ಪುರಿ ಜಗನ್ನಾಥ ದೇವಾಲಯದ ಮೆಟ್ಟಿಲುಗಳ ನಿಗೂಢತೆ ಬಗ್ಗೆ ನಿಮಗೆ ಗೊತ್ತಾ..?

Unknown Facts about Puri Jagannath Temple: ಪುರಿ ಜಗನ್ನಾಥ ದೇವಾಲಯವು ಭಾರತೀಯ ತೀರ್ಥಯಾತ್ರೆಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನ ಅದ್ಭುತ ವಾಸ್ತುಶಿಲ್ಪ, ರಥಯಾತ್ರೆ ಹಾಗೂ ಅನೇಕ ನಿಗೂಢತೆಗಳಿಗೆ ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ಜನಪ್ರಿಯ ಕಥೆಗಳಿವೆ, ಅವುಗಳಲ್ಲಿ ಪ್ರಮುಖವೊಂದು 22 ಮೆಟ್ಟಿಲುಗಳಲ್ಲಿ ಮೂರನೇ ಮೆಟ್ಟಿಲಿನ ಕಥೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

Unknown Facts about Puri Jagannath Temple: ಪುರಿ ಜಗನ್ನಾಥ ದೇವಾಲಯವು ಭಾರತೀಯ ತೀರ್ಥಯಾತ್ರೆಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನ ಅದ್ಭುತ ವಾಸ್ತುಶಿಲ್ಪ, ರಥಯಾತ್ರೆ ಹಾಗೂ ಅನೇಕ ನಿಗೂಢತೆಗಳಿಗೆ ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ಜನಪ್ರಿಯ ಕಥೆಗಳಿವೆ, ಅವುಗಳಲ್ಲಿ ಪ್ರಮುಖವೊಂದು 22 ಮೆಟ್ಟಿಲುಗಳಲ್ಲಿ ಮೂರನೇ ಮೆಟ್ಟಿಲಿನ ಕಥೆ.  

2 /7

ಪುರಿ ಜಗನ್ನಾಥ ದೇವಾಲಯವು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯವು ಭಜನೆಗಳಿಂದ ಪ್ರತಿಧ್ವನಿಸುತ್ತಿರುವಾಗ, ಭಕ್ತರು ತಮ್ಮ ಪಾಪಗಳನ್ನು ನಿವಾರಣೆ ಮಾಡಿಕೊಳ್ಳಲು ಹಾಗೂ ಮೋಕ್ಷವನ್ನು ಪಡೆಯಲು ಇಲ್ಲಿ ಬರುತ್ತಾರೆ. ಜಗನ್ನಾಥ ದೇವರನ್ನು ಸಮೀಪಿಸಲು 22 ಮೆಟ್ಟಿಲುಗಳನ್ನು ಹತ್ತಬೇಕು. ಆದರೆ, ಈ ಮೆಟ್ಟಿಲುಗಳಲ್ಲಿ ಮೂರನೇ ಮೆಟ್ಟಿಲು ಒಂದು ವಿಶೇಷ ಮಹತ್ವವನ್ನು ಹೊಂದಿದೆ.  

3 /7

ಒಂದು ದಿನ, ಯಮಧರ್ಮರಾಜನು ಶ್ರೀಕೃಷ್ಣನ ಬಳಿಗೆ ಬಂದು ತನ್ನ ನೋವನ್ನು ಹೊರಹಾಕುತ್ತಾನೆ. ಜನರು ತಮ್ಮ ಪಾಪಗಳನ್ನು ನಿವಾರಣೆ ಮಾಡಿಕೊಳ್ಳಲು ಜಗನ್ನಾಥ ದೇವಾಲಯಕ್ಕೆ ಬರುತ್ತಿದ್ದಾರೆ ಹಾಗೂ ಯಮಲೋಕಕ್ಕೆ ಯಾರೂ ಬರುತ್ತಿಲ್ಲ ಎಂದು ಹೇಳುತ್ತಾನೆ. ಇದರಿಂದ ಅವನ ಲೋಕದ ಸಂಕಷ್ಟಗಳು ಹೆಚ್ಚುತ್ತವೆ. ಅದಕ್ಕಾಗಿ ಯಮನು, ಜಗನ್ನಾಥ ದೇವರ ಆಶೀರ್ವಾದದಿಂದ ಮೂರನೇ ಮೆಟ್ಟಿಲಿನಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ. ಇದನ್ನು "ಯಮಶಿಲೆ" ಎನ್ನುತ್ತಾರೆ. ಭಕ್ತರು, ಯಮಶಿಲೆಯನ್ನು ದಾಟಿದರೆ, ಅವರಾದ್ಯಂತ ಮಾಡಿರುವ ಪುಣ್ಯಗಳು ನಶಿಸುತ್ತವೆ ಮತ್ತು ಮರಣಾ ನಂತರ ನರಕಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ.  

4 /7

ಯಮಶಿಲೆಯ ಕುರಿತಾಗಿ ಇನ್ನೊಂದು ಕಥೆಯೂ ಜನಪ್ರಿಯವಾಗಿದೆ. ಜಗನ್ನಾಥ ದೇವರನ್ನು ದರ್ಶನ ಮಾಡಲು ತೆರಳುವಾಗ, ಭಕ್ತರು ಯಮಶಿಲೆ ಮೆಟ್ಟಿದರೆ, ಅವರ ಎಲ್ಲಾ ಪಾಪಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಹಿಂದಿರುಗುವಾಗ ಈ ಮೆಟ್ಟಿಲನ್ನು ಹತ್ತಿದರೆ, ಅವರು ಪಡೆದ ಪುಣ್ಯಗಳು ಕಳೆದುಹೋಗುತ್ತವೆ. ಆದ್ದರಿಂದ, ದೇವಾಲಯದಿಂದ ಹೊರಬರುವಾಗ ಭಕ್ತರು ಬೇರೆ ದಾರಿಯ ಮೂಲಕ ಹೊರಹೋಗುತ್ತಾರೆ.  

5 /7

ಜಗನ್ನಾಥ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ರಥಯಾತ್ರೆ. ಜುಲೈ 7 ರಂದು ಈ ವರ್ಷ ರಥಯಾತ್ರೆ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಭಕ್ತರು ದೇವರನ್ನು ದರ್ಶನ ಮಾಡುವುದು ನಿಷೇಧಿಸಲಾಗಿದೆ. ಭಗವಂತನು ಅನಾರೋಗ್ಯಕ್ಕೆ ಒಳಗಾಗಿರುವ ಸಮಯದಲ್ಲಿ, 100 ಕಳಸ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ ಮತ್ತು ಗಿಡಮೂಲಿಕೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸಮಯದಲ್ಲಿ ದೇವರು ವಿಶ್ರಾಂತಿ ಪಡೆದ ನಂತರ, ಭಕ್ತರು ರಥಯಾತ್ರೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.   

6 /7

ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು, ರಥವನ್ನು ಎಳೆಯುವುದರಿಂದ ತಮ್ಮ ಜೀವನದಲ್ಲಿ ಒಮ್ಮೆಲೆ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.  

7 /7

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.