ಸಾಡೇಸಾತಿ ನಡೆಯುತ್ತಿದ್ದರೂ ಈ ರಾಶಿಯವರನ್ನು ಎರಡು ಯೋಗಗಳ ಮೂಲಕ ಕಾಪಾಡುತ್ತಾನೆ ಶನಿದೇವ

Shani Udaya  Effect 2023 : ಮಾರ್ಚ್ 6 ರಂದು ಮತ್ತೆ ಉದಯಿಸಿರುವ ಶನಿ ಕೆಲವೊಂದು ರಾಶಿಯವರ ಜೀವನದ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸಿ ಬಿಡುತ್ತಾನೆ.  ಶನಿಯು ಉದಯಿಸುವುದರೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದರೊಂದಿಗೆ ಕೆಲವು ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಉತ್ತಮ  ಯಶಸ್ಸು ಸಿಗಲಿದೆ.

Written by - Ranjitha R K | Last Updated : Mar 16, 2023, 12:18 PM IST
  • ಯಾವುದೇ ಗ್ರಹ ಅಸ್ತವಾಗುವುದು ಮಂಗಳಕರವಲ್ಲ.
  • ಕೆಲವೊಂದು ರಾಶಿಯವರ ಜೀವನದ ಕಷ್ಟ ನಿವಾರಣೆ
  • ಶನಿ ಉದಯದೊಂದಿಗೆ ಧನರಾಜ ಯೋಗ ನಿರ್ಮಾಣ
 ಸಾಡೇಸಾತಿ ನಡೆಯುತ್ತಿದ್ದರೂ ಈ ರಾಶಿಯವರನ್ನು ಎರಡು ಯೋಗಗಳ ಮೂಲಕ ಕಾಪಾಡುತ್ತಾನೆ ಶನಿದೇವ    title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹ ಅಸ್ತವಾಗುವುದು ಮಂಗಳಕರವಲ್ಲ. ಗ್ರಹ ಅಸ್ತವಾಗುವುದು ಮತ್ತು ಉದಯವಾಗುವುದು ಪ್ರತಿಯೊಬ್ಬರ ರಾಶಿ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 30, 2023 ರಂದು, ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಅಸ್ತವಾಗಿತ್ತು. ಇದೀಗ ಮಾರ್ಚ್ 6 ರಂದು ಮತ್ತೆ ಉದಯಿಸಿರುವ ಶನಿ, ಕೆಲವೊಂದು ರಾಶಿಯವರ ಜೀವನದ ಕಷ್ಟವನ್ನು ಸಂಪೂರ್ಣವಾಗಿ ನಿವಾರಿಸಿ ಬಿಡುತ್ತಾನೆ. ಶನಿಯು ಉದಯಿಸುವುದರೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದರೊಂದಿಗೆ ಕೆಲವು ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಉತ್ತಮ  ಯಶಸ್ಸು ಸಿಗಲಿದೆ.

ಉದಯವಾದ ಶನಿ ಈ ರಾಶಿಯವರ ಅದೃಷ್ಟ ಬೆಳಗಿಸುತ್ತಾನೆ :  
ವೃಷಭ ರಾಶಿ : ಶನಿಯ ಉದಯವು ವೃಷಭ ರಾಶಿಯವರ ವೃತ್ತಿ ಜೀವನಕ್ಕೆ ತುಂಬಾ ಶುಭಕರವಾಗಿರಲಿದೆ. ಈ ರಾಶಿಯವರು ಉತ್ತಮ ವೇತನ ಪಡೆಯುವುದರೊಂದಿಗೆ ಹೊಸ ಉದ್ಯೋಗದ ಆಫರ್ ಕೂಡಾ ಪಡೆಯುತ್ತಾರೆ. ಪ್ರಸ್ತುತ ಕೆಲಸದಲ್ಲಿ ದೊಡ್ಡ ಮಟ್ಟದ ಬಡ್ತಿ, ವೇತನದಲ್ಲಿ ಹೆಚ್ಚಳವನ್ನು  ಕಾಣಬಹುದು. ವ್ಯಾಪಾರದಲ್ಲಿಯೂ ಲಾಭವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. 

ಇದನ್ನೂ ಓದಿ : Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!

ಸಿಂಹ ರಾಶಿ : ಶನಿಯ ಉದಯವಾಗುವುದರೊಂದಿಗೆ ಈ ರಾಶಿಯವರ ಅದೃಷ್ಟ ಕೂಡಾ ಕಣ್ಣು ತೆರೆದಿದೆ. ಈ ರಾಶಿಯವರು ಯಾವ ಮೂಲದಿಂದಾದರೂ ಹಣ ಪಡೆಯುವುದು ಸಾಧ್ಯವಾಗುತ್ತದೆ. ಸಾಲ ಕೊಟ್ಟು ಸಿಕ್ಕಿ ಹಾಕಿಕೊಂಡಿರುವ ಹಣ ಮತ್ತೆ ಕೈ ಸೇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. 

ಕುಂಭ ರಾಶಿ : ಕುಂಭ ರಾಶಿಯಲ್ಲಿ ಶನಿಯು ಉದಯಿಸುವುದರೊಂದಿಗೆ ರೂಪುಗೊಂಡಿರುವ ಧನ ರಾಜಯೋಗವು ಕುಂಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಶನಿ ಉದಯವು ಕುಂಭ ರಾಶಿಯವರ ಜಾತಕದಲ್ಲಿಯೂ ಶಶರಾಜಯೋಗವನ್ನು ಸೃಷ್ಟಿಸುತ್ತಿದೆ. ಈ ಎರಡೂ ಯೋಗಗಳು ಕುಂಭ ರಾಶಿಯವರಿಗೆ ಬಂಪರ್ ಲಾಭವನ್ನು ನೀಡುತ್ತವೆ. ಈ ಎರಡು ಯೋಗಗಳ ಕಾರಣದಿಂದಾಗಿ ಶನಿಯ ಸಾಡೇಸಾತಿಯ ಕಷ್ಟಗಳು ಕೂಡಾ ಪರಿಹಾರವಾಗಲಿವೆ. 

ಇದನ್ನೂ ಓದಿ : Surya Gochar 2023 : ರಾಶಿ ಬದಲಿಸಲಿದ್ದಾನೆ ಸೂರ್ಯ : ಹನ್ನೆರಡು ರಾಶಿಯವರೇ ಎಚ್ಚರ..!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News