ಇಂದು ರೂಪುಗೊಳ್ಳುವ ಮಹಾಯೋಗದಿಂದ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ ! ಇರಲಿದೆ ಈಶ್ವರನ ಕೃಪೆ

ಇಂದು ಅಮಲಕಿ ಏಕಾದಶಿ. ಈ ಬಾರಿ ಅಮಲಕಿ ಏಕಾದಶಿಯಂದು ಅಂದರೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಸೌಭಾಗ್ಯ ಯೋಗದಂತಹ ಅತ್ಯಂತ ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಈ ಕಾರಣದಿಂದ ಇಂದು ಮಾಡುವ ಪೂಜೆಯು  ದುಪ್ಪಟ್ಟು ಫಲವನ್ನು ನೀಡುತ್ತವೆ ಎನ್ನುವುದು ನಂಬಿಕೆ. 

Written by - Ranjitha R K | Last Updated : Mar 3, 2023, 09:27 AM IST
  • ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಇಂದು ಆಚರಿಸಲಾಗುತ್ತದೆ.
  • ಇದನ್ನುಅಮಲಕಿ ಏಕಾದಶಿ ಎಂದು ಕೂಡಾ ಕರೆಯುತ್ತಾರೆ.
  • ಈ ಏಕಾದಶಿಯಿಂದ ಕಾಶಿಯಲ್ಲಿ ಹೋಳಿ ಆರಂಭವಾಗುತ್ತದೆ.
ಇಂದು   ರೂಪುಗೊಳ್ಳುವ ಮಹಾಯೋಗದಿಂದ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ ! ಇರಲಿದೆ ಈಶ್ವರನ ಕೃಪೆ  title=

ಬೆಂಗಳೂರು : ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಇಂದು ಆಚರಿಸಲಾಗುತ್ತದೆ. ಇದನ್ನುಅಮಲಕಿ ಏಕಾದಶಿ ಎಂದು ಕೂಡಾ ಕರೆಯುತ್ತಾರೆ. ಈ ಏಕಾದಶಿಯಿಂದ  ಕಾಶಿಯಲ್ಲಿ ಹೋಳಿ ಆರಂಭವಾಗುತ್ತದೆ.  ಅಮಲಕಿ ಏಕಾದಶಿಯನ್ನು  ಶಿವ- ಪಾರ್ವತಿ ಮತ್ತು  ಲಕ್ಷ್ಮೀ - ನಾರಾಯಣನ ಆಶೀರ್ವಾದವನ್ನು ಪಡೆಯಲು ಬಹಳ ಮುಖ್ಯವಾದ ದಿನಗಳು ಎಂದು ಪರಿಗಣಿಸಲಾಗುತ್ತದೆ. ಇಂದಿನ ದಿನ ಶಿವನಿಗೆ ಬಣ್ಣವನ್ನು ಅರ್ಪಿಸುವುದರಿಂದ  ಮನಸ್ಸಿನ ಇಚ್ಛೆ ಈಡೇರುತ್ತದೆ ಎಂದು ಹೇಳಲಾಗುತ್ತದೆ.  

ಅಮಲಕಿ ಏಕಾದಶಿಯಂದು ರೂಪುಗೊಳ್ಳುತ್ತಿದೆ ಮಹಾಯೋಗ  :
ಈ ಬಾರಿ ಅಮಲಕಿ ಏಕಾದಶಿಯಂದು ಅಂದರೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಸೌಭಾಗ್ಯ ಯೋಗದಂತಹ ಅತ್ಯಂತ ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಈ ಕಾರಣದಿಂದ ಇಂದು ಮಾಡುವ ಪೂಜೆಯು  ದುಪ್ಪಟ್ಟು ಫಲವನ್ನು ನೀಡುತ್ತವೆ ಎನ್ನುವುದು ನಂಬಿಕೆ. ಅದರಲ್ಲೂ ಮಹಾದೇವನ ವಿಶೇಷ ಆಶೀರ್ವಾದ ಈ ದಿನದಂದು ಕೆಲವು ರಾಶಿಯವರ ಮೇಲೆ ಇರಲಿದೆ. ಅಮಲಕಿ ಏಕಾದಶಿಯ ದಿನವು ಯಾವ ರಾಶಿಯವರಿಗೆ ಶುಭವಾಗಿರುತ್ತದೆ  ನೋಡೋಣ. 

ಇದನ್ನೂ ಓದಿ : Saturn Transit 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಗೋಚರ, 7 ತಿಂಗಳು ಈ 5 ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!

ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ವಿಶೇಷ ದಿನವಾಗಿರುತ್ತದೆ. ಮಾಡುವ ಕೆಲಸದಲ್ಲಿ ಅಭೂತ ಪೂರ್ವ ಪ್ರಗತಿ ಸಾಧ್ಯವಾಗುತ್ತದೆ. ನಿರುದ್ಯೋಗಿಗಳು ಉದ್ಯೋಗಾವಕಾಶಗಳನ್ನು ಪಡೆಯಬಹುದು. ವೇತನ ಹೆಚ್ಚಳದ ಸುದ್ದಿ ಬರಬಹುದು. ದೇಹಕ್ಕೆ ಸಂಬಂಧಪಟ್ಟ ಹಳೆಯ ಕಾಯಿಲೆ ಇದ್ದರೆ ನಿವಾರಣೆಯಾಗುವುದು. 

ಮಿಥುನ ರಾಶಿ :
ಮಿಥುನ ರಾಶಿಯವರ ಮೇಲೆ ಶಿವನ ವಿಶೇಷ ಅನುಗ್ರಹವಿರಲಿದೆ. ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಲಾಭವಾಗಬಹುದು. ಪರಸ್ಪರ ಸಂಬಂಧಗಳು ಮಧುರವಾಗಿರುತ್ತದೆ. ಕಚೇರಿಯಲ್ಲಿ ಸಮಯ ಉತ್ತಮವಾಗಿರುತ್ತದೆ. 

ಇದನ್ನೂ ಓದಿ Saturn Rise: ಹೋಳಿ ಹಬ್ಬಕ್ಕೂ ಒಂದು ದಿನ ಮುನ್ನ ಶನಿ ಉದಯ, ಈ 5 ರಾಶಿಗಳ ಸಂಕಷ್ಟ ಕಾಲ ಆರಂಭ!

ಧನು ರಾಶಿ :
ದೀರ್ಘಕಾಲದಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿರುವ ಕೆಲಸ ಪೂರ್ಣವಾಗಿ ಅದರಲ್ಲಿ ಯಶಸ್ಸು ಕೂಡಾ ಸಿಗಲಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈಶ್ವರನ ಕೃಪೆಯಿಂದ ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News