ಕೆ.ಎಲ್.ರಾಹುಲ್ ಗೆ ಕ್ಷಮೆ ಕೋರಿರುವುದಾಗಿ ಹೇಳಿದ ಗ್ಲೆನ್ ಮ್ಯಾಕ್ಸ್ ವೆಲ್ ...!

 ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020  ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) 10.75 ಕೋಟಿ ರೂ.ಗೆ ಹರಾಜಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಟೂರ್ನಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು.

Last Updated : Nov 28, 2020, 03:51 PM IST
ಕೆ.ಎಲ್.ರಾಹುಲ್ ಗೆ ಕ್ಷಮೆ ಕೋರಿರುವುದಾಗಿ ಹೇಳಿದ ಗ್ಲೆನ್ ಮ್ಯಾಕ್ಸ್ ವೆಲ್ ...! title=
Photo Courtesy: Twitter

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020  ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) 10.75 ಕೋಟಿ ರೂ.ಗೆ ಹರಾಜಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಟೂರ್ನಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು.

ಅವರು ಪಂಜಾಬ್ ತಂಡದ ಪರವಾಗಿ 13 ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಲು ಮಾತ್ರ ಯಶಸ್ವಿಯಾಗಿದ್ದರು. ಐಪಿಎಲ್ ನಲ್ಲಿ ನೀಡಿದ ಪ್ರದರ್ಶನದ ವಿಚಾರವಾಗಿ ಮ್ಯಾಕ್ಸ್ವೆಲ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದವು. ಅಚ್ಚರಿ ಎನ್ನುವಂತೆ ಇಡೀ ಐಪಿಎಲ್ ಟೂರ್ನಿಯಲ್ಲಿ ಅವರು ಒಂದೇ ಒಂದು ಸಿಕ್ಸರ್ ನ್ನು ಕೂಡ ಸಿಡಿಸಲು ಅವರು ಸಾಧ್ಯವಾಗಿರಲಿಲ್ಲ.
 

ಆದರೆ ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದ ವೇಳೆ ಐದು ಎಸೆತಗಳಲ್ಲಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ ಮ್ಯಾಕ್ಸ್‌ವೆಲ್ 19 ಎಸೆತಗಳಲ್ಲಿ 45 ರನ್ ಗಳಿಸಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಒಟ್ಟು 374 ರನ್ ಗಳಿಸಲು ನೆರವಾಯಿತು.

ಈಗ ವಿಚಾರವಾಗಿ ಮ್ಯಾಕ್ಸವೆಲ್ ತಮ್ಮ ತಪ್ಪೊಪ್ಪಿಕೊಂಡಿದ್ದು ' ನಾನು ಬ್ಯಾಟಿಂಗ್ ಆಡುವಾಗ ಅವನಿಗೆ ತಪ್ಪೋಪ್ಪಿಕೊಂಡಿದ್ದೇನೆ ಎಂದು ಜಿಮ್ಮಿ ನಿಶಾಂ ಗೆ ಉತ್ತರಿಸಿದ್ದಾರೆ.

Trending News