Matthew Hayden vs Justin Langer: ಸ್ನೇಹಿತರಾಗಿದ್ದವರು ವಿರೋಧಿಗಳಾಗಿದ್ದು ಹೇಗೆ ಗೊತ್ತಾ?

ಮ್ಯಾಥ್ಯೂ ಹೇಡನ್ ಮತ್ತು ಜಸ್ಟಿನ್ ಲ್ಯಾಂಗರ್, ಒಂದು ಕಾಲದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾಗಿ ಹೆಸರುಗಳಿಸಿದ್ದರು.ಟೆಸ್ಟ್ ನಲ್ಲಿ ಸಾರ್ವಕಾಲಿಕ ನಾಲ್ಕನೆ ಅತ್ಯುತ್ತಮ ಜೊತೆಯಾಟವನ್ನು ಹೊಂದಿರುವ ಹೆಗ್ಗಳಿಕೆ ಈ ಜೋಡಿಗಿದೆ.

Written by - Zee Kannada News Desk | Last Updated : Nov 11, 2021, 07:01 PM IST
  • ಮ್ಯಾಥ್ಯೂ ಹೇಡನ್ ಮತ್ತು ಜಸ್ಟಿನ್ ಲ್ಯಾಂಗರ್, ಒಂದು ಕಾಲದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾಗಿ ಹೆಸರುಗಳಿಸಿದ್ದರು.
  • ಟೆಸ್ಟ್ ನಲ್ಲಿ ಸಾರ್ವಕಾಲಿಕ ನಾಲ್ಕನೆ ಅತ್ಯುತ್ತಮ ಜೊತೆಯಾಟವನ್ನು ಹೊಂದಿರುವ ಹೆಗ್ಗಳಿಕೆ ಈ ಜೋಡಿಗಿದೆ.
 Matthew Hayden vs Justin Langer: ಸ್ನೇಹಿತರಾಗಿದ್ದವರು ವಿರೋಧಿಗಳಾಗಿದ್ದು ಹೇಗೆ ಗೊತ್ತಾ?  title=

ನವದೆಹಲಿ: ಮ್ಯಾಥ್ಯೂ ಹೇಡನ್ ಮತ್ತು ಜಸ್ಟಿನ್ ಲ್ಯಾಂಗರ್, ಒಂದು ಕಾಲದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾಗಿ ಹೆಸರುಗಳಿಸಿದ್ದರು.ಅಂತ ಆಟಗಾರರ ಹೆಸರಿನಲ್ಲಿ ಈಗಲೂ ಟೆಸ್ಟ್ ಪಂದ್ಯದಲ್ಲಿ ಸಾರ್ವಕಾಲಿಕ ನಾಲ್ಕನೆ ಅತ್ಯುತ್ತಮ ಜೊತೆಯಾಟವನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.

 ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್

ಹಲವಾರು ವರ್ಷಗಳ ಕಾಲ ಒಂದೇ ತಂಡದಲ್ಲಿ ಕಳೆದಿರುವ ಈ ಇಬ್ಬರು ಆಟಗಾರರು ಈಗ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.'ಜೆಎಲ್' ಮತ್ತು 'ಹೈಡೋಸ್' ಎಂಬ ಅಡ್ಡ ಹೆಸರು ಹೊಂದಿರುವ ಈ ಜೋಡಿಯು ಅವರು ಯಾವ ದೇಶದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ತಮಗೆ ಮುಖ್ಯವಲ್ಲ ಎನ್ನುತ್ತಾರೆ.ಹಾಗಾಗಿ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ 2007 ರ T20 ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದ ಹೇಡನ್, ಈಗ ಪಾಕಿಸ್ತಾನದ ಕೋಚಿಂಗ್ ಸೆಟಪ್‌ನ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಅದೊಂದು ಅಚ್ಚರಿಯ ಭಾವನೆ ಎಂದು ಅವರು ಹೇಳಿದ್ದಾರೆ.

 ಇದನ್ನೂ ಓದಿ: ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ T20 XI ಕ್ರಿಕೆಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..!

'ಇದು ತುಂಬಾ ಅಚ್ಚರಿಯ ಭಾವನೆಯಾಗಿದೆ, ನಾನು ಎರಡು ದಶಕಗಳಿಂದ ಆಸ್ಟ್ರೇಲಿಯನ್ ಕ್ರಿಕೆಟ್‌ಗೆ ಯೋಧನಾಗಿದ್ದೆ, ಆದ್ದರಿಂದ ಈ ಆಟಗಾರರ ಬಗ್ಗೆ ಮಾತ್ರವಲ್ಲದೆ ಆಸ್ಟ್ರೇಲಿಯಾದ ಕ್ರಿಕೆಟ್ ಸಂಸ್ಕೃತಿಯ ಬಗ್ಗೆಯೂ ಅದ್ಭುತ ಒಳನೋಟಗಳನ್ನು ಹೊಂದಿರುವ ಪ್ರಯೋಜನವನ್ನು ನನಗೆ ನೀಡುತ್ತದೆ.ನನ್ನ ದೃಷ್ಟಿಕೋನದಿಂದ ಮುಂದಿನ 24 ಗಂಟೆಗಳಲ್ಲಿ ಏನಾಗಲಿದೆ ಎಂಬುದರ ವಿಷಯದಲ್ಲಿ ಹೃದಯದ ಸವಾಲು,ಮನಸ್ಸಿನ ಸವಾಲು ಇದೆ ಎಂದು ಊಹಿಸುತ್ತೇನೆ,ಆದರೆ ಪಾಕಿಸ್ತಾನ ಕ್ರಿಕೆಟ್ ನ ಭಾಗವಾಗಿರುವುದು ಅದ್ಭುತವಾಗಿದೆ ಎಂದು ನಾನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ"ಎಂದು ಅವರು ಗುರುವಾರದ ಸೆಮಿಫೈನಲ್‌ಗೆ ಮುನ್ನ ನಡೆದ ಚಾಟ್‌ನಲ್ಲಿ ಹೇಡನ್ (Matthew Hayden) ಐಸಿಸಿಗೆ ತಿಳಿಸಿದರು.

ಇದನ್ನೂ ಓದಿ: Cricketers : ಈ ಸ್ಟಾರ್ ಕ್ರಿಕೆಟಿಗರು ತಮ್ಮ ಪತ್ನಿಯರಿಗೆ 'ಪ್ರಪೋಸ್' ಮಾಡಿದ್ದು ಹೇಗೆ? ಇಲ್ಲಿದೆ ಇಂಟರಸ್ಟಿಂಗ್ ಸ್ಟೋರಿಗಳು!

'ಇಬ್ಬರೂ ಯಾವ ದೇಶಕ್ಕೆ ತರಬೇತಿ ನೀಡುತ್ತಿದ್ದಾರೆ ಎಂಬುದು ಮುಖ್ಯವಲ್ಲ ಅದು ತಮ್ಮ ಸ್ನೇಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.'ಕ್ರಿಕೆಟ್‌ನ ದೊಡ್ಡ ವಿಷಯವೆಂದರೆ, ಒಂದು, ಅದು ನಮಗೆ ಅದ್ಭುತವಾದ ನೆನಪುಗಳನ್ನು ನೀಡುತ್ತದೆ, ಮತ್ತು ಎರಡು, ಇದು ನಮಗೆ ಉತ್ತಮ ಸ್ನೇಹವನ್ನು ನೀಡುತ್ತದೆ' ಎಂದು ಲ್ಯಾಂಗರ್ ಹೇಳಿದರು.'ಆದ್ದರಿಂದ ಹೇಡೋಸ್ ಪಾಕಿಸ್ತಾನದ ಶರ್ಟ್ ಧರಿಸಿದ್ದರೂ ಅವನು ಯಾವುದೇ ಶರ್ಟ್ ಧರಿಸಬಹುದು ಆದರೆ ನಾವು ಯಾವಾಗಲೂ ಸ್ನೇಹಿತರಾಗಿರುತ್ತೇವೆ."ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News