Ketu Gochar: ಪಾಪ ಗ್ರಹ ಕೇತು ನಕ್ಷತ್ರ ಬದಲಾವಣೆಯಿಂದ ಈ 5 ರಾಶಿಯವರಿಗೆ ಧನ ಹಾನಿ

Ketu Nakshatra Change: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ, ಕ್ರೂರ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಕೇತು ಗ್ರಹವು ಇಂದು ತನ್ನ ನಕ್ಷತ್ರವನ್ನು ಬದಲಿಸಲಿದ್ದು ಚಿತ್ರ ನಕ್ಷತ್ರವನ್ನು ಪ್ರವೇಶಿಸಲಿದೆ. ಯಾವುದೇ ಒಂದು ಗ್ರಹದ ರಾಶಿ ಪರಿವರ್ತನೆಯಾಗಲಿ ಇಲ್ಲವೇ ನಕ್ಷತ್ರ ಪರಿವರ್ತನೆ ಆಗಲಿ ಪ್ರತಿಯೊಂದು ರಾಶಿಯ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಇದೀಗ ಇಂದು ಕೇತುವಿನ ನಕ್ಷತ್ರ ಪರಿವರ್ತನೆಯಿಂದ ಕೆಲವು ರಾಶಿಯವರು ಆರ್ಥಿಕ ನಷ್ಟದ ಜೊತೆಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jun 26, 2023, 08:53 AM IST
  • ಪಾಪ ಗ್ರಹ ಕೇತು ನಕ್ಷತ್ರ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.
  • ಆದರೂ, ಚಿತ್ರಾ ನಕ್ಷತ್ರದಲ್ಲಿ ಕೇತು ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ನಷ್ಟವನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
  • ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...
Ketu Gochar: ಪಾಪ ಗ್ರಹ ಕೇತು ನಕ್ಷತ್ರ ಬದಲಾವಣೆಯಿಂದ ಈ 5 ರಾಶಿಯವರಿಗೆ ಧನ ಹಾನಿ  title=
Ketu nakshatra parivartane

Ketu Nakshatra Parivartane Effect: ವೈದಿಕ ಜ್ಯೋತಿಷ್ಯದಲ್ಲಿ ಕೇತು ಗ್ರಹವನ್ನು ದುಷ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ಕ್ರೂರ ಗ್ರಹ, ಪಾಪ ಗ್ರಹ ಎಂತಲೂ ಕರೆಯಲ್ಪಡುವ ಕೇತುವು ಇಂದು( ಜೂನ್ 26) ಚಿತ್ರ ನಕ್ಷತ್ರವನ್ನು ಪ್ರವೇಶಿಸುತ್ತದೆ. ಜೂನ್ 26, 2023, ಸೋಮವಾರ ಸಂಜೆ, ಕೇತು ಗ್ರಹವು ತನ್ನ ನಕ್ಷತ್ರವನ್ನು ಬದಲಾಯಿಸಿದ ನಂತರ ಚಿತ್ರ ನಕ್ಷತ್ರವನ್ನು ಪ್ರವೇಶಿಸುತ್ತಿದೆ. ಕೇತುವಿನ ನಕ್ಷತ್ರ ಪರಿವರ್ತನೆಯ ಪರಿಣಾಮ ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ.

ಚಿತ್ರ ನಕ್ಷತ್ರದಲ್ಲಿ ಕೇತು ಗೋಚರ: ಇಂದಿನಿಂದ ಈ 5 ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ: 
ಮಿಥುನ ರಾಶಿ: 

ಕೇತು ಗ್ರಹದ ನಕ್ಷತ್ರ ಪರಿವರ್ತನೆಯು ಮಿಥುನ ರಾಶಿಯ ಜನರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ ಸಮಯದಲ್ಲಿ, ಮಿಥುನ ರಾಶಿಯವರ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಈ ರಾಶಿಯವರು ತಮ್ಮ ಮಕ್ಕಳ ಕಡೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ತಾಳ್ಮೆ ಕಳೆದುಕೊಳ್ಳಬೇಡಿ. ಮಕ್ಕಳೊಂದಿಗೆ ನಯವಾಗಿ ಮಾತನಾಡಿ ಅವರನ್ನು ಸರಿ ದಾರಿಗೆ ತನ್ನಿ. 

ಕರ್ಕಾಟಕ ರಾಶಿ: 
ಚಿತ್ರ ನಕ್ಷತ್ರದಲ್ಲಿ ಕೇತುವಿನ ಬದಲಾವಣೆಯು ಕರ್ಕ ರಾಶಿಯ ಜನರ ಮೇಲೂ ಅಶುಭ ಪರಿಣಾಮ ಬೀರಬಹುದು. ಈ ಸಮಯದಲ್ಲಿ, ಈ ರಾಶಿಯವರು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ಮನೆಯ ವಾತಾವರಣವು ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ.  ಹಣವನ್ನು ಅನಗತ್ಯವಾಗಿ ಖರ್ಚು ಮಾಡಬಹುದು. ಈ ಸಮಯದಲ್ಲಿ, ನೀವು ಪ್ರಮುಖ ಆಸ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೌಟುಂಬಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ನಿಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸಬಹುದು. 

ಇದನ್ನೂ ಓದಿ- Weekly Horoscope: ಜೂನ್ ಕೊನೆಯ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ

ಕನ್ಯಾ ರಾಶಿ: 
ಕೇತುವಿನ ನಕ್ಷತ್ರ ಬದಲಾವಣೆಯು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ, ಕುಟುಂಬದೊಂದಿಗೆ ಸಂಬಂಧಗಳು ಹದಗೆಡಬಹುದು. ಮತ್ತೊಂದೆಡೆ, ಆದಾಯ ಕ್ಷೇತ್ರದಲ್ಲೂ ಸ್ಥಳೀಯರು ಏರಿಳಿತಗಳನ್ನು ನೋಡಬೇಕಾಗಬಹುದು. ಇದರಿಂದಾಗಿ ಉಳಿತಾಯದಲ್ಲಿಯೂ ಏರಿಳಿತಗಳು ಕಂಡು ಬರುತ್ತದೆ. ಜನರು ನಿಮ್ಮ ಭಾವನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಇದು ನಿಮ್ಮ ಮಾನಸಿಕ ಒತ್ತಡವನ್ನೂ ಹೆಚ್ಚಿಸಬಹುದು. 

ಮಕರ ರಾಶಿ: 
ಜ್ಯೋತಿಷಿಗಳ ಪ್ರಕಾರ, ಚಿತ್ರಾನಕ್ಷತ್ರದಲ್ಲಿ ಕೇತುವಿನ ಪ್ರವೇಶವು ಈ ಸ್ಥಳೀಯರಿಗೆ ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ, ಮಕರ ರಾಶಿಯವರು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮದ ಅಗತ್ಯವಿದೆ. ಆದಾಗ್ಯೂ,  ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದಿರುವುದು ನಿರಾಶೆ ಅಥವಾ ಕಿರಿಕಿರಿಗೆ ಕಾರಣವಾಗಬಹುದು. ಮಾತ್ರವಲ್ಲ, ಇದು ನಿಮ್ಮನ್ನು ಮಾನಸಿಕ ಒತ್ತಡದಿಂದ ಬಳಲುವಾಂಟೆಯೂ ಮಾಡಬಹುದು. ಈ ಸಮಯದಲ್ಲಿ, ಗೌರವದಲ್ಲಿ ನಷ್ಟವಾಗಬಹುದು.

ಇದನ್ನೂ ಓದಿ- Budhaditya RajYoga: ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಅಪಾರ ಧನ ಸಂಪತ್ತು

ಮೀನ ರಾಶಿ: 
ಚಿತ್ರಾ ನಕ್ಷತ್ರದಲ್ಲಿ ಕೇತುವಿನ ಪ್ರವೇಶದಿಂದಾಗಿ ಮೀನ ರಾಶಿಯವರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳಿರಬಹುದು, ಆದ್ದರಿಂದ ಜಾಗರೂಕರಾಗಿರಿ. ಅಲ್ಲದೆ, ಹಣಕಾಸಿನ ವಿಷಯದಲ್ಲಿಯೂ ಕೂಡ ಸಮಯ ಮಂಗಳಕರವಾಗಿಲ್ಲದ ಕಾರಣ ನೀವು ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸಿ. ಅಪಘಾತದ ಸಾಧ್ಯತೆ ಇರುವುದರಿಂದ ವಾಹನ ಚಾಲನೆಯಲ್ಲಿ ಬಹಳ ಜಾಗರೂಕರಾಗಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News