Harbhajan Vs Symonds: ‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು..?

ಇದು ತಮ್ಮ ನಾಯಕತ್ವದಲ್ಲಿ ನಡೆದ ಅತ್ಯಂತ ಕೆಟ್ಟ ಘಳಿಗೆ ಎಂದು ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಬೇಸರ ವ್ಯಕ್ತಪಡಿಸಿದ್ದರು.

Written by - Puttaraj K Alur | Last Updated : May 15, 2022, 11:03 AM IST
  • ಭೀಕರ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ
  • 14 ವರ್ಷಗಳ ಹಿಂದೆ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡೆದಿತ್ತು ಜಟಾಪಟಿ
  • ಮತ್ತೊಮ್ಮೆ ‘ಮಂಕಿ ಗೇಟ್’ ಪ್ರಕರಣವನ್ನು ನೆನಪಿಸಿಕೊಂಡ ವಿಶ್ವ ಕ್ರಿಕೆಟ್
Harbhajan Vs Symonds: ‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು..? title=
‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಅದು 14 ವರ್ಷಗಳ ಹಿಂದಿನ ಘಟನೆ. 2008ರಲ್ಲಿ ನಡೆದ ಈ ಘಟನೆ ಕ್ರಿಕೆಟ್ ಜಗತ್ತಿನಲ್ಲಿಯೇ ಎಲ್ಲರ ಗಮನ ಸೆಳೆದಿತ್ತು. ಇದು ‘ಮಂಕಿ ಗೇಟ್’(Monkeygate Scandal) ಪ್ರಕರಣವೆಂದೇ ಪ್ರಸಿದ್ಧಿಯಾಗಿದೆ. ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಸಾವನ್ನಪ್ಪಿದ್ದಾರೆ. ಸೈಮಂಡ್ಸ್ ಸಾವಿನ ಸುದ್ದಿಗೆ ಕಂಬನಿ ಮಿಡಿದಿರುವ ವಿಶ್ವ ಕ್ರಿಕೆಟ್ ಅಂದು ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ಆಟಗಾರರ ನಡುವೆ ನಡೆದಿದ್ದ ಜಟಾಪಟಿಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದೆ.   

ಏನಿದು ‘ಮಂಕಿ ಗೇಟ್’ ಪ್ರಕರಣ..?

2008ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಸಿಡ್ನಿಯಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯ ರೋಚಕ ಘಟ್ಟದತ್ತ ಸಾಗಿತ್ತು. ಗೆಲುವಿಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಹೀಗಿರುವಾಗಲೇ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೊ ಸೈಮಂಡ್ಸ್​ ನಡುವೆ ಮಾತಿಕ ಚಕಮಕಿ ನಡೆದಿತ್ತು. ಆರಂಭದಲ್ಲಿ ಸ್ಲೆಡ್ಜಿಂಗ್ ರೂಪದಲ್ಲಿ ನಡೆದ ಆಟಗಾರರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿತ್ತು.

ಇದನ್ನೂ ಓದಿ: ಕಾರು ಅಪಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ

ಇದೇ ಘಟನೆ ‘ಮಂಕಿ ಗೇಟ್’ ಪ್ರಕರಣ ವಿವಾದದ ಕೇಂದ್ರ ಬಿಂದುವಾಯಿತು. ಹರ್ಭಜನ್ ಸಿಂಗ್ ತಮ್ಮನ್ನು ಮಂಕಿ ಎಂದು ಕರೆದು ಅವಮಾನಿಸಿದ್ದಾರೆಂದು ಆಸೀಸ್ ಆಟಗಾರ ಸೈಮಂಡ್ಸ್ ರಂಪಾಟ ಮಾಡಿದ್ದರು. ಹರ್ಭಜನ್ ನನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾರೆಂದು ಸೈಮಂಡ್ಸ್ ಆರೋಪಿಸಿದ್ದರು. ಮರುದಿನದ ಪ್ರತಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಟೀಂ ಇಂಡಿಯಾದ ಆಟಗಾರ ಆಸೀಸ್ ಆಟಗಾರರನ್ನು ಮಂಗ ಎಂದು ನಿಂದಿಸಿದ್ದಾಗಿ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣ ಬೇರೊಂದು ಹಂತಕ್ಕೆ ಹೋಗಿ ಅನೇಕ ಕ್ರಿಕೆಟಿಗರು ನಿಂದನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬೆಂಬಲ ಸೂಚಿಸಿತ್ತು. ಆದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಐಸಿಸಿ ಎಂಟ್ರಿಯಾಯ್ತು.

ಸೈಮಂಡ್ಸ್ ವಿರುದ್ಧದ ಜನಾಂಗೀಯ ನಿಂದನೆ ಆರೋಪದಡಿ ಹರ್ಭಜನ್‍ಗೆ ಮ್ಯಾಚ್ ರೆಫರಿ 3 ಪಂದ್ಯಗಳ ನಿಷೇಧ ಹೇರಿದ್ದರು. ಈ ವೇಳೆ ಹರ್ಭಜನ್ ಯಾವುದೇ ತಪ್ಪು ಮಾಡಿಲ್ಲವೆಂದು ಟೀಂ ಇಂಡಿಯಾ ಆಟಗಾರರು ‘ಬಜ್ಜಿ’ಗೆ ಬೆಂಬಲ ವ್ಯಕ್ತಪಡಿಸಿದರು. ಇದಲ್ಲದೆ ಒಂದು ವೇಳೆ ಹರ್ಭಜನ್‍ಗೆ ನಿಷೇಧ ಹೇರಿದರೆ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿ ಟೀಂ ಇಂಡಿಯಾ ಎಚ್ಚರಿಕೆ ನೀಡಿತ್ತು. ಬಳಿಕ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗೆ ಸಚಿನವ ತೆಂಡೂಲ್ಕರ್ ಸೇರಿ ಕೆಲ ಆಟಗಾರರಿಂದ ಸಾಕ್ಷ್ಯ ತೆಗೆದುಕೊಳ್ಳಲಾಯಿತು. ‘ಬಜ್ಜಿ’ಗೆ ಹೇರಲಾಗಿದ್ದ ನಿಷೇಧ ಹಿಂಪಡೆದು ಅವರಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಯಿತು.  

ಇದನ್ನೂ ಓದಿ: KKR vs SRH, IPL 2022: ಕೆಕೆಆರ್ ಎದುರು ಸೋತ ಹೈದರಾಬಾದ್ ಪ್ಲೇ ಆಫ್ ಕನಸು ನುಚ್ಚುನೂರು!

ವಾಸ್ತವವಾಗಿ ಹರ್ಭಜನ್ ಸಿಂಗ್ ಅವರು ಹಿಂದಿಯಲ್ಲಿ ಸೈಮಂಡ್ಸ್ ಗೆ ಬಳಸಿದ್ದ ಬೈಗುಳದ ಪದಗಳನ್ನು ಆಸ್ಟ್ರೇಲಿಯನ್ ಕ್ರಿಕೆಟಿಗರು ಮಂಕಿ ಎಂದು ಅರ್ಥೈಸಿಕೊಂಡಿದ್ದರು ಎಂದು ಹೇಳಲಾಗಿದೆ.  ಇದು ತಮ್ಮ ನಾಯಕತ್ವದಲ್ಲಿ ನಡೆದ ಅತ್ಯಂತ ಕೆಟ್ಟ ಘಳಿಗೆ ಎಂದು ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಬೇಸರ ವ್ಯಕ್ತಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News