ಮಂಗಳ-ಕೇತುವಿನಿಂದ ಅತ್ಯಂತ ಅಶುಭ 'ನವಪಂಚಮ ಯೋಗ': ಈ ರಾಶಿಯವರಿಗೆ ಭಾರೀ ಸಂಕಷ್ಟ

Navpancham Yog: ಜಾತಕದಲ್ಲಿ ಮಂಗಳ ಮತ್ತು ರಾಹು ಅಶುಭ ಸ್ಥಾನದಲ್ಲಿದ್ದರೆ ಜೀವನವು ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಮಂಗಳ ಮತ್ತು ಕೇತು ಒಟ್ಟಿಗೆ ಒಂದು ಅಶುಭವಾದ ನವಪಂಚಮ ಯೋಗವನ್ನು ರೂಪಿಸುತ್ತಿದ್ದಾರೆ. ಇದು 4 ರಾಶಿಚಕ್ರದ ಜನರಿಗೆ ಅಶುಭವೆಂದು ಸಾಬೀತುಪಡಿಸಲಿದೆ.

Written by - Yashaswini V | Last Updated : Oct 18, 2022, 07:37 AM IST
  • ಜಾತಕದಲ್ಲಿ ಮಂಗಳ ಮತ್ತು ರಾಹು ಅಶುಭ ಸ್ಥಾನದಲ್ಲಿದ್ದರೆ ಜೀವನವು ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
  • ಇದೀಗ, ಮಂಗಳ-ರಾಹು ಒಟ್ಟಿಗೆ ಸೇರಿ ರೂಪುಗೊಂಡಿರುವ ನವಪಂಚಮ ಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲಕಲ್ಲೋಲ ಉಂಟಾಗಲಿದೆ.
  • ನವಪಂಚಮ ಯೋಗದಿಂದ ಯಾವ ರಾಶಿಯವರಿಗೆ ಸಂಕಷ್ಟ? ಇದಕ್ಕೆ ಏನು ಪರಿಹಾರ ಎಂದು ತಿಳಿಯೋಣ...
ಮಂಗಳ-ಕೇತುವಿನಿಂದ ಅತ್ಯಂತ ಅಶುಭ 'ನವಪಂಚಮ ಯೋಗ': ಈ ರಾಶಿಯವರಿಗೆ ಭಾರೀ ಸಂಕಷ್ಟ title=
NavaPanchama Yoga

ಮಂಗಳ-ಕೇತುವಿನಿಂದ ಅತ್ಯಂತ ಅಶುಭ ನವಪಂಚಮ ಯೋಗ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಚಲನೆಯನ್ನು ಬದಲಾಯಿಸುತ್ತವೆ. ಗ್ರಹಗಳ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಮಂಗಳ ಮತ್ತು ಕೇತು ಗ್ರಹಗಳು ಒಟ್ಟಾಗಿ ತುಂಬಾ ಅಶುಭ ಎಂದು ಪರಿಗಣಿಸಲಾದ 'ನವಪಂಚಮ ಯೋಗ'ವನ್ನು ಸೃಷ್ಟಿ ಮಾಡುತ್ತಿವೆ. ಅಕ್ಟೋಬರ್ 16 ರಂದು ಮಿಥುನ ರಾಶಿಯಲ್ಲಿ ಮಂಗಳ ಸಂಕ್ರಮಣದ ನಂತರ ಈ ಯೋಗವು ರೂಪುಗೊಂಡಿದೆ. 

ಜಾತಕದಲ್ಲಿ ಮಂಗಳ ಮತ್ತು ರಾಹು ಅಶುಭ ಸ್ಥಾನದಲ್ಲಿದ್ದರೆ ಜೀವನವು ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಇದೀಗ, ಮಂಗಳ-ರಾಹು ಒಟ್ಟಿಗೆ ಸೇರಿ ರೂಪುಗೊಂಡಿರುವ ನವಪಂಚಮ ಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲಕಲ್ಲೋಲ ಉಂಟಾಗಲಿದೆ. ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೆಕಾಗಬಹುದು ಎಂದು ಹೇಳಲಾಗುತ್ತಿದೆ. ನವಪಂಚಮ ಯೋಗದಿಂದ ಯಾವ ರಾಶಿಯವರಿಗೆ ಸಂಕಷ್ಟ? ಇದಕ್ಕೆ ಏನು ಪರಿಹಾರ ಎಂದು ತಿಳಿಯೋಣ...

ನವಪಂಚಮ ಯೋಗ: ಈ ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ  ಸೃಷ್ಟಿಸಲಿದ್ದಾರೆ ಮಂಗಳ-ಕೇತು:
ಮೇಷ ರಾಶಿ:
ನವಪಂಚಮ ಯೋಗವು ಮೇಷ ರಾಶಿಯವರಿಗೆ ತೊಂದರೆಯನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ಮೇಷ ರಾಶಿಯ ಬಿಸಿನೆಸ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಹೆಚ್ಚಿನ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಸಂಗಾತಿಯ ಆರೋಗ್ಯ ಹದಗೆಡಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ತೊಂದರೆ ಅನುಭವಿಸಬಹುದು. ಸಹಭಾಗಿತ್ವದಲ್ಲಿ ಕೆಲಸವನ್ನು ಪ್ರಾರಂಭಿಸಬೇಡಿ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಗಂಟಲು ಮತ್ತು ಎದೆಗೆ ಸಂಬಂಧಿಸಿದ ಸಮಸ್ಯೆ ಇರಬಹುದು. 

ಇದನ್ನೂ ಓದಿ- Mars Transit 2022: ಅಕ್ಟೋಬರ್ 16ರಿಂದ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ

ವೃಷಭ ರಾಶಿ: ಮಂಗಳ ಕೇತುವಿನ ಕಾರಣದಿಂದ ರೂಪುಗೊಳ್ಳುತ್ತಿರುವ ನವಪಂಚಮ ಯೋಗವು ವೃಷಭ ರಾಶಿಯವರಿಗೂ ಸಹ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಗರ್ಭಿಣಿಯರು ಜಾಗರೂಕರಾಗಿರಬೇಕು. 

ಕರ್ಕಾಟಕ ರಾಶಿ: ನವಪಂಚಮ ಯೋಗದ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರು ಕೋರ್ಟು-ಕಚೇರಿ ಸುತ್ತುವಂತಾಗುತ್ತದೆ. ಈ ಸಂದರ್ಭದಲ್ಲಿ, ನೀವು ಸೋಲನ್ನು ಎದುರಿಸಬೇಕಾಗಬಹುದು. ಮನೆಯ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಧ್ಯವಾದಷ್ಟು ದೂರ ಪ್ರಯಾಣಗಳನ್ನು ತಪ್ಪಿಸಿ.

ಇದನ್ನೂ ಓದಿ- Budh Margi: ಅಕ್ಟೋಬರ್ 26ರವರೆಗೂ ಈ ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ

ವೃಶ್ಚಿಕ ರಾಶಿ: ಮಂಗಳ ಕೇತುವಿನ ಕಾರಣದಿಂದ ರೂಪುಗೊಂಡ ನವಪಂಚಮ ಯೋಗವು ವೃಶ್ಚಿಕ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳನ್ನು ನೀಡಬಹುದು. ಇದೀಗ ವ್ಯವಹಾರದಲ್ಲಿ ಯಾವುದೇ ಒಪ್ಪಂದವನ್ನು ಅಂತಿಮಗೊಳಿಸಬೇಡಿ. ಅದೃಷ್ಟದಿಂದ ವಿಫಲವಾದರೆ ಕೆಲಸದಲ್ಲಿ ವೈಫಲ್ಯ ಉಂಟಾಗುತ್ತದೆ. ಗರ್ಭಿಣಿಯರು ಜಾಗರೂಕರಾಗಿರಬೇಕು. 

ನವಪಂಚಮ ಯೋಗದ ಅಶುಭ ಪರಿಣಾಮವನ್ನು ತಪ್ಪಿಸಲು ಸರಳ ಪರಿಹಾರ:
ಮಂಗಳ-ಕೇತುವಿನ ನವಪಂಚಮ ಯೋಗದಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಕೇತು ಮತ್ತು ಮಂಗಳನ ಬೀಜ ಮಂತ್ರಗಳನ್ನು ಪಠಿಸಿ. ಇದರ ಹೊರತಾಗಿ, ಮಂಗಳವಾರದಂದು ಉಪವಾಸವನ್ನು ಮಾಡಿ. ಹಾಗೆಯೇ ಹನುಮಾನ್ ಜಿಯನ್ನು ಪೂಜಿಸಿ. ಭಜರಂಗಬಲಿಯ ಪೂಜೆ-ಆರಾಧನೆಯು ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News