ಸರ್ಕಾರ ಪತನದ ಹಾದಿಯಲ್ಲಿದೆ: ಶಾಸಕ ಮಹೇಶ್ ಟೆಂಗಿನಕಾಯಿ

ಒಂದು ಕಡೆ ಕಾಂಗ್ರೆಸ್ ನಾಯಕರೇ ಡಿ.ಕೆ. ಶಿವಕುಮಾರ್ ಅವರನ್ನು  ಮುಖ್ಯಮಂತ್ರಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ15 ಜನ ಶಾಸರನ್ನ ಉಪ ಮುಖ್ಯಮಂತ್ರಿ ಮಾಡಬೇಕು ಅಂತಾ ಒತ್ತಾಯ ಕೇಳಿ ಬರ್ತಾಯಿದೆ. ನಿಮ್ಮ ಸರ್ಕಾರ ಏಕಿದೆ? ರಾಜ್ಯ ಸರ್ಕಾರದಲ್ಲಿ ಶಾಸಕರು ಏಕೆ ಬೇಕು? ಎಲ್ಲ33 ಜನರನ್ನ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ- ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ 

Written by - Yashaswini V | Last Updated : Jun 28, 2024, 04:41 PM IST
  • ಇಷ್ಟು ದಿನ ನಿಗಮ ಮಂಡಳಿ ಅಧ್ಯಕ್ಷರನ್ನ ಸಂಪುಟ ದರ್ಜೆ ಸ್ಥಾನ ಮಾನ ಕೊಟ್ಟಿದ್ದಿರಿ
  • ಮಂತ್ರಿಗಳೇ ಬೇಡಾ ಎಲ್ಲರನ್ನೂ ತೆಗೆದುಹಾಕಿ
  • 33 ಜನರನ್ನ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ- ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ
ಸರ್ಕಾರ ಪತನದ ಹಾದಿಯಲ್ಲಿದೆ: ಶಾಸಕ ಮಹೇಶ್ ಟೆಂಗಿನಕಾಯಿ title=

ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಶಾಸಕರು ಏಕೆ ಬೇಕು. ಎಲ್ಲ 33 ಜನರನ್ನ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ  (MLA Mahesh Tenginakai) ಲೇವಡಿ ಮಾಡಿದರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ  ಶಾಸಕ ಮಹೇಶ್ ಟೆಂಗಿನಕಾಯಿ, ಉಪ ಮುಖ್ಯಮಂತ್ರಿ  ಡಿ. ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂಬ ಒಕ್ಕಲಿಗ ಸಮಾಜದ ಶ್ರೀ ಚಂದ್ರಶೇಖರ ಗುರುಜೀ ಹೇಳಿಕೆ ವಿಚಾರ ಸೇರಿದಂತೆ ಶಾಸಕ ದಾವಣಗೆರೆ ಜಿಲ್ಲೆಯ ಶಾಸಕ  ಶಿವಗಂಗಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. 

ಈ ಸಂದರ್ಭದಲ್ಲಿ ಒಂದು ಕಡೆ ಕಾಂಗ್ರೆಸ್ (Congress) ನಾಯಕರೇ ಡಿ.ಕೆ. ಶಿವಕುಮಾರ್ ಅವರನ್ನು  ಮುಖ್ಯಮಂತ್ರಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ15 ಜನ ಶಾಸರನ್ನ ಉಪ ಮುಖ್ಯಮಂತ್ರಿ ಮಾಡಬೇಕು ಅಂತಾ ಒತ್ತಾಯ ಕೇಳಿ ಬರ್ತಾಯಿದೆ. ನಿಮ್ಮ ಸರ್ಕಾರ ಏಕಿದೆ? ರಾಜ್ಯ ಸರ್ಕಾರದಲ್ಲಿ ಶಾಸಕರು ಏಕೆ ಬೇಕು? ಎಲ್ಲ33 ಜನರನ್ನ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದರು. 

ಇದನ್ನೂ ಓದಿ- ಮಾಧ್ಯಮಗಳ ಮುಂದೆ ಮಾತನಾಡುವವರು, ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ: ಡಿಸಿಎಂ ಡಿಕೆ ಶಿವಕುಮಾರ್

ನಿಮ್ಮದೇ ಸರ್ಕಾರ ಇರುವಾಗ ಯಾಕಿಷ್ಟು ಗೊಂದಲ ಎಂದು ಪ್ರಶ್ನಿಸಿದ ಶಾಸಕ ಮಹೇಶ್ ಟೆಂಗಿನಕಾಯಿ(MLA Mahesh Tenginakai) , ಇಷ್ಟು ದಿನ ನಿಗಮ ಮಂಡಳಿ ಅಧ್ಯಕ್ಷರನ್ನ ಸಂಪುಟ ದರ್ಜೆ ಸ್ಥಾನ ಮಾನ ಕೊಟ್ಟಿದ್ದಿರಿ. ಮಂತ್ರಿಗಳೇ ಬೇಡಾ ಎಲ್ಲರನ್ನೂ ತೆಗೆದುಹಾಕಿ ಎಂದರು. 

ಕಾಂಗ್ರೆಸ್ ಇಂದು ಹೀನಾಯ ಸ್ಥಿತಿಗೆ ಹೋಗ್ತಾ ಇದ್ದು, ರಾಜ್ಯದ ಜನತೆಗೆ ಗ್ಯಾರಂಟಿ ಆಸೆ ಒಡ್ಡಿ ಅಧಿಕಾರಕ್ಕೆ ಬಂದಿದೆ.  ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಒಂದು ಕಡೆ ಗ್ಯಾರಂಟಿ ಹೆಸರಿನಲ್ಲಿ ಅಚಾನಕ್ ಆಗಿ ಅಧಿಕಾರಕ್ಕೆ ಬಂದರು. ಈಗ ಅದೇ ಗ್ಯಾರಂಟಿ ಮೇಲೆ 
2000 ರೂಪಾಯಿಯನ್ನ ಗ್ಯಾರಂಟಿ ಮೂಲಕ ಕೊಟ್ಟು ಹೆಚ್ಚಿಗೆ 4047  ಹೊರೆ ಹಾಕಲಾಗುತ್ತಿದೆ. ಈ ರೀತಿ ಪರೋಕ್ಷವಾಗಿ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಟೆಂಗಿನಕಾಯಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. 

ಇದನ್ನೂ ಓದಿ- ಬೆಂಗಳೂರು ವಿಶ್ವವಿಖ್ಯಾತವಾಗಲು ಕೆಂಪೇಗೌಡರು ಕಾರಣ:ಸಿಎಂ ಸಿದ್ದರಾಮಯ್ಯ

ಚುನಾವಣೆಗೋಸ್ಕರ ಐದು ಗ್ಯಾರಂಟಿ ತರಲಾಯಿತು: 
ಅಭಿವೃದ್ಧಿ ಮಾಡಲು ಜನರು ಆರ್ಶೀವಾದ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ರಾಜ್ಯ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಇದು ಸರ್ಕಾರ ಪತನ ಆಗುವ ಮಟ್ಟಿಗೆ ಹೋಗಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆತಾ ಇಲ್ಲ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲನೆ ಮಾಡಲಾಗಿದೆ. 
ಯಾವುದೇ ಹಣ ಇಲ್ಲ, ಅನುದಾನ ಇಲ್ಲ. ಅಭಿವೃದ್ಧಿ ಕಾಮಗಾರಿ ಮರೆಮಾಚಲು ಈಗ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಚುನಾವಣೆಗೋಸ್ಕರ ಐದು ಗ್ಯಾರಂಟಿ (Five guarantees) ತರಲಾಯಿತು. ಈಗ ಯಾವ ಮಟ್ಟಕ್ಕೆ ಹೋಗಿದೆ ನೋಡಿ  ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News