ಕ್ರಿಕೆಟ್ ಜಗತ್ತಿನಲ್ಲಿ ನಾವು ಅನೇಕ ಆಸಕ್ತಿದಾಯಕ ಪ್ರೇಮಕಥೆಗಳನ್ನು ನೋಡಿದ್ದೇವೆ. ಇದರಲ್ಲಿ ಕೆಲವರ ಪ್ರಯಾಣ ಮಧ್ಯದಲ್ಲಿಯೇ ಮುಗಿದು ಹೋಯಿತು. ಇದೀಗ ಈ ಪಟ್ಟಿಗೆ ಹಾರ್ದಿಕ್ ಪಾಂಡ್ಯ ಕೂಡ ಸೇರಿಕೊಂಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಅವರ 4 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವದಂತಿಗಳನ್ನು ಖಚಿತಪಡಿಸಿದ್ದಾರೆ. ಹಾರ್ದಿಕ್ ಮಾತ್ರವಲ್ಲದೆ ಟೀಮ್ ಇಂಡಿಯಾದ ಇತರ ಮೂವರು ಕ್ರಿಕೆಟಿಗರು ಅವರ ಪ್ರತ್ಯೇಕತೆಯ ಬಗ್ಗೆ ಹೆಚ್ಚು ಮಾತನಾಡಿದ್ದಾರೆ.
Shikhar Dhawan : ಕ್ರಿಕೆಟಿಗ ಶಿಖರ್ ಧವನ್ ಪತ್ನಿ ಆಯೇಷಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಮಾಜಿ ಪತ್ನಿಗೆ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಖರ್ಚಿಗಾಗಿ ಕೋಟಿಗಟ್ಟಲೇ ಹಣ ನೀಡಿದ್ದರಂತೆ. ಹಣ ನಷ್ಟವಾದರೂ ಸಧ್ಯ ಮಾನಸಿಕ ಸಂಕಷ್ಟದಿಂದ ಧವನ್ ಮುಕ್ತಿ ಪಡೆದಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿದೆ..
ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರು ಪತ್ನಿ ಆಯೇಶಾ ಮುಖರ್ಜಿ ಜೊತೆಗಿನ ವಿಚ್ಛೇದನದ ವದಂತಿಗಳು ನಿಜವೆಂದು ಖಚಿತಪಡಿಸಿದ್ದಾರೆ. ಧವನ್ ಮತ್ತು ಆಯೇಶಾ 2012 ರಲ್ಲಿ ವಿವಾಹವಾದರು ಮತ್ತು 2014 ರಲ್ಲಿ ಅವರಿಗೆ 'ಜೋರವರ್' ಎಂಬ ಗಂಡು ಮಗು ಜನಿಸಿತು.
ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರ ಪತ್ನಿ ಆಯೇಷಾ ಮುಖರ್ಜಿ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್ನಲ್ಲಿ, ಆಯೇಷಾ ವಿಚ್ಛೇದನದ ಬಗ್ಗೆ ತನ್ನ ಅಭಿಪ್ರಾಯವನ್ನು ನೀಡಿದ್ದಾರೆ ಮತ್ತು ಎರಡು ಬಾರಿ ವಿಚ್ಛೇದನ ಪಡೆದ ನಂತರ ತನಗೆ ಹೇಗೆ ಅನಿಸುತ್ತದೆ ಎಂದು ಕೂಡ ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.