IPL 2023 : ಸೋಮವಾರದ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಮಧ್ಯೆ ಘರ್ಷಣೆ ನಡೆದಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು 18 ರನ್‌ಗಳಿಂದಸೋಲಿಸಿತು. ಪಂದ್ಯ ಮುಕ್ತಾಯವಾದ ಬಳಿಕ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಐಪಿಎಲ್ 2013 ರ ವೇಳೆ ಕೂಡಾ ಈ ಇಬ್ಬರು ಆಟಗಾರರು ಮೈದಾನದಲ್ಲಿಯೇ ಜಗಳಕ್ಕಿಳಿ ದಿದ್ದರು. ಗಂಭೀರ್ ಕೊಹ್ಲಿ ಮಾತ್ರವಲ್ಲದೆ ಈ ದಿಗ್ಗಜ ಆಟಗಾರರು ಕೂಡಾ ಒಂದು ಕಾಲದಲ್ಲಿ ಉತ್ತಮ ಗೆಳೆಯರಾಗಿದ್ದು ನಂತರ ಶತ್ರುಗಳಾಗಿ ಮಾರ್ಪಟ್ಟಿದ್ದಾರೆ.
1. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ (ಐಪಿಎಲ್ 2013):
2009 ರಲ್ಲಿ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ (107) ತಮ್ಮ ಮೊದಲ ಏಕದಿನ ಶತಕವನ್ನು ಗಳಿಸಿದಾಗ, ಆ ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡಾ ಅಜೇಯ 150 ರನ್ ಗಳಿಸಿದರು. ಗೌತಮ್ ಗಂಭೀರ್ 'ಮ್ಯಾನ್ ಆಫ್ ದಿ ಮ್ಯಾಚ್' ಆಗಿ ಆಯ್ಕೆಯಾದರು. ಆದರೆ ಅವರು ಅದನ್ನು ಎಲ್ಲರ ಮುಂದೆ ತಮ್ಮ ಜೂನಿಯರ್ ವಿರಾಟ್ ಕೊಹ್ಲಿಗೆ ನೀಡಿ ಗೌರವಿಸಿದರು. ಇದಾದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಸ್ನೇಹಿತರಾಗಿದ್ದರು. ಆದರೆ ಐಪಿಎಲ್ 2013 ರ ಒಂದು ಪಂದ್ಯದ ನಂತರ, ಈ ಸ್ನೇಹ ಕೊನೆಗೊಂಡಿತು. ಈ ಇಬ್ಬರು ಆಟಗಾರರು ಸಾವಿರಾರು ಜನರ ಸಮ್ಮುಖದಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಔಟಾದ ನಂತರ ವಿರಾಟ್ ಕೊಹ್ಲಿ ನಿಂದಿಸುತ್ತಾ ಮೈದಾನದಿಂದ ಹೊರನಡೆಯುತ್ತಿದ್ದರು. ಈ ಸಂದರ್ಭದಲ್ಲಿ ಗಂಭೀರ್ ವಿರಾಟ್ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಇದೇ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಈ ಘಟನೆಯ ನಂತರ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಕಂಡು ಬರುತ್ತಿತ್ತು.
ಇದನ್ನೂ ಓದಿ : IPLನ ಈ ತಂಡಕ್ಕೆ ಆಘಾತ! ಸ್ಟಾರ್ ಪ್ಲೇಯರ್-ಮ್ಯಾಚ್ ವಿನ್ನರ್ ಟೂರ್ನಿಯಿಂದಲೇ ಔಟ್
2. ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ :
ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವಿನ ಸ್ನೇಹದ ಬಗ್ಗೆ ಸದಾ ಚರ್ಚೆಯಾಗುತ್ತಿತ್ತು. ಧೋನಿ ತಂಡವನ್ನು ಸೇರಿಕೊಂಡ ನಂತರ ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಒಟ್ಟಿಗೆ ಮೈದಾನಕ್ಕೆ ಇಳಿದು, ಅನೇಕ ಪಂದ್ಯಗಳ ಗೆಲುವಿಗೆ ಕಾರಣವಾಗಿತ್ತು. ಇದರಿಂದಾಗಿ ಇಬ್ಬರ ಸ್ನೇಹ ಗಾಢವಾಗಿತ್ತು. ಆದರೆ, 2015 ರ ವಿಶ್ವಕಪ್ ನಂತರ ಇಬ್ಬರ ಸಂಬಂಧವು ಹದಗೆಡಲು ಪ್ರಾರಂಭಿಸಿತು. ಆ ಸಮಯದಲ್ಲಿ ಧೋನಿ ನಾಯಕರಾಗಿದ್ದು, ಯುವರಾಜ್ ಸಿಂಗ್ ತಂಡದಿಂದ ಹೊರಗುಳಿದಿದ್ದರು. ಕ್ರಮೇಣ ಈ ಸಂಬಂಧ ಹದಗೆಡುತ್ತಲೇ ಹೋಯಿತು. ಅದು ಸಾಮಾಜಿಕ ಜಾಲತಾಣಗಳಲ್ಲೂ ಕಂಡು ಬರುತ್ತಿತ್ತು. ಯುವರಾಜ್ ಸಿಂಗ್ ತಂದೆ ಕೂಡಾ ಧೋನಿಯನ್ನು ತೀವ್ರವಾಗಿ ನಿಂದಿಸಿದ್ದರು. ನಿವೃತ್ತಿಯ ನಂತರ, ಧೋನಿ ಕೆಟ್ಟ ಸಮಯದಲ್ಲಿ ತನ್ನನ್ನು ಬೆಂಬಲಿಸಲಿಲ್ಲ ಎಂದು ಯುವರಾಜ್ ಸಿಂಗ್ ದೂರಿದ್ದರು.
3. ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ :
ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ತಮಿಳುನಾಡಿನಿಂದ ಲೋಕಲ್ ಕ್ರಿಕೆಟ್ ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ನಂತರ ಅವರ ನಡುವಿನ ಸ್ನೇಹವು ಗಾಢವಾಯಿತು. ಐಪಿಎಲ್ ಆರಂಭದವರೆಗೂ ಈ ಸಂಬಂಧ ಚೆನ್ನಾಗಿಯೇ ಇತ್ತು. ದಿನೇಶ್ ಕಾರ್ತಿಕ್, ವಿಜಯ್ ಅವರನ್ನು ಪತ್ನಿ ನಿಕಿತಾಗೆ ಪರಿಚಯಿಸಿದರು. ಇದಾದ ನಂತರ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಪತ್ನಿ ನಡುವೆ ಅನೈತಿಕ ಸಂಬಂಧ ಶುರುವಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ದಿನೇಶ್ ಕಾರ್ತಿಕ್ ಪತ್ನಿಗೆ ವಿಚ್ಛೇದನ ನೀಡಿದ್ದರು. ಅದರೊಂದಿಗೆ ಮುರಳಿ ವಿಜಯ್ ಜೊತೆಗಿನ ಸ್ನೇಹವನ್ನು ಕೂಡಾ ಕೊನೆಗೊಳಿಸಿದರು. ದಿನೇಶ್ ಕಾರ್ತಿಕ್ ಗೆ ವಿಚ್ಛೇದನ ನೀಡಿದ ನಂತರ ಮುರಳಿ ವಿಜಯ್ ನಿಕಿತಾ ಅವರನ್ನು ವಿವಾಹವಾದರು. ಈ ಘಟನೆಯ ನಂತರ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ನಡುವಿನ ಸ್ನೇಹ ದ್ವೇಷಕ್ಕೆ ತಿರುಗಿತು.
ಇದನ್ನೂ ಓದಿ : Virat Kohli World Record: KKR ವಿರುದ್ಧ ಸೋಲು ಕಂಡರೂ ವಿಶ್ವ ದಾಖಲೆ ಬರೆದರು ವಿರಾಟ್ ಕೊಹ್ಲಿ! ಅದೇನದು?
4. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ (ಐಪಿಎಲ್ 2023) :
ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಂತರ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಪರಸ್ಪರ ಕಾದಾಡಿ ಕೊಂಡಿದ್ದಾರೆ. ಸೋಮವಾರ ಪಂದ್ಯ ಮುಗಿದ ಬಳಿಕ ಉಭಯ ತಂಡಗಳು ಪೆವಿಲಿಯನ್ ಕಡೆಗೆ ಮರಳುತ್ತಿದ್ದವು. ಆಗ ಕೈಲ್ ಮೇಯರ್ಸ್ ವಿರಾಟ್ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಇಬ್ಬರು ಆಟಗಾರರ ಜಗಳದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಮತ್ತೊಮ್ಮೆ ಮಧ್ಯೆ ವಾಗ್ವಾದ ನಡೆದಿದೆ. ನಂತರ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್‌ಗೆ ಬಿಸಿಸಿಐ ಪಂದ್ಯ ಶುಲ್ಕದ ಶೇಕಡಾ 100 ರಷ್ಟನ್ನು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ನವೀನ್-ಉಲ್-ಹಕ್ ಮೇಲೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.