ಶೀಘ್ರದಲ್ಲೇ ಈ ರಾಶಿಯವರ ತಿಜೋರಿ ತುಂಬಲಿದ್ದಾನೆ ಕೇತು

Ketu Gochar Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳ ಹೆಸರು ಕೇಳಿದೊಡನೆಯೇ ಕೆಲವರು ಭಯಭೀತರಾಗುತ್ತಾರೆ. ಆದರೆ, ಈ ಗ್ರಹಗಳು ಸದಾ ಕೆಟ್ಟ ಫಲಗಳನ್ನೇ ನೀಡುತ್ತವೆ ಎಂದೇನೂ ಅರ್ಥವಲ್ಲ. ಜಾತಕದಲ್ಲಿ ರಾಹು-ಕೇತು ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಅದು ವ್ಯಕ್ತಿಯ ಜೀವನದಲ್ಲಿ ಬಂಗಾರದ ಸಮಯವನ್ನೇ ತರುತ್ತದೆ ಎಂದು ಸಹ ಹೇಳಲಾಗುತ್ತದೆ. 

Written by - Yashaswini V | Last Updated : Apr 14, 2023, 01:33 PM IST
  • 2023ರ ಅಕ್ಟೋಬರ್ ತಿಂಗಳಿನಲ್ಲಿ ಕೇತು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ.
  • ಅಕ್ಟೋಬರ್ 30ರಂದು ಕೇತು ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
  • ಕೇತು ರಾಶಿ ಪರಿವರ್ತನೆ ಬಳಿಕ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರು ಜೀವನದಲ್ಲಿ ಅಪಾರ ಕೀರ್ತಿ ಗೌರವವನ್ನು ಗಳಿಸಲಿದ್ದಾರೆ.
ಶೀಘ್ರದಲ್ಲೇ ಈ ರಾಶಿಯವರ ತಿಜೋರಿ ತುಂಬಲಿದ್ದಾನೆ ಕೇತು title=
Ketu Gochar 2023

Ketu Transit Good Effect: ಸಾಮಾನ್ಯವಾಗಿ ಶನಿ, ರಾಹು, ಕೇತು ಗ್ರಹಗಳ ಹೆಸರು ಕೇಳಿದೊಡನೆ ಜನರ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳೇ ಬರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಪಾಪ ಗ್ರಹಗಳು, ದುಷ್ಟ ಗ್ರಹಗಳು ಎಂದು ಬಣ್ಣಿಸಲ್ಪಡುವ ಬಣ್ಣಿಸಲ್ಪಡುವ ರಾಹು-ಕೇತುಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಅಂತೆಯೇ ಈ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯು ಪ್ರತಿ ಹಂತದಲ್ಲಿಯೂ ಯಶಸ್ಸಿನ ಶಿಖರವನ್ನು ಏರುತ್ತಾನೆ ಎಂದು ಹೇಳಲಾಗುತ್ತದೆ. 

ಇದೀಗ 2023ರ ಅಕ್ಟೋಬರ್ ತಿಂಗಳಿನಲ್ಲಿ ಕೇತು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ. ಅಕ್ಟೋಬರ್ 30ರಂದು ಕೇತು ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಕೇತು ರಾಶಿ ಪರಿವರ್ತನೆ ಬಳಿಕ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರು ಜೀವನದಲ್ಲಿ ಅಪಾರ ಕೀರ್ತಿ ಗೌರವವನ್ನು ಗಳಿಸಲಿದ್ದಾರೆ. ಮಾತ್ರವಲ್ಲ, ಅವರ ತಿಜೋರಿಯೂ ತುಂಬಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಕೇತು ಸಂಕ್ರಮಣ ಈ ರಾಶಿಯವರಿಗೆ ಪ್ರತಿ ಹಂತದಲ್ಲೂ ನೀಡುತ್ತದೆ ಯಶಸ್ಸು: 
ವೃಷಭ ರಾಶಿ: 

ಕೇತು ರಾಶಿ ಪರಿವರ್ತನೆಯು ವೃಷಭ ರಾಶಿಯವರ ಜೀವನದಲ್ಲಿ ಶುಭ ದಿನಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡದಂತಹ ಸಮಸ್ಯೆಗಳಿಂದ ಹೊರಬರುತ್ತೀರಿ. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದ್ದು ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುವ ಸಾಧ್ಯತೆ ಇದೆ. 

ಇದನ್ನೂ ಓದಿ- ಈ ವರ್ಷ ಅಕ್ಷಯ ತೃತೀಯದಲ್ಲಿ ರೂಪುಗೊಳ್ಳಲಿದೆ 7 ಮಹಾನ್ ಯೋಗ

ಸಿಂಹ ರಾಶಿ: 
2023ರಲ್ಲಿ ಕೇತು ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಅಕ್ಟೋಬರ್ ತಿಂಗಳ ಬಳಿಕ ಸಿಂಹ ರಾಶಿಯವರು ತಾವು ಕೈ ಹಾಕುವ ಪ್ರತಿ ಕೆಲಸದಲ್ಲಿಯೂ ಕೂಡ ಯಶಸ್ಸನ್ನು ಗಳಿಸಲಿದ್ದು, ಆಸ್ತಿ-ವ್ಯವಹಾರದಲ್ಲಿಯೂ ಬಂಪರ್ ಪ್ರಯೋಜನವನ್ನು ಪಡೆಯುವ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ. 

ವೃಶ್ಚಿಕ ರಾಶಿ: 
ಅಕ್ಟೋಬರ್ ತಿಂಗಳಿನಲ್ಲಿ ಕೇತು ರಾಶಿ ಪರಿವರ್ತನೆಯ ಬಳಿಕ ವೃಶ್ಚಿಕ ರಾಶಿಯವರ ಜೀವನದಲ್ಲಿ ಸುವರ್ಣ ಯುಗ ಆರಂಭವಾಗಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘಕಾಲದ ಕೆಲಸಗಳು ಪೂರ್ಣಗೊಳ್ಳಲಿವೆ. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದ್ದು, ನಿಮ್ಮ ಬಹುದಿನದ ಕನಸುಗಳು ಈಡೇರಲಿವೆ.  

ಧನು ರಾಶಿ: 
ಕೇತು ಸಂಕ್ರಮಣದಿಂದ ಧನು ರಾಶಿಯವರ ಜೀವನದಲ್ಲಿಯೂ ಸಹ ಶುಭ ದಿನಗಳು ಆರಂಭವಾಗಲಿವೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ವ್ಯಾಪಾರ-ವ್ಯವಹಾರದಲ್ಲಿಯೂ ಬಂಪರ್ ಲಾಭವನ್ನು ನಿರೀಕ್ಷಿಸಬಹುದಾಗಿದೆ. 

ಇದನ್ನೂ ಓದಿ- Mangala Gochar: ಮುಂದಿನ ಮೂರು ತಿಂಗಳು ಈ ರಾಶಿಯವರಿಗೆ ಬಂಪರ್ ಧನಲಾಭ

ಮಕರ ರಾಶಿ: 
ಕೇತು ಸಂಕ್ರಮಣದೊಂದಿಗೆ ಮಕರ ರಾಶಿಯವರ ಜೀವನದಲ್ಲಿ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ವಿತ್ತೀಯ ಸಮಸ್ಯೆಗಳು ಕೊನೆಗೊಳ್ಳಲಿವೆ. ವೃತ್ತಿ ರಂಗದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮನ್ನಣೆ ನೀಡಿ ಪ್ರಮೋಷನ್ ನೀಡುವ ಸಾಧ್ಯತೆಯೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News