Shikhar Dhawan divorce : ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಅವರಿಂದ ಬೇರ್ಪಟ್ಟಿದ್ದು ಗೊತ್ತೇ ಇದೆ. ನ್ಯಾಯಾಲಯ ಬುಧವಾರ ಇಬ್ಬರಿಗೂ ವಿಚ್ಛೇದನ ನೀಡಿದೆ. ಆಯೇಷಾ ಅವರಿಂದಾಗಿ ಮಾನಸಿಕ ಯಾತನೆ ಅನುಭವಿಸಿದ್ದೇನೆ ಎಂದು ಧವನ್ ವಿಚ್ಛೇದನಕ್ಕೆ ಕಾರಣ ನೀಡಿದ್ದರು. ನ್ಯಾಯಾಧೀಶ ಹರೀಶ್ ಕುಮಾರ್ ಅವರು ಆಯೇಷಾ ವಿರುದ್ಧದ ಧವನ್ ಆರೋಪವನ್ನು ನಿಜವೆಂದು ಒಪ್ಪಿಕೊಂಡು ವಿಚ್ಛೇದನವನ್ನು ನೀಡಿದರು.
ಇದೀಗ ಇವರಿಬ್ಬರ ವಿಚ್ಛೇದನದ ಹಿನ್ನಲೆಯಲ್ಲಿ ಹಲವು ಆಂತರಿಕ ವಿಚಾರಗಳೂ ಬೆಳಕಿಗೆ ಬರುತ್ತಿವೆ. ಆಯೇಷಾಳನ್ನು ಮದುವೆಯಾಗುವ ಮೂಲಕ ಧವನ್ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರಂತೆ. ಮೇಲಾಗಿ ಅವರಿಂದ ಬಹಳ ದುಃಖವನ್ನು ಅನುಭವಿಸಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಅಬ್ಬರಿಸಿ ಶತಕ ಸಿಡಿಸಿದ್ದ ರಚಿನ್’ಗೆ ತಂದೆ ತಾಯಿ ಅದೇ ಹೆಸರಿಟ್ಟಿದ್ದೇಕೆ ಗೊತ್ತಾ?
ಸ್ನೇಹಿತನ ಮೂಲಕ ಶಿಖರ್ ಆಸ್ಟ್ರೇಲಿಯಾದಲ್ಲಿ ಬಾಕ್ಸರ್ ಆಗಿದ್ದ ಆಯೇಷಾಳನ್ನು ಭೇಟಿಯಾದರು. ಕೆಲ ದಿನಗಳ ಕಾಲ ಸ್ನೇಹಿತರಾಗಿದ್ದ ಅವರು ಪ್ರೇಮಿಗಳಾದರು. ಅದಕ್ಕೂ ಮುನ್ನ ಆಯೇಷಾ ಮದುವೆಯಾಗಿ, ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಮೊದಲ ಪತಿಗೆ ಡೈವೋರ್ಸ್ ನೀಡಿದ ಬಳಿಕ ಶಿಖರ್-ಆಯೇಶಾ 2009 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು, 2012 ರಲ್ಲಿ ವಿವಾಹವಾದರು.
ಆಯೇಶಾ ಶಿಖರ್ ಧವನ್ ಗಿಂತ 10 ವರ್ಷ ದೊಡ್ಡವರು. ಆಯೇಷಾ ರಿಯಾ ಮತ್ತು ಆಲಿಯಾ ಎನ್ನುವ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ. ತಮ್ಮ8 ವರ್ಷದ ವೈವಾಹಿಕ ಜೀವನದಲ್ಲಿ ಧವನ್ 13 ಕೋಟಿ ರೂ.ಗಳನ್ನು ಆಯೇಷಾಗೆ ಕಳುಹಿಸಿದ್ದಾರಂತೆ. ಮನೆಯ ಖರ್ಚಿನಿಂದ ಹಿಡಿದು ತನ್ನ ಮಗ ಮತ್ತು ಹೆಣ್ಣು ಮಕ್ಕಳ ಶಿಕ್ಷಣದವರೆಗೆ ಎಲ್ಲವನ್ನೂ ಧವನ್ ನೋಡಿಕೊಳ್ಳುತ್ತಿದ್ದರು. ಶಿಖರ್ ಅವರು ತಮ್ಮ ಕುಟುಂಬಕ್ಕಾಗಿ ಆಸ್ಟ್ರೇಲಿಯಾದಲ್ಲಿ ಮೂರು ಆಸ್ತಿಗಳನ್ನು ಖರೀದಿಸಿದ್ದಾರೆ. ಈ ಪೈಕಿ ಎರಡು ಆಸ್ತಿಗೆ ಆಯೇಷಾ ಮಾಲೀಕರಾಗಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಆಗಮಿಸಿದ ಒಂದೇ ವಾರಕ್ಕೆ ಭಾರತೀಯರ ಅಭಿಮಾನಿಯಾದ ಪಾಕಿಸ್ತಾನ ಈ ಸ್ಟಾರ್ ಆಟಗಾರ!
ತನ್ನ ಬಾಕ್ಸಿಂಗ್ ವೃತ್ತಿಯನ್ನು ತ್ಯಜಿಸಿದ ಆಯೇಷಾ ಶಿಖರ್ ಕಳುಹಿಸಿದ ಹಣದಿಂದ ಜೀವನ ನಡೆಸುತ್ತಿದ್ದರು. ಮಕ್ಕಳ ಪಾಲನೆಗಾಗಿ ಮೊದಲ ಪತಿಯಿಂದ ಅಪಾರ ಹಣ ಪಡೆದಿದ್ದಾಳೆ ಎಂಬ ಸುದ್ದಿಯೂ ಸಹ ಹಬ್ಬಿತ್ತು. ಆದರೂ.. ಶಿಖರ್ ನಿಯಮಿತವಾಗಿ ಮೂವರು ಮಕ್ಕಳಿಗೆ ಹಣ ಕಳುಹಿಸುತ್ತಿದ್ದರು. ಬೇಸರದ ಸಂಗತಿ ಅಂದ್ರೆ ಶಿಖರ್ ತಮ್ಮ ಮಗನನ್ನು ಭೇಟಿಯಾಗಲು ಸಹ ಆಯೇಷಾ ಒಪ್ಪಿರಲಿಲ್ಲವಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.