IPL 2022 Mega Auction : BCCI ಬಿಡುಗಡೆ ಮಾಡಿದೆ ಆಟಗಾರರ ಫುಲ್ ಲಿಸ್ಟ್!

ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಮೆಗಾ ಹರಾಜಿನಲ್ಲಿ ಒಟ್ಟು 590 ಕ್ರಿಕೆಟಿಗರು ಭಾಗವಹಿಸಲಿದ್ದಾರೆ.

Written by - Channabasava A Kashinakunti | Last Updated : Feb 1, 2022, 06:42 PM IST
  • IPL 2022 ಆಟಗಾರರ ಹರಾಜು ಪಟ್ಟಿಯು ಹೊರ ಬಿದ್ದಿದೆ
  • ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ IPL 2022 Mega Auction
  • ಎರಡು ದಿನಗಳ ಮೆಗಾ ಹರಾಜಿನಲ್ಲಿ ಒಟ್ಟು 590 ಕ್ರಿಕೆಟಿಗರು ಭಾಗವಹಿಸಲಿದ್ದಾರೆ.
IPL 2022 Mega Auction : BCCI ಬಿಡುಗಡೆ ಮಾಡಿದೆ ಆಟಗಾರರ ಫುಲ್ ಲಿಸ್ಟ್! title=

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022)  ಆಟಗಾರರ ಹರಾಜು ಪಟ್ಟಿಯನ್ನ ಬಿಡುಗಡೆ ಮಾಡಿದೆ, ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಮೆಗಾ ಹರಾಜಿನಲ್ಲಿ ಒಟ್ಟು 590 ಕ್ರಿಕೆಟಿಗರು ಭಾಗವಹಿಸಲಿದ್ದಾರೆ.

ಇದು ಐಪಿಎಲ್‌ನ 15 ನೇ ಸೀಸನ್(IPL 15th season) ಆಗಿದ್ದು, ಪ್ರತಿಷ್ಠಿತ ಪಂದ್ಯಾವಳಿಯನ್ನು ನಡೆಸಲು ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರು ಒಂದಾಗಲಿದ್ದಾರೆ.

ಇದನ್ನೂ ಓದಿ : Team India : ಈ ಸ್ಪೋಟಕ ಬೌಲರ್ ನನ್ನು ಟೀಂ ಇಂಡಿಯಾದಿಂದ ದೂರವಿಟ್ಟ ಆಯ್ಕೆಗಾರರು!

ಹರಾಜಿಗೆ ನೋಂದಾಯಿಸಿದ 590 ಆಟಗಾರರ ಪೈಕಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು ಏಳು ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರು ಆಗಿದ್ದಾರೆ.

ಶ್ರೇಯಸ್ ಅಯ್ಯರ್, ಶಿಖರ್ ಧವನ್(Shikhar Dhawan), ಆರ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಅವರಂತಹ ಕೆಲವು ಅತ್ಯುತ್ತಮ ಭಾರತೀಯ ಕ್ರಿಕೆಟ್ ಆಟಗಾರರು ಭಾಗವಹಿಸಲು ತೀವ್ರ ಪೈಪೋಟಿ ನಡೆಯುತ್ತಿದೆ. ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಇಶಾಂತ್ ಶರ್ಮಾ, ಉಮೇಶ್ ಯಾದವ್ ಕೂಡ ಈ ಒಂದು ರೇಸ್ ನಲ್ಲಿದ್ದಾರೆ.

"10 ಐಪಿಎಲ್ ಫ್ರಾಂಚೈಸಿಗಳಾದ(10 IPL Franchisees) -- ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಟೀಂ ಅಹಮದಾಬಾದ್ - ಸಹ ಕೆಲವು ಬಿಡ್ಡಿಂಗ್ ಫಾಫ್ ಡು ಪ್ಲೆಸಿಸ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಕ್ವಿಂಟನ್ ಡಿ ಕಾಕ್, ಜಾನಿ ಬೈರ್‌ಸ್ಟೋ, ಜೇಸನ್ ಹೋಲ್ಡರ್, ಡ್ವೇನ್ ಬ್ರಾವೋ, ಶಕಿಬ್ ಅಲ್ ಹಸನ್, ವನಿಂದು ಹಸರಂಗ ಅವರ ತಂಡದಲ್ಲಿ ಪ್ರಮುಖ ಕ್ರಿಕೆಟೈಗರ ಹೆಸರುಗಳು ಕೇಳಿ ಬಂದಿವೆ.

"2 ಕೋಟಿ ರೂ. ಅತ್ಯಧಿಕ ಮೂಲ ಬೆಲೆಯಾಗಿದೆ ಮತ್ತು 48 ಆಟಗಾರರು ಈ ಬ್ರಾಕೆಟ್‌ನಲ್ಲಿ ತಮ್ಮನ್ನು ತಾವು ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹರಾಜು ಪಟ್ಟಿಯಲ್ಲಿ(Auction List) 20 ಆಟಗಾರರಿದ್ದು, 1.5 ಕೋಟಿ ರೂ. ಮೀಸಲು ಬೆಲೆಯೊಂದಿಗೆ 34 ಆಟಗಾರರು ಒಂದು ಕೋಟಿ ರೂ.ಗೆ ಹರಾಜಿನ ಮೂಲ ಬೆಲೆಯಲ್ಲಿದ್ದಾರೆ.

ಕ್ರಿಸ್ ಗೇಲ್, ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್‌ಕ್ಮ್ ಅವರಂತಹ ಕೆಲವು ಪ್ರಮುಖ ಗೈರುಹಾಜರಾಗಿದ್ದಾರೆ. ಹಾಗಾಗಿ ಈ ವರ್ಷದ ಐಪಿಎಲ್ ಅನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : Virat Kohli : ನಾಯಕತ್ವ ತೊರೆದ ಬಳಿಕ ಟೀಂನಲ್ಲಿ ಕೊಹ್ಲಿ ಈ ಪಾತ್ರವೇನು? ಧೋನಿಗೂ ಈ ಜವಾಬ್ದಾರಿ ಇದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News