Kanpur Test: ಟೆಸ್ಟ್ ಕ್ರಿಕೆಟ್ ನಲ್ಲಿ Harbhajan Singh ದಾಖಲೆ ಹಿಂದಿಕ್ಕಿದ Ravichandran Ashwin

Kanpur Test: ಕಾನ್ಪುರ ಟೆಸ್ಟ್‌ನ 5 ನೇ ದಿನವಾದ ಇಂದು ರವಿಚಂದ್ರನ್ ಅಶ್ವಿನ್ (Ravichandran Ashwin)ಗೆ  ಹರ್ಭಜನ್ ಸಿಂಗ್ (Harbhajan Singh) ದಾಖಲೆಯನ್ನು ಹಿಂದಿಕ್ಕುವ ಸಾಕಷ್ಟು ಅವಕಾಶವಿತ್ತು ಮತ್ತು ಅವರು ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. 

Written by - Nitin Tabib | Last Updated : Nov 29, 2021, 03:42 PM IST
  • ಭಜ್ಜಿ ದಾಖಲೆ ಮುರಿದ ಅಶ್ವಿನ್!
  • ತಮ್ಮ ಟೆಸ್ಟ್ ವೃತ್ತಿ ಜೀವನದ 80ನೇ ಟೆಸ್ಟ್ ನಲ್ಲಿ ಈ ಕಮಾಲ್ ಮಾಡಿದ್ದಾರೆ ಅಶ್ವಿನ್
  • ಇದೀಗ ಅವರ ಮುಂದೆ ಕಪಿಲ್ ದೇವ್ ಅವರ ದಾಖಲೆ ಇದೆ.
Kanpur Test: ಟೆಸ್ಟ್ ಕ್ರಿಕೆಟ್ ನಲ್ಲಿ Harbhajan Singh ದಾಖಲೆ ಹಿಂದಿಕ್ಕಿದ Ravichandran Ashwin title=
Ashwin Test Record

ನವದೆಹಲಿ: Ashwin Test Record - ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ (Team India) ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹೀಗಾಗಿ ಅವರ ಮುಂದೆ ಇದೀಗ ಕಪಿಲ್ ದೇವ್ ಅವರ ದಾಖಲೆ ಇರಲಿದೆ. 

ಅಶ್ವಿನ್ ಅವರ 418ನೇ ಟೆಸ್ಟ್ ಬೇಟೆ (Ashwin Test Record)
ರವಿಚಂದ್ರನ್ ಅಶ್ವಿನ್ ಅವರು ಸೋಮವಾರ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟೆಸ್ಟ್ ವೃತ್ತಿ ಜೀವನದ ತಮ್ಮ 418ನೇ  ವಿಕೆಟ್‌ ಪೂರ್ಣಗೊಳಿಸಿದ್ದಾರೆ  ಮತ್ತು ಅವರು ಹರ್ಭಜನ್ ಸಿಂಗ್ ಅವರ 417 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. 

 
ಈ ಮೊದಲು ಅಶ್ವಿನ್ ಅಶ್ವಿನ್ ವಸೀನ್ ಅಕ್ರಂ ಅವರನ್ನು ಹಿಂದಿಕ್ಕಿದ್ದರು
ರವಿಚಂದ್ರನ್ ಅಶ್ವಿನ್ ಅವರು ಕಾನ್ಪುರ ಟೆಸ್ಟ್‌ನಲ್ಲಿಯೇ ಪಾಕಿಸ್ತಾನದ (Pakistan) ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ (Wasim Akram) ಅವರ 414 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಈಗ ಕಪಿಲ್ ದೇವ್ ದಾಖಲೆ ಅವರ ಮುಂದಿದೆ
ರವಿಚಂದ್ರನ್ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 434 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ (Kapil Dev) ಅವರ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಅಶ್ವಿನ್ ಅವರು ಕಪಿಲ್ ಅವರ ದಾಖಲೆಯನ್ನು ಮುರಿಯುವ ಮೊದಲು ಶಾನ್ ಪೊಲಾಕ್ (421 ವಿಕೆಟ್), ರಿಚರ್ಡ್ ಹ್ಯಾಡ್ಲಿ (431) ಮತ್ತು ರಂಗನಾ ಹೆರಾತ್ (433) ಅವರನ್ನು ಹಿಂದಿಕ್ಕಬೇಕಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

 
ಕೇವಲ 80  ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ
ರವಿಚಂದ್ರನ್ ಅಶ್ವಿನ್ 80 ಟೆಸ್ಟ್ ಪಂದ್ಯಗಳಲ್ಲಿ 418ನೇ ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 30 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 7 ಬಾರಿ ಟೆಸ್ಟ್ ನಲ್ಲಿ 10 ವಿಕೆಟ್ ಕಬಳಿಸಿದ ವರ್ಚಸ್ಸನ್ನು ಕೂಡ ಹೊಂದಿದ್ದಾರೆ. 

ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
1. ಮುತ್ತಯ್ಯ ಮುರಳೀಧರನ್- 800 (ಶ್ರೀಲಂಕಾ)
2.ಶೇನ್ ವಾರ್ನ್-708 (ಆಸ್ಟ್ರೇಲಿಯಾ)
3.ಜೇಮ್ಸ್ ಆಂಡರ್ಸನ್- 632 (ಇಂಗ್ಲೆಂಡ್)
4.ಅನಿಲ್ ಕುಂಬ್ಳೆ- 619 (ಭಾರತ)

ಇದನ್ನೂ ಓದಿ-IPL 2022 Mega Auction : ಫ್ರಾಂಚೈಸಿಗಳು ಮೊದಲು ಉಳಿಸಿಕೊಂಡ ಆಟಗಾರರ ಸಂಬಳ ರಿವೀಲ್

5. ಗ್ಲೆನ್ ಮೆಕ್‌ಗ್ರಾತ್ - 563 (ಆಸ್ಟ್ರೇಲಿಯಾ)
6.ಸ್ಟುವರ್ಟ್ ಬ್ರಾಡ್ - 524 (ಇಂಗ್ಲೆಂಡ್)
7. ಕರ್ಟ್ನಿ ವಾಲ್ಷ್ - 519 (ವೆಸ್ಟ್ ಇಂಡೀಸ್)
8. ಡೇಲ್ ಸ್ಟೇಯ್ನ್ - 439 (ದಕ್ಷಿಣ ಆಫ್ರಿಕಾ)
9.ಕಪಿಲ್ ದೇವ್- 434 (ಭಾರತ)
10.ರಂಗನಾ ಹೆರಾತ್ – 433 (ಶ್ರೀಲಂಕಾ)

ಇದನ್ನೂ ಓದಿ-IND vs NZ : Kanpur ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತ!

11.ರಿಚರ್ಡ್ ಹ್ಯಾಡ್ಲಿ- 431 (ನ್ಯೂಜಿಲೆಂಡ್)
12.ಶಾನ್ ಪೊಲಾಕ್- 421 (ದಕ್ಷಿಣ ಆಫ್ರಿಕಾ)
13.ರವಿಚಂದ್ರನ್ ಅಶ್ವಿನ್- 418 (ಭಾರತ)
14.ಹರ್ಭಜನ್ ಸಿಂಗ್- 417 (ಭಾರತ)
15. ವಾಸಿಂ ಅಕ್ರಮ್ - 414 (ಪಾಕಿಸ್ತಾನ)

ಇದನ್ನೂ ಓದಿ-India vs New Zealand 1st Test: ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೇಯಸ್ ಅಯ್ಯರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News