ಅತ್ಯಂತ ಅಪರೂಪದ ಯೋಗಗಳಲ್ಲಿ ರಕ್ಷಾಬಂಧನ ಆಚರಣೆ, ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

Raksha Bandhan Astrology 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ರಕ್ಷಾ ಬಂಧನದ ದಿನ ವಿಶಿಷ್ಟ ಯೋಗಗಳು ನಿರ್ಮಾಣಗೊಳ್ಳಲಿವೆ. ಈ ಯೋಗಗಳು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿವೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು  ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),   

Written by - Nitin Tabib | Last Updated : Aug 17, 2023, 05:00 PM IST
  • ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ರಕ್ಷಾ ಬಂಧನದ ದಿನ ಸುಕರ್ಮಾ, ಧೃತಿ ಹಾಗೂ ಅತಿಗಂಡ ಯೋಗಗಳು ನಿರ್ಮಾಣಗೊಳ್ಳುತ್ತಿವೆ.
  • ಇದರ ಜೊತೆಗೆ ಚಂದ್ರನೂ ಕೂಡ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾನೆ.
  • ಕುಂಭ ರಾಶಿಯಲ್ಲಿ ಈಗಾಗಲೇ ಶನಿ ಗ್ರಹ ಕೂಡ ಸ್ಥಿತನಾಗಿದ್ದಾನೆ.
ಅತ್ಯಂತ ಅಪರೂಪದ ಯೋಗಗಳಲ್ಲಿ ರಕ್ಷಾಬಂಧನ ಆಚರಣೆ, ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ! title=

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ತಿಥಿಯಂದು ರಕ್ಷಾ ಬಂಧನ ಮಹಾಪರ್ವವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 30, 2023 ರಂದು ಬೆಳಗ್ಗೆ 10 ಗಂಟೆ 58 ನಿಮಿಷಕ್ಕೆ ಹುಣ್ಣಿಮೆಯ ತಿಥಿ ಆರಂಭಗೊಳ್ಳಲಿದ್ದು, ಅದು 31 ಆಗಸ್ಟ್ 2023 ರಂದು 7 ಗಂಟೆ 5 ನಿಮಿಷದ ವರೆಗೆ ಇರಲಿದೆ (Spiritual News In Kannada). ಹೀಗಿರುವಾಗ ಈ ಬಾರಿ ರಕ್ಷಾ ಬಂಧನ ಆಗಸ್ಟ್ 30 ಮತ್ತು 31ರ ಬೆಳಗಿನ ಕಾಲದವರೆಗೆ ಇರಲಿದೆ. ಇದಲ್ಲದೆ ಆಗಸ್ಟ್ 30 ರಂದು ರಾತ್ರಿಯವರೆಗೆ ಭದ್ರಾ ಛಾಯೆ ಇರಲಿದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ರಕ್ಷಾ ಬಂಧನದ ದಿನ ಸುಕರ್ಮಾ, ಧೃತಿ ಹಾಗೂ ಅತಿಗಂಡ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದರ ಜೊತೆಗೆ ಚಂದ್ರನೂ ಕೂಡ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾನೆ. ಕುಂಭ ರಾಶಿಯಲ್ಲಿ ಈಗಾಗಲೇ ಶನಿ ಗ್ರಹ ಕೂಡ ಸ್ಥಿತನಾಗಿದ್ದಾನೆ. ಹೀಗಿರುವಾಗ ಕೆಲ ರಾಶಿಗಳ ಜನರಿಗೆ ಮುನ್ನೆಚ್ಚರಿಕೆ ವಹಿಸಬೇಕಾದ ಕಾಲ ಬರುತ್ತಿದೆ ಮತ್ತು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಹಾಗಾದರೆ ಈ ಬಾರಿಯ ರಕ್ಷಾಬಂಧನ ಯಾವ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ, 

ಮೇಷ ರಾಶಿ: ರಕ್ಷಾ ಬಂಧನದ ದಿನ ಮೇಷ ರಾಶಿಯ ಜನರಿಗೆ ತುಂಬಾ ವಿಶೇಷವಾಗಿರಲಿದೆ. ಈ ರಾಶಿಗಳ ಜನರಿಗೆ ಕುಟುಂಬದ ಸಂಪೂರ್ಣ ಬೆಂಬಲ ಇರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವ್ಯಾಪಾರ ಕೂಡ ಸಾಕಷ್ಟು ವೇಗ ಪಡೆದುಕೊಳ್ಳಲಿದೆ. ಏತನ್ಮಧ್ಯೆ ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ಕೂಡ ಇದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ನೌಕರವರ್ಗದ ಜನರಿಗೆ ಪದೋನ್ನತಿಯ ಜೊತೆಗೆ ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಖುಷಿಗಳ ಆಗಮನವಾಗಲಿದೆ.   

ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರಿಗೂ ಕೂಡ ಈ ಬಾರಿಯ ರಕ್ಷಾ ಬಂಧನ ಅಪಾರ ಲಾಭವನ್ನು ತಂದು ಕೊಡಲಿದೆ. ನಿಮಗೆ ಬರಬೇಕಾದ ಮತ್ತು ದೀರ್ಘಾವಧಿಯಿಂದ ಸಿಲುಕಿಕೊಂಡ ಹಣ ನಿಮ್ಮತ್ತ ಮರಳಲಿದೆ. ಸರ್ಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅಪಾರ ಲಾಭ ಉಂಟಾಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ಸನ್ನು ಸಂಪಾದಿಸುವಿರಿ. ದೀರ್ಘಕಾಲದಿಂದ ನಡೆದುಕೊಂಡು ಬಂದ ವಿವಾದಗಳಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ-19 ವರ್ಷಗಳ ಬಳಿಕ ಇಂದು ಅಪರೂಪದ ಶುಭ ಯೋಗ ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಅಪಾರ ಸಿರಿ-ಸಂಪತ್ತು ಪ್ರಾಪ್ತಿ!  

ಮಕರ ರಾಶಿ: ರಕ್ಷಾ ಬಂಧನ ಮೀನ ರಾಶಿಯ ಜಾತಕದವರಿಗೂ ಕೂಡ ನೌಕರಿಯಲ್ಲಿ ಅಪಾರ ಯಶಸ್ಸನ್ನು ತಂದು ಕೊಡಲಿದೆ. ನೌಕರಿಯಲ್ಲಿ ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದಲ್ಲದೆ ಕಾರ್ಯಕ್ಷೇತ್ರದಲ್ಲಿ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಸಂಪೂರ್ಣ ಕಷ್ಟಪಟ್ಟು ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಲಾಭ ಸಿಗಲಿದೆ.

ಇದನ್ನೂ ಓದಿ-ಆಗಸ್ಟ್ 18 ರಿಂದ ಈ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!
  
ಮೀನ ರಾಶಿ: ಮೀನ ರಾಶಿಯ ಜಾತಕದವರಿಗೆ ಅಪಾರ ಧನಲಾಭ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ನಲ್ಲಿಯೂ ಕೂಡ ಸಾಕಷ್ಟು ಲಾಭ ನಿಮ್ಮದಾಗಲಿದೆ. ಒಂದು ವೇಳೆ ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲವಾಗಿದೆ. ಏಕೆಂದರೆ ಆ ಕೆಲಸದಲ್ಲಿ ಯಶಸ್ಸಿನ ಜೊತೆಗೆ ಭಾರಿ ಧನಲಾಭ ಸಿಗುವ ಸಕಲ ಸಾಧ್ಯತೆ ಇದೆ. ವೈವಾಹಿಕ ಜೀವನವೂ ಕೂಡ ಖುಷಿಗಳಿಂದ ತುಂಬಿರಲಿದೆ.   

ಇದನ್ನೂ ಓದಿ-ಬುಧನ ಮನೆಯಲ್ಲಿ ಮಿತ್ರ ಸೂರ್ಯನ ಜೊತೆಗೆ ಭೂಮಿ ಪುತ್ರನ ಯುತಿ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಭಾಗ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News