ವಾಹನದ ನಂಬರ್‌ ಪ್ಲೇಟ್‌ ನೋಡಿಯೇ ಅದರ ಮಾಲೀಕ ಯಾರೆಂಬುದನ್ನು ಈಸಿಯಾಗಿ ಪತ್ತೆ ಹಚ್ಚಬಹುದು! ಹೇಗೆ ಗೊತ್ತಾ? ಇಲ್ಲಿದೆ ವಿವರ

Owner Details by Number Plate: ಹೀಗಿರುವಾಗ ಆ ಕಾರು ಯಾರದ್ದು? ಅವರ ವಿಳಾಸ ಏನು? ಈ ಎಲ್ಲಾ ಸಂಪೂರ್ಣ ವಿವರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇನ್ನು ವಾಹನದ ನಂಬರ್ ಪ್ಲೇಟ್‌ನಿಂದ ಅದರ ಮಾಲೀಕರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೇಗೆ ಪಡೆಯುವುದು ಎಂಬುದನ್ನು ಮುಂದೆ ತಿಳಿಯೋಣ.

Written by - Bhavishya Shetty | Last Updated : Nov 7, 2024, 05:48 PM IST
    • ಈ ಎಲ್ಲಾ ಸಂಪೂರ್ಣ ವಿವರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು
    • ಮಾಲೀಕರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೇಗೆ ಪಡೆಯುವುದು
    • ವೆಬ್‌ಸೈಟ್ ಅಪ್ಲಿಕೇಶನ್‌ನಲ್ಲಿ SMS ಮೂಲಕ ಸಂಪೂರ್ಣ ವಿವರಗಳನ್ನು ಪಡೆಯಬಹುದು
ವಾಹನದ ನಂಬರ್‌ ಪ್ಲೇಟ್‌ ನೋಡಿಯೇ ಅದರ ಮಾಲೀಕ ಯಾರೆಂಬುದನ್ನು ಈಸಿಯಾಗಿ ಪತ್ತೆ ಹಚ್ಚಬಹುದು! ಹೇಗೆ ಗೊತ್ತಾ? ಇಲ್ಲಿದೆ ವಿವರ title=
Owner Details by Number Plate

Owner Details by Number Plate: ಅಪರಿಚಿತರು ಮನೆ ಮುಂದೆ ಕಾರನ್ನು ನಿಲ್ಲಿಸಿ ಒಂದು ಅಥವಾ ಎರಡು ಗಂಟೆಗಳ ಕಾಲ ಕಣ್ಮರೆಯಾದಾಗ, ಇದು ಯಾರ ಕಾರು? ಎಂದು ಆ ಮನೆಯ ಮಾಲಿಕರು ಆಲೋಚಿಸುವುದುಂಟು. ಇನ್ನು ಹೀಗೆ ಮನೆಮುಂದೆ ಕಾರು ನಿಲ್ಲಿಸಿದರೆ, ಒಂದೋ ಆ ಮನೆಯ ಯಜಮಾನ ತನ್ನ ವಾಹನವನ್ನು ಬಳಸು ಸಾಧ್ಯವಾಗುವುದಿಲ್ಲ. ಅಥವಾ ಅಂತಹ ನಡತೆ ಬೇರೊಬ್ಬರ ಸ್ಥಳವನ್ನು ಆಕ್ರಮಿಸಿಕೊಂಡಂತಾಗುತ್ತದೆ.

ಇದನ್ನೂ ಓದಿ: ಈ ಗಿಡದ ನಾಲ್ಕು ಎಲೆ ಸೇವಿಸಿ.. ಬಿಪಿ, ಶುಗರ್‌, ಹೊಟ್ಟೆಯ ಕೊಬ್ಬನಿಂದ ತಕ್ಷಣ ಮುಕ್ತಿ ಪಡೆಬಹುದು!!

ಹೀಗಿರುವಾಗ ಆ ಕಾರು ಯಾರದ್ದು? ಅವರ ವಿಳಾಸ ಏನು? ಈ ಎಲ್ಲಾ ಸಂಪೂರ್ಣ ವಿವರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇನ್ನು ವಾಹನದ ನಂಬರ್ ಪ್ಲೇಟ್‌ನಿಂದ ಅದರ ಮಾಲೀಕರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೇಗೆ ಪಡೆಯುವುದು ಎಂಬುದನ್ನು ಮುಂದೆ ತಿಳಿಯೋಣ.

mParivahan ಎಂಬ ವೆಬ್‌ಸೈಟ್ ಅಪ್ಲಿಕೇಶನ್‌ನಲ್ಲಿ SMS ಮೂಲಕ ಸಂಪೂರ್ಣ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ, ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್ ತೆರೆಯಿರಿ. ಈಗ VAHAN <ವಾಹನ ಪ್ಲೇಟ್ ಸಂಖ್ಯೆ> ಎಂದು ಟೈಪ್ ಮಾಡಿ. ಉದಾಹರಣೆಗೆ: VAHAN MH01TR3522. ನಂತರ ಈ SMS ಅನ್ನು 7738299899 ಗೆ ಕಳುಹಿಸಿ. ಸಂದೇಶ ಕಳುಹಿಸಲು ಒಂದು ರೂಪಾಯಿ ವೆಚ್ಚವಾಗುತ್ತದೆ. ಸಂದೇಶವನ್ನು ಕಳುಹಿಸಿದ ನಂತರ ಅಗತ್ಯವಿರುವ ಮಾಹಿತಿಯನ್ನು ಸ್ವೀಕರಿಸುತ್ತೀರಿ. ಕೆಲವೇ ನಿಮಿಷಗಳಲ್ಲಿ, ವಾಹನದ ಮಾಲೀಕರ ಹೆಸರು, ಆರ್‌ಟಿಒ ವಿವರಗಳು, ಆರ್‌ಸಿ ವಿವರಗಳು, ವಿಮೆ ವಿವರಗಳಂತಹ ಎಲ್ಲಾ ಮಾಹಿತಿಯನ್ನು ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ರೂಪದಲ್ಲಿ ಸ್ವೀಕರಿಸುತ್ತೀರಿ.

ವೆಬ್‌ಸೈಟ್‌ನಿಂದಲೂ ವಿವರಗಳನ್ನು ಪಡೆಯಬಹುದು:
ಇದಕ್ಕಾಗಿ ಮೊದಲು ಫೋನ್‌ನಲ್ಲಿ ಪರಿವಾಹನ್ ವೆಬ್‌ಸೈಟ್ https://vahan.nic.in/ ಗೆ ಹೋಗಿ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ. ಸಂಖ್ಯೆಯನ್ನು ನಮೂದಿಸಿದ ನಂತರ, ಲೆನ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಆ ವಾಹನದ ಸಂಖ್ಯೆಯನ್ನು ನಮೂದಿಸಿದ ನಂತರ ವಾಹನ ಮಾದರಿ, ವಾಹನ ನೋಂದಣಿ ದಿನಾಂಕ, RTO, ಮಾಲೀಕರ ಹೆಸರು ಮುಂತಾದ ವಿವರಗಳನ್ನು ಪಡೆಯುತ್ತೀರಿ.

ಇದನ್ನೂ ಓದಿ: ದೀಪಾವಳಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಬೊಂಬಾಟ್‌ ಸುದ್ದಿ... ಪಿಂಚಣಿ ಸಹಿತ ನೌಕರರ ಮೂಲ ವೇತನದಲ್ಲಿ ರೂ. 34,560 ಹೆಚ್ಚಳ! ಭರ್ಜರಿ ಮೊತ್ತ ಕೈಸೇರೋದು ಯಾವಾಗ?

ಆ್ಯಪ್ ಮೂಲಕವೂ ಮಾಹಿತಿ:
ಭಾರತ ಸರ್ಕಾರ ಇದಕ್ಕಾಗಿ mParivahan ಎಂಬ ಆ್ಯಪ್ ರಚಿಸಿದೆ. Google Play Store ಗೆ ಹೋಗುವ ಮೂಲಕ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ವಾಹನ ಸಾರಿಗೆ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ. ಇದರ ನಂತರ ನೋ ಯುವರ್ ಆರ್‌ಸಿ ಸ್ಟೇಟಸ್ ಆಯ್ಕೆಗೆ ಹೋಗಿ ಮತ್ತು ವಾಹನ ಸಂಖ್ಯೆಯನ್ನು ನಮೂದಿಸಿ. ನೀವು ನೀಡಿದ ನೋಂದಾಯಿತ ಸಂಖ್ಯೆಯ ಮೂಲಕ ಮಾಹಿತಿಯನ್ನು ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News