DK Ravi Wife : ಐಎಎಸ್ vs ಐಪಿಎಸ್ ಅಧಿಕಾರಿಗಳ ಮಧ್ಯೆ ಎಂಟ್ರಿಯಾದ ಡಿ.ಕೆ ರವಿ ಪತ್ನಿ ಕುಸುಮಾ!

ಐಪಿಎಸ್ ಅಧಿಕಾರಿ ಡಿ.ರೂಪ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರು ವಾರ್ ಮಧ್ಯೆ ಡಿ.ಕೆ ರವಿ ಪತ್ನಿ ಕುಸುಮಾ ಹನುಂತರಾಯಪ್ಪ ಎಂಟ್ರಿಯಾದ್ರಾ ಎಂಬ ಅನುಮಾನ ಮೂಡುತ್ತಿದೆ.

Written by - Channabasava A Kashinakunti | Last Updated : Feb 19, 2023, 06:30 PM IST
  • ಡಿ.ರೂಪ ಮತ್ತು ರೋಹಿಣಿ ಸಿಂಧೂರು ವಾರ್ ಮಧ್ಯೆ ಡಿ.ಕೆ ರವಿ ಪತ್ನಿ ಎಂಟ್ರಿ
  • ಐಎಎಸ್ ಅಧಿಕಾರಿ ಡಿಕೆ ರವಿ ಸಂಭಾವಿತ ವ್ಯಕ್ತಿ
  • ಕುಸುಮಾ ಹನುಂತರಾಯಪ್ಪ ಅವರು ತಮ್ಮ ಟ್ವಿಟ್ಟರ್ ಖಾತೆ
DK Ravi Wife : ಐಎಎಸ್ vs ಐಪಿಎಸ್ ಅಧಿಕಾರಿಗಳ ಮಧ್ಯೆ ಎಂಟ್ರಿಯಾದ ಡಿ.ಕೆ ರವಿ ಪತ್ನಿ ಕುಸುಮಾ! title=

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರು ವಾರ್ ಮಧ್ಯೆ ಡಿ.ಕೆ ರವಿ ಪತ್ನಿ ಕುಸುಮಾ ಹನುಂತರಾಯಪ್ಪ ಎಂಟ್ರಿಯಾದ್ರಾ ಎಂಬ ಅನುಮಾನ ಮೂಡುತ್ತಿದೆ. 

ಹೌದು, ಇಂದು ಬೆಳಗ್ಗೆ ಡಿ.ರೂಪ ಅವರು ರೋಹಿಣಿ ಸಿಂಧೂರು ಅವರ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೆಲ ಆರೋಪಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಮೊದಲ ಆರೋಪ, ಐಎಎಸ್ ಅಧಿಕಾರಿ ಡಿಕೆ ರವಿ ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್ ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಲಿಮಿಟ್ ಕ್ರಾಸ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : IAS vs IPS : ರೋಹಿಣಿ ಸಿಂಧೂರು ವಿರುದ್ಧ ಮತ್ತೆ ಗುಡುಗಿದ ಡಿ.ರೂಪ!

ಈಗ ಡಿಕೆ ರವಿ ಪತ್ನಿ ಕುಸುಮಾ ಹನುಂತರಾಯಪ್ಪ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನೀವು ಮಾಡಿದ ಪಾಪ ಫಲ ನಿಮಗೆ ವಾಪಸ್ಸು ಬರುತ್ತದೆ. ತಕ್ಷಣಕ್ಕೆ ಆಗಬಹುದು ಅಥವಾ ತಡವಾಗಬಹುದು. ಆದರೆ ಖಂಡಿತಾ ಬಂದೆ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 

ಇದಕ್ಕೆ, ಡಿ. ರೂಪಾ ಪ್ರತಿಕ್ರಿಯಿಸಿ, ಕುಸುಮಾ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಒಂದು ಹೆಣ್ಣಾಗಿ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಕೆಲವು ಮಹಿಳೆಯರು ಇನ್ನೂ ಅಸಾಯಕರಾಗಿದ್ದಾರೆ. ಆದರೆ ಅಂತಿಮವಾಗಿ ಆರೋಪಿ ವಿರುದ್ದ ನಿಲ್ಲಲೇ ಬೇಕು ಅಲ್ಲವಾ. ಅದು ಹೆಣ್ಣಾದರು ಸರಿ.ಈ ಹಿಂದೆ ಮಾಡಿದಂತಹ ತಪ್ಪುಗಳು ಆಕೆಯಿಂದ ಮರುಕಳಿಬಾರದು ಎಂದು ಹೋರಾಡುತ್ತಿದ್ದೇನೆ ಎಂದು ಕುಸುಮಾ ಟ್ವೀಟ್ ಗೆ ರೀಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ : ಈಕೆ ಮಾಡಿದ್ದು ಭ್ರಷ್ಟಾಚಾರವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News