ನವದೆಹಲಿ: ತವರಿನಲ್ಲಿ ಪ್ರವಾಸಿ ಟೀಂ ಇಂಡಿಯಾವನ್ನು ದಕ್ಷಿಣ ಆಫ್ರಿಕಾ(IND Vs SA) ತಂಡ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಸೋಲಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಈ ಪೈಕಿ ಕೆ.ಎಲ್.ರಾಹುಲ್ ಪಡೆಯನ್ನು ಏಕದಿನ ಸರಣಿಯಲ್ಲಿ ವೈಟ್ ವಾಶ್ ಮಾಡಿದೆ. 3 ಪಂದ್ಯಗಳಲ್ಲಿ ಒಂದೂ ಪಂದ್ಯ ಗೆಲ್ಲದೆ ಭಾರತ ತಂಡ ನಿರಾಸೆ ಅನುಭವಿಸಿತು. ಕಳೆದ ಕೆಲವು ವರ್ಷಗಳಿಂದ ಸೋಲಿನ ಮೇಲೆ ಸೋಲು ಕಾಣುತ್ತಿದ್ದ ಹರಿಣಗಳು ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸುವ ಮೂಳಕ ಸಂಭ್ರಮಿಸಿದೆ.
ಕೇಪ್‌ಟೌನ್‌ನಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯ(India vs South Africa)ದಲ್ಲಿ ಕೇವಲ 4 ರನ್ ಗಳಿಂದ ಸೋಲುವ ಮೂಲಕ ಕೆ.ಎಲ್.ರಾಹುಲ್ ಪಡೆ ದೊಡ್ಡ ನಿರಾಸೆ ಅನುಭವಿಸಿತು. ತಂಡದ ಸೋಲಿಗೆ ಮಧ್ಯಮ ಕ್ರಮಾಂಕವೇ ಕಾರಣವೆಂದು ಕ್ಯಾಪ್ಟನ್ ಹೇಳಿದರು. ಅತ್ತ ಭಾರತವನ್ನು ವೈಟ್ ವಾಶ್ ಮಾಡಿದ ಸಾಧನೆ ಮಾಡಿದ ತಂಡಕ್ಕೆ ದಕ್ಷಿಣ ಆಫ್ರಿಕಾ ನಾಯಕ ಪ್ರಶಂಸೆ ವ್ಯಕ್ತಪಡಿಸಿದರು. ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿ ಆಫ್ರಿಕಾ ಆಟಗಾರರು ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದರು.
ಇದನ್ನೂ ಓದಿ: ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ
ಭಾರತವನ್ನು ವೈಟ್ ವಾಶ್ ಮಾಡಿದ ಬಳಿಕ ದಕ್ಷಿಣ ಆಫ್ರಿಕಾ ತಂಡ(South Africa Cricket Team)ದಲ್ಲಿರುವ ಭಾರತ ಮೂಲದ ಆಟಗಾರ ಕೇಶವ್ ಮಹಾರಾಜ್(Keshav Maharaj) ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಟೀಂ ಇಂಡಿಯಾವನ್ನು ಬಗ್ಗುಬಡಿದ ಬಳಿಕ ಕೇಶವ್ ಮಹಾರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದ್ದಾರೆ. ಈ ಫೋಟೋಗೆ ಅವರು ನೀಡಿರುವ ಕ್ಯಾಪ್ಶನ್ ಇದೀಗ ಸಾಕಷ್ಟು ಸುದ್ದಿಯಾಗಿದೆ. ಅಷ್ಟಕ್ಕೂ ಅವರು ಏನು ಕ್ಯಾಪ್ಶನ್ ಬರೆದಿದ್ದಾರೆ ನೋಡಿ..
‘ಭಾರತದ ವಿರುದ್ಧ ಇದೊಂದು ಅದ್ಭುತ ಸರಣಿಯಾಗಿತ್ತು. ಈ ತಂಡದ ಸದಸ್ಯನಾಗಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇದೀಗ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ… ಜೈ ಶ್ರೀರಾಮ್.. ಅಂತಾ ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರ ‘ಜೈ ಶ್ರೀರಾಮ್’(Jai Shri Ram) ಎಂದು ಬರೆದಿರುವುದು ಸಖತ್ ಸೌಂಡ್ ಮಾಡುತ್ತಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅವರ ಪೋಸ್ಟ್ ಇಷ್ಟಪಟ್ಟು ‘ಜೈ ಶ್ರೀರಾಮ್’ ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.
Keshav Maharaj for you ❤🙏 pic.twitter.com/emDFU6tEzl
— Shivani Shukla (@iShivani_Shukla) January 24, 2022
ಇದನ್ನೂ ಓದಿ: IPL 2022 ಗೆ ಎಂಟ್ರಿ ನೀಡಲು ಲಕ್ನೋ ಫ್ರಾಂಚೈಸ್ ಹೆಸರು ಫೈನಲ್! ಕೆಎಲ್ ರಾಹುಲ್ ಟೀಂ ಕ್ಯಾಪ್ಟನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.