ಮದುವೆಗು ಮುನ್ನ ಗರ್ಭಿಣಿಯಾದ ಅನಿಮಲ್‌ ಬೆಡಗಿ..?ನಟಿಯನ್ನು ಕಾಡುತ್ತಿದೆ ತಂದೆ ಯಾರು ಎಂಬ ಡೌಟ್‌..!

Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ. ಚಿತ್ರದಲ್ಲಿ ರೊಮ್ಯಾಂಟಿಕ್-ಕಾಮಿಡಿಯ ಮಿಶ್ರಣವಿರುವ 'ಬ್ಯಾಡ್ ನ್ಯೂಸ್' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಿಸಿದ್ದು, ನಟಿ ಟ್ರಿಪ್ಟಿ ಡಿಮ್ರಿ, ವಿಕ್ಕಿ ಕೌಶಲ್, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಟೀಸರ್‌ ಬಿಡುಗಡೆಗೊಂಡಿದ್ದು, ಈ ಟೀಸರ್‌ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.  

Written by - Zee Kannada News Desk | Last Updated : Jun 30, 2024, 12:03 PM IST
  • ತ್ರಿಕೋನ ಪ್ರೇಮಕಥೆಯೊಂದಿಗೆ ರೊಮ್ಯಾಂಟಿಕ್-ಕಾಮಿಡಿ ಸ್ಟೋರಿಯನ್ನೊತ್ತು ಬ್ಯಾಡ್‌ ನ್ಯೂಸ್‌ ಸಿನಿಮಾ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.
  • ಅನಿಮಲ್‌ ಚಿತ್ರದ ಮೂಲಕ ಪ್ರಖ್ಯಾತಿ ಪಡೆದ ಟ್ರಿಪ್ಟಿ ಡಿಮ್ರಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ, ಇನ್ನೂ ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • ಚಿತ್ರ ಟೀಸರ್‌ ಬಿಡುಗಡೆಗೊಂಡಿದ್ದು, ಈ ಟೀಸರ್‌ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಮದುವೆಗು ಮುನ್ನ ಗರ್ಭಿಣಿಯಾದ ಅನಿಮಲ್‌ ಬೆಡಗಿ..?ನಟಿಯನ್ನು ಕಾಡುತ್ತಿದೆ ತಂದೆ ಯಾರು ಎಂಬ ಡೌಟ್‌..! title=

Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ. ಚಿತ್ರದಲ್ಲಿ ರೊಮ್ಯಾಂಟಿಕ್-ಕಾಮಿಡಿಯ ಮಿಶ್ರಣವಿರುವ 'ಬ್ಯಾಡ್ ನ್ಯೂಸ್' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಿಸಿದ್ದು, ನಟಿ ಟ್ರಿಪ್ಟಿ ಡಿಮ್ರಿ, ವಿಕ್ಕಿ ಕೌಶಲ್, ಮತ್ತು ಆಮಿ ವಿರ್ಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಟೀಸರ್‌ ಬಿಡುಗಡೆಗೊಂಡಿದ್ದು, ಈ ಟೀಸರ್‌ ನೋಡಿದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.

ಬಾಲಿವುಡ್‌ ಅನೇಕ ಯೂನಿಕ್‌ ಸ್ಟೋರಿಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವುದು ಗೊತ್ತೆ ಇದೆ. ಇದೀಗ ಇಂತಹದ್ದೆ ಲವ್‌ ಟ್ರೈಯಾನ್‌ಗಲ್‌ ಸ್ಟೋರಿಯನ್ನೊತ್ತು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 

ತ್ರಿಕೋನ ಪ್ರೇಮಕಥೆಯೊಂದಿಗೆ ರೊಮ್ಯಾಂಟಿಕ್-ಕಾಮಿಡಿ ಸ್ಟೋರಿಯನ್ನೊತ್ತು ಬ್ಯಾಡ್‌ ನ್ಯೂಸ್‌ ಸಿನಿಮಾ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.  ಅನಿಮಲ್‌ ಚಿತ್ರದ ಮೂಲಕ ಪ್ರಖ್ಯಾತಿ ಪಡೆದ  ಟ್ರಿಪ್ಟಿ ಡಿಮ್ರಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ, ಇನ್ನೂ ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ನೋಡಿ ಫ್ಯಾನ್ಸ್‌ ಫುಲ್‌ ಕಾತುರದಿಂದ ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್‌ ಪ್ರಕರಣ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ...ತಂಡದ ವಿರುದ್ಧ ದರ್ಶನ್‌ ಫ್ಯಾನ್ಸ್‌ ಫುಲ್‌ ಗರಂ..!

ಅಷ್ಟಕ್ಕೂ ಇಷ್ಟು ಕ್ರೇಜ್‌ ಹುಟ್ಟು ಹಾಕಿರುವ ಟ್ರೇಲರ್‌ನಲ್ಲೀ ಏನಿದೆ ಅಂತೀರಾ..?
ಟ್ರೇಲರ್‌ ಶುರುವಾಗುತ್ತಿದ್ದಂತೆ ನಾಯಕಿ ಟ್ರಿಪ್ಟಿ ಡಿಮ್ರಿ ಗೆಳತಿಯಾದ ನೇಹಾ ಧೂಪಿಯಾಗೆ ತಾನು ಗರ್ಭಿಣಿಯಾಗಿರುವ ವಿಷಯ ತಿಳಿಸುತ್ತಾಳೆ. ಆದರೆ ತಂದೆ ಯಾರು ಎಂದು ತಿಳಿದಿಲ್ಲ ಎಂಬ ಅಚ್ಚರಿಯ ಅಂಶವನ್ನು ಬಿಚ್ಚಿಡುತ್ತಾಳೆ. ನಂತರ ವೈದ್ಯರ ಬಳಿ ಹೋಗುವ ನಾಯಕಿ ಮಗುವಿಗೆ ತಂದೆ ಯಾರೆಂಬ ವಿಷಯ ತಿಲೀಯಲು ಟೆಸ್ಟ್‌ಗೆ ಹೋದಾಗ, ಅಲ್ಲಿ ವೈದ್ಯರು ಪಿತೃತ್ವ ಪರೀಕ್ಷೆ ಮಾಡಿ ಇದು ಹೆಟೆರೋಪಟರ್ನಲ್ ಸೂಪರ್‌ಫೆಕಂಡೇಶನ್ ಪ್ರಕರಣವೆಂದು ಬಹಿರಂಗಪಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಂದೇ ಚಕ್ರದಲ್ಲಿ ಎರಡು ವಿಭಿನ್ನ ಮೊಟ್ಟೆಗಳು ಫಲವತ್ತಾಗಿ ಮಗು ಸೃಷ್ಟಿಯಾಗಿದೆ ಎಂದು ಹೇಳುತ್ತಾರೆ. 

ಗರ್ಭಾವಸ್ಥೆಯಲ್ಲಿ ಟ್ರಿಪ್ಟಿಯನ್ನು ಆರೈಸುವಾಗ ಇಬ್ಬರು ನಾಯಕರ ನಡುವಿನ ಸಂಘರ್ಷವನ್ನು ಪ್ರೋಮೋ ತೋರಿಸುಕೊಡುತ್ತದೆ. ಇಬ್ಬರ ನಡುವೆ ಉತ್ತಮ ತಂದೆ ಯಾರು ಎಂಬ ಗಲಭೆಗೆ ಕಾರಣವಾಗುತ್ತದೆ. ಟ್ರೇಲರ್‌ನಲ್ಲಿ ಕಠಿಣವಾದ ಭಾವನಾತ್ಮಕ ಕ್ಷಣಗಳು ಮತ್ತು ರೋಮ್ಯಾಂಟಿಕ್ ಹಾಡುಗಳ ಗ್ಲಿಂಪ್ಸ್‌ಗಳು ಕೂಡ ಕಾಣ ಸಿಗುತ್ತದೆ.

ಇನ್ನೂ ಈ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶಿಸಿದ್ದು, ಹಿರೂ ಯಶ್ ಜೋಹರ್, ಕರಣ್ ಜೋಹರ್ , ಅಪೂರ್ವ ಮೆಹ್ತಾ ಮತ್ತು ಅಮೃತಪಾಲ್ ಸಿಂಗ್ ಬಿಂದ್ರಾ ಅವರೊಂದಿಗೆ ಸಹ-ನಿರ್ಮಾಣ ಮಾಡಲಾಗಿದೆ. ಇಶಿತಾ ಮೊಯಿತ್ರಾ ಮತ್ತು ತರುಣ್ ದುಡೇಜಾ ಚಿತ್ರಕಥೆ ಬರೆದಿದ್ದಾರೆ. ಇನ್ನೂ ಟ್ರೇಲರ್‌ನಿಂದ ಕುತೂಹಲ ಹುಟ್ಟುಹಾಕಿರುವ ಸಿನಿಮಾ ಜುಲೈ 18 ರಂದು ವಿಶ್ವದಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ವಿಭಿನ್ನ ಕಥೆಯನ್ನೊತ್ತ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದು, ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್‌ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News