಮ್‌ಗೆ ಮರಳಿದ ಈ ಆಟಗಾರ

ಈ ಋತುವಿನ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಮೊಯಿನ್ ಅಲಿಯನ್ನು ಉಳಿಸಿಕೊಂಡಿತ್ತು. ಐಪಿಎಲ್ 2022 ರಲ್ಲಿ ಅವರ ಪ್ರದರ್ಶನವು ಅಂತಹ ಏನು ವಿಶೇಷವಾಗಿಲ್ಲ, ಆದರೆ ಮೊಯಿನ್ ಅಲಿ ದೆಹಲಿ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ ಮೊಯಿನ್ ಅಲಿ ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು. ಇದರಿಂದ ಈ ಪಂದ್ಯದಲ್ಲಿ ಅತ್ಯಂತ ಮಿತವ್ಯಯಕಾರಿ ಎಂದು ಸಾಬೀತುಪಡಿಸಿದರು ಮತ್ತು ಚೆನ್ನೈ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದರು. ಈ ಪಂದ್ಯಕ್ಕೂ ಮುನ್ನ ಮೊಯಿನ್ ಅಲಿ ಐಪಿಎಲ್ 2022ರಲ್ಲಿ ಕೇವಲ 2 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : KKR vs MI: ಕೊಲ್ಕತ್ತಾ-ಮುಂಬೈ ನಡುವೆ ಹಣಾಹಣಿ: ಪ್ಲೇ ಆಫ್‌ಗೆ ಪ್ರವೇಶಿಸಲು ನೈಟ್‌ ರೈಡರ್ಸ್‌ ಹೋರಾಟ

ಕಳೆದ ಸೀಸನ್ ನಲ್ಲಿ ಈ ತಂಡ ಚಾಂಪಿಯನ್ ಆಗಿತ್ತು

ಮೊಯಿನ್ ಅಲಿ ಐಪಿಎಲ್ 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದರು. ಮೊಯಿನ್ 15 ಪಂದ್ಯಗಳಲ್ಲಿ 357 ರನ್ ಗಳಿಸಿದ್ದರು. ಅದೇ ಸಮಯದಲ್ಲಿ, ಅವರು ಅದೇ ಸಂಖ್ಯೆಯ ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಪಡೆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಆದರೆ ಈ ಋತುವಿನಲ್ಲಿ ಮೊಯಿನ್ ಅದನ್ನು ಮಾಡಲು ವಿಫಲರಾಗಿದ್ದರು.

ಗೆಲುವು ಚೆನ್ನೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

ಪಂದ್ಯದ ನಂತರ ಮಾತನಾಡಿದ ಮೊಯಿನ್ ಅಲಿ, 'ಈ ಗೆಲುವು ನಮಗೆ ಅದ್ಭುತವಾಗಿದೆ. ಈ ಗೆಲುವಿನಿಂದ ನಮ್ಮ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ. ತಮ್ಮ ಬೌಲಿಂಗ್ ಕುರಿತು ಮಾತನಾಡಿದ ಮೊಯಿನ್ ಅಲಿ, 'ಬಾಲ್ ಸ್ಪಿನ್ ಮಾಡುವುದು ನನ್ನ ಮುಖ್ಯ ಗುರಿಯಾಗಿತ್ತು ಮತ್ತು ಪಿಚ್ ನನಗೆ ಸಹಾಯ ಮಾಡುತ್ತಿದೆ' ಎಂದು ಹೇಳಿದರು. ಈ ಪಂದ್ಯದಲ್ಲಿ ಮೊಯಿನ್ ಅಲಿ, ಸಿಮರ್‌ಜಿತ್ ಸಿಂಗ್, ಡ್ವೇನ್ ಬ್ರಾವೊ ಮತ್ತು ಮುಖೇಶ್ ಚೌಧರಿ 2-2 ವಿಕೆಟ್ ಪಡೆದಿದ್ದು, 1 ವಿಕೆಟ್ ಮಹೇಶ್ ಟೀಕಷ್ಣ ಖಾತೆಗೆ ಹೋಯಿತು.

CSK ನಾಲ್ಕು ಬಾರಿ ಚಾಂಪಿಯನ್ ಆಗಿದೆ

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ಬಾರಿ ಸಿಎಸ್ ಕೆ ಕಮಾಂಡ್ ರವೀಂದ್ರ ಜಡೇಜಾ ಕೈಯಲ್ಲಿದೆ. ತಂಡವು ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದ್ದು, ಅವರನ್ನು ಪ್ರಶಸ್ತಿಯ ಹೊಸ್ತಿಲಿಗೆ ಕೊಂಡೊಯ್ಯಬಹುದು. ತಂಡವು ರಾಬಿನ್ ಉತ್ತಪ್ಪ ಮತ್ತು ರಿತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಟಿ ರಾಯುಡು ರೂಪದಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ.

ಇದನ್ನೂ ಓದಿ : CSK vs DC : ಡೆಲ್ಲಿ ಕ್ಯಾಪಿಟಲ್ಸ್‌ನ ಈ ಸ್ಟಾರ್ ಆಟಗಾರ ಆಸ್ಪತ್ರೆಗೆ ದಾಖಲು!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News