Harmanpreet Kaur: ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿಗೆ ಕೊರೊನಾ ಪಾಸಿಟಿವ್

ಸಚಿನ್ ತೆಂಡೂಲ್ಕರ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ, ಈಗ ಮಹಿಳಾ ಕ್ರಿಕೆಟಿಗರಾದ ಹರ್ಮನ್‌ಪ್ರೀತ್ ಕೌರ್ ಅವರಿಗೂ ಕೂಡ ಕೋವಿಡ್ -19 ಪಾಸಿಟಿವ್ ಕಂಡು ಬಂದಿದೆ.

Written by - Yashaswini V | Last Updated : Mar 30, 2021, 12:05 PM IST
  • ಭಾರತೀಯ ಕ್ರಿಕೆಟಿಗರ ಮೇಲೆ ಕರೋನಾ ಕರಿನೆರಳು
  • ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿಗೆ ಕರೋನಾ ಪಾಸಿಟಿವ್
  • ಹೋಂ ಕ್ವಾರೆಂಟೈನ್‌ನಲ್ಲಿ ಹರ್ಮನ್‌ಪ್ರೀತ್
Harmanpreet Kaur: ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿಗೆ ಕೊರೊನಾ ಪಾಸಿಟಿವ್  title=
Image courtesy:Twitter/@ImHarmanpreet

ಪಟಿಯಾಲ: ದೇಶಾದ್ಯಂತ ಕೋವಿಡ್ -19 ಅಟ್ಟಹಾಸ ಮುಂದುವರೆದಿದ್ದು  ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೂ ಕೂಡ ಕೋವಿಡ್ -19 ಪಾಸಿಟಿವ್ ಕಂಡು ಬಂದಿದೆ.

ಸೌಮ್ಯ ಜ್ವರದ ನಂತರ ಕರೋನಾ ಟೆಸ್ಟ್:  
ಮಾರ್ಚ್ 17 ರಂದು ಆಡಿದ 5ನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯನ್ನು ಆಡಲು ಸಾಧ್ಯವಾಗಲಿಲ್ಲ. ಸೌಮ್ಯ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಕರೋನಾ ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ.

ಹೋಂ ಕ್ವಾರೆಂಟೈನ್‌ನಲ್ಲಿ ಹರ್ಮನ್‌ಪ್ರೀತ್ :
ಕಳೆದ ನಾಲ್ಕು ದಿನಗಳಿಂದ ಸೌಮ್ಯ ಜ್ವರದಿಂದ ಬಳಲುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಅವರಿಗೆ ನಿನ್ನೆಯಷ್ಟೇ ಕರೋನಾ ಟೆಸ್ಟ್ ಮಾಡಿಸಲಾಯಿತು. ಇಂದು ಅದರ ವರದಿ ಬಂದಿದ್ದು ಅವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಹರ್ಮನ್‌ಪ್ರೀತ್ ಕೌರ್ ಅವರಿಗೆ ಕರೋನಾ ಪಾಸಿಟಿವ್ (Corona Positive) ಕಂಡು ಬಂದ ಬಳಿಕ ಅವರು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು  ಮೂಲವೊಂದು ಪಿಟಿಐಗೆ ತಿಳಿಸಿದೆ.

ಇದನ್ನೂ ಓದಿ - 2020 ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ಸಾರಥ್ಯ

'ಅಂತರರಾಷ್ಟ್ರೀಯ ಸರಣಿಯ ನಂತರ ಕರೋನಾ' :
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ, ಅವರು ನಿರಂತರವಾಗಿ ಕರೋನಾ ಟೆಸ್ಟ್ ಮಾಡಿಸುತ್ತಿದ್ದರು. ಆ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಆರೋಗ್ಯವಾಗಿಯೇ ಇದ್ದರು.   ಹಾಗಾಗಿ ಅಂತರರಾಷ್ಟ್ರೀಯ ಸರಣಿಯ ನಂತರವೇ ಅವರು ಸೋಂಕಿಗೆ ತುತ್ತಾಗಿರಬಹುದು ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ - Video: ಒಂದೇ ಕೈಯಲ್ಲಿ ಅದ್ಬುತ ಕ್ಯಾಚ್ ಹಿಡಿದ ಹರ್ಮನ್‌ ಪ್ರೀತ್ ಕೌರ್...!

ಈ ಅನುಭವಿ ಕ್ರಿಕೆಟಿಗರಿಗೂ ಕರೋನಾ ಪಾಸಿಟಿವ್:
ಇತ್ತೀಚೆಗೆ ಮುಕ್ತಾಯಗೊಂಡ ರೋಡ್ ಸೇಫ್ಟಿ ವಿಶ್ವ ಸರಣಿ 2021 ರಲ್ಲಿ ಭಾಗವಹಿಸಿದ ಒಟ್ಟು 4 ಕ್ರಿಕೆಟಿಗರಿಗೆ ಕರೋನಾ ಪಾಸಿಟಿವ್ ಕಂಡು ಬಂದಿದೆ. ಅವರಲ್ಲಿ  ಸಚಿನ್ ತೆಂಡೂಲ್ಕರ್ (Sachin Tendulkar), ಯೂಸುಫ್ ಪಠಾಣ್ (Yusuf Pathan), ಎಸ್ ಬದ್ರಿನಾಥ್ (S Badrinath) ಮತ್ತು ಇರ್ಫಾನ್ ಪಠಾಣ್ (Irfan Pathan) ಸೇರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News