ಗುರು ಉದಯದೊಂದಿಗೆ ರೂಪುಗೊಳ್ಳುವುದು ಹಂಸ ರಾಜಯೋಗ! ರಾತೋರಾತ್ರಿ ಸಿರಿವಂತರಾಗುತ್ತಾರೆ ಈ ರಾಶಿಯವರು

Jupiter Rise 2023: ಜ್ಯೋತಿಷ್ಯದಲ್ಲಿ, ಗುರುವಿಗೆ ಎಲ್ಲಾ ಗ್ರಹಗಳ ಯಜಮಾನ ಎನ್ನುವ ಸ್ಥಾನವನ್ನು ನೀಡಲಾಗಿದೆ. ಗುರು  ಸಂಪತ್ತು, ಐಶ್ವರ್ಯ ಮತ್ತು ಸೌಕರ್ಯಗಳ  ಪ್ರತೀಕ. ಅಸ್ತ್ರ ಸ್ಥಿತಿಯಲ್ಲಿರುವ ಗುರು ಗ್ರಹ ಏಪ್ರಿಲ್ 29 ರಂದು ಉದಯಿಸಲಿದ್ದಾರೆ. ಗುರುವಿನ ಉದಯದೊಂದಿಗೆ ಹಂಸ ರಾಜಯೋಗ  ನಿರ್ಮಾಣವಾಗುತ್ತದೆ. ಈ ಯೋಗಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಈ ಯೋಗದ ಕಾರಣ ಕೆಲವು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಹೋಗುತ್ತದೆ. 

Written by - Ranjitha R K | Last Updated : Apr 14, 2023, 01:02 PM IST
  • ಗುರು ಉದಯದೊಂದಿಗೆ ಹಂಸ ರಾಜ ಯೋಗ
  • ಈ ಯೋಗಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ.
  • ಕೆಲವು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಹೋಗುತ್ತದೆ.
ಗುರು ಉದಯದೊಂದಿಗೆ ರೂಪುಗೊಳ್ಳುವುದು ಹಂಸ ರಾಜಯೋಗ!  ರಾತೋರಾತ್ರಿ  ಸಿರಿವಂತರಾಗುತ್ತಾರೆ ಈ ರಾಶಿಯವರು  title=

Jupiter Rise 2023 : ಪ್ರತಿಯೊಂದು ಗ್ರಹಗಳು ಕೂಡಾ ತಮ್ಮ ಚಲನೆಯ ಮೂಲಕ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತದೆ. ಈ ಪೈಕಿ ಕೆಲವು ಗ್ರಹಗಳು ನಿಧಾನವಾಗಿ ಚಲಿಸಿದರೆ ಇನ್ನು ಕೆಲವು ಗ್ರಹಗಳು ಬಹಳ ಬೇಗನೆ ರಾಶಿ ಪರಿವರ್ತನೆ ಮಾಡುತ್ತದೆ. ಸೂರ್ಯ, ಬುಧ, ಮಂಗಳ ಮತ್ತು ಶುಕ್ರ ಈ ನಾಲ್ಕು 4 ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಚಂದ್ರ  ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತೆರಳಲು 54 ಗಂಟೆಗಳು ಬೇಕು. ಗುರು ಗ್ರಹ ತನ್ನ ರಾಶಿಯನ್ನು ಬದಲಾಯಿಸಲು 12 ತಿಂಗಳು ಅಂದರೆ ಒಂದು ವರ್ಷ ತೆಗೆದುಕೊಳ್ಳುತ್ತದೆ. ಇನ್ನು ರಾಹು ಮತ್ತು ಕೇತು ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತೆರಳಲು 18 ತಿಂಗಳುಗಳು ಬೇಕಾಗುತ್ತದೆ. ನವಗ್ರಹಗಳ ಪೈಕಿ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ರಾಶಿ ಪರಿವರ್ತನೆಯಾಗಲು ಎರಡೂವರೆ ವರ್ಷಗಳನ್ನೇ ತೆಗೆದುಕೊಳ್ಳುತ್ತಾನೆ.

ಗುರು ಉದಯದೊಂದಿಗೆ ಹಂಸ ರಾಜ ಯೋಗ : 
ಈ ರೀತಿ ಗ್ರಹಗಳು ರಾಶಿ ಬದಲಾಯಿಸಿಕೊಳ್ಳುವಾಗ ಅದರ ಪರಿಣಾಮ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕೂಡಾ ಗೋಚರಿಸುತ್ತದೆ. ಕೆಲವೊಮ್ಮೆ ಕೆಲವು ಯೋಗಗಳು ರೂಪುಗೊಳ್ಳುತ್ತವೆ. ಜ್ಯೋತಿಷ್ಯದಲ್ಲಿ, ಗುರುವಿಗೆ ಎಲ್ಲಾ ಗ್ರಹಗಳ ಯಜಮಾನ ಎನ್ನುವ ಸ್ಥಾನವನ್ನು ನೀಡಲಾಗಿದೆ. ಗುರು  ಸಂಪತ್ತು, ಐಶ್ವರ್ಯ ಮತ್ತು ಸೌಕರ್ಯಗಳ  ಪ್ರತೀಕ. ಯಾರ ಜಾತಕದಲ್ಲಿ ಗುರುವು ಶುಭ ಸ್ಥಾನದಲ್ಲಿದ್ದಾನೋ ಅವರು ಜೀವನದಲ್ಲಿ ಶುಭ ಫಲಿತಾಂಶಗಳನ್ನೇ ಪಡೆಯುತ್ತಾರೆ. ಅಸ್ತ್ರ ಸ್ಥಿತಿಯಲ್ಲಿರುವ ಗುರು ಗ್ರಹ ಏಪ್ರಿಲ್ 29 ರಂದು ಉದಯಿಸಲಿದ್ದಾರೆ. ಗುರುವಿನ ಉದಯದೊಂದಿಗೆ ಹಂಸ ರಾಜಯೋಗ ನಿರ್ಮಾಣವಾಗುತ್ತದೆ. ಈ ಯೋಗಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಈ ಯೋಗದ ಕಾರಣ ಕೆಲವು ರಾಶಿಯವರ ಜೀವನದ ಕಷ್ಟಗಳೆಲ್ಲಾ ಕಳೆದು ಹೋಗುತ್ತದೆ. 

ಇದನ್ನೂ ಓದಿ : Surya Gochar 2023: ಕೆಲವೇ ಗಂಟೆಗಳಲ್ಲಿ 'ಬಲಶಾಲಿ' ಸ್ಥಿತಿಗೆ ಸೂರ್ಯನ ಪ್ರವೇಶ, ಈ ಜನರ ಮೇಲೆ ಅಪಾರ ಧನವೃಷ್ಟಿ!

ಕಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ದೇವಗುರುವಿನ ಉದಯದಿಂದಾಗಿ ಬಹಳಷ್ಟು ಲಾಭವಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭ ಫಲಗಳನ್ನೇ ಪಡೆಯುತ್ತಾರೆ. ಏಪ್ರಿಲ್ 29 ರ  ನಂತರ ಯಾವ ಕೆಲಸಕ್ಕೆ ಕೈ ಹಾಕಿದರೂ ಅಲ್ಲಿ ಯಶಸ್ಸು ಕಾಣುತ್ತಾರೆ. ಕಟಕ ರಾಶಿಯವರ ಮನಸ್ಸಿನ ಇಚ್ಚೆಗಳು ಈಡೇರುವ ಕಾಲ ಇದು. ಹೊಸ ಉದ್ಯೋಗದ  ಆಫರ್ ಬರಬಹುದು. 

ಧನು ರಾಶಿ :
ಗುರುಗ್ರಹದ ಉದಯವು ಧನು ರಾಶಿಯವರಿಗೆ  ಕೂಡಾ ಪ್ರಯೋಜನಕಾರಿಯಾಗಿರಲಿದೆ. ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಕಷ್ಟಗಳು ಕಳೆದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯ. ವಾಹನ ಖರೀದಿ ಯೋಗ ಕೂಡಿ ಬರುತ್ತದೆ. 

ಇದನ್ನೂ ಓದಿ : Married Women: ವಿವಾಹಿತ ಮಹಿಳೆಯರು ಅಪ್ಪಿತಪ್ಪಿಯೂ ಕೂಡ ತಮ್ಮೀ ವಸ್ತುಗಳನ್ನು ಇತರರಿಗೆ ನೀಡಬಾರದು, ಇಲ್ದಿದ್ರೇ..!

ಮೀನ ರಾಶಿ :
ಗುರುಗ್ರಹದ ಉದಯವು ಮೀನ ರಾಶಿಯವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಗುರುಗ್ರಹದ ಉದಯದಿಂದ ರೂಪುಗೊಳ್ಳುವ ಹಂಸ ರಾಜಯೋಗವು ಮೀನ ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹಣದ ಹೊಸ ಮೂಲಗಳು ಸೃಷ್ಟಿಯಾಗಿ, ವ್ಯಾಪಾರದಲ್ಲಿ ಪ್ರಗತಿಯಾಗುವುದು. ಉದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಿಗುವುದು. 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News