ಸಾವಿನ ನಂತರ, ಆತ್ಮ ದೇಹ ಬಿಟ್ಟು ತೆರಳುವುದು ಈ ಅಂಗದ ಮೂಲಕವೇ !ಹೀಗಿರುತ್ತದೆಯಂತೆ ಪ್ರಾಣ ಪಕ್ಷಿ ಹಾರುವ ಪ್ರಕ್ರಿಯೆ !

ಗರುಡ ಪುರಾಣದ ಪ್ರಕಾರ, ದೇಹದಲ್ಲಿ ಒಂಭತ್ತು ಬಾಗಿಲುಗಳಿವೆ. ಅದರ ಮೂಲಕ ಪ್ರಾಣ ಅಂದರೆ ಆತ್ಮವು ಹೊರಬರುತ್ತದೆ.

Written by - Ranjitha R K | Last Updated : Dec 30, 2024, 07:34 PM IST
  • ಹುಟ್ಟಿದ ನಂತರ ಸಾವು ಬರಲೇಬೇಕು ಎನ್ನುವುದು ಈ ಸೃಷ್ಟಿಯ ಅತಿದೊಡ್ಡ ಸತ್ಯ
  • ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
  • ಭೂಮಿಯಲ್ಲಿ ಹುಟ್ಟಿದವನು ಒಂದು ದಿನ ಖಂಡಿತವಾಗಿಯೂ ಸಾಯಲೇಬೇಕು.
ಸಾವಿನ ನಂತರ, ಆತ್ಮ ದೇಹ ಬಿಟ್ಟು ತೆರಳುವುದು ಈ ಅಂಗದ ಮೂಲಕವೇ !ಹೀಗಿರುತ್ತದೆಯಂತೆ ಪ್ರಾಣ ಪಕ್ಷಿ ಹಾರುವ ಪ್ರಕ್ರಿಯೆ !  title=

ಬೆಂಗಳೂರು : ಹುಟ್ಟಿದ ನಂತರ ಸಾವು ಬರಲೇಬೇಕು ಎನ್ನುವುದು ಈ ಸೃಷ್ಟಿಯ ಅತಿದೊಡ್ಡ ಸತ್ಯ. ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ಹುಟ್ಟಿದವನು ಒಂದು ದಿನ ಖಂಡಿತವಾಗಿಯೂ ಸಾಯಲೇಬೇಕು. ಆದರೆ ಈ ಸಾವು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ? ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಯಾರಿಗೂ ಗೊತ್ತಿಲ್ಲ. ಗರುಡ ಪುರಾಣದಲ್ಲಿ ಸಾವಿಗೆ ಸಂಬಂಧಿಸಿದ ಇಂತಹ ಅನೇಕ ರಹಸ್ಯಗಳನ್ನು ಹೇಳಲಾಗಿದೆ. ಈ ಸತ್ಯಗಳು ನಮ್ಮನ್ನು ದಿಗ್ಭ್ರಮೆಗೊಳಿಸಿ ಬಿಡುತ್ತವೆ.  

ಆತ್ಮ ದೇಹದಿಂದ ಹೊರ ಹೋಗುವುದು ಈ ಅಂಗದಿಂದ : 
ಗರುಡ ಪುರಾಣದ ಪ್ರಕಾರ, ದೇಹದಲ್ಲಿ ಒಂಭತ್ತು ಬಾಗಿಲುಗಳಿವೆ. ಅದರ ಮೂಲಕ ಪ್ರಾಣ ಅಂದರೆ ಆತ್ಮವು ಹೊರಬರುತ್ತದೆ. ಈ ಬಾಗಿಲುಗಳೆಂದರೆ  ಎರಡು ಕಣ್ಣುಗಳು, ಎರಡು ಕಿವಿಗಳು, ಬಾಯಿ, ಎರಡು ಮೂಗಿನ ಹೊಳ್ಳೆಗಳು ಮತ್ತು ದೇಹದ ವಿಸರ್ಜನಾ ಅಂಗಗಳು. ಇವುಗಳಲ್ಲಿ ಒಂದರ ಮೂಲಕವೇ ಆತ್ಮವು ದೇಹವನ್ನು ತೊರೆದು ಹೊರಕ್ಕೆ ಹೋಗುತ್ತದೆ. 

ಇದನ್ನೂ ಓದಿ :  2025ರಲ್ಲಿ ಮನೆ ನಿರ್ಮಿಸಲು ಈ ತಿಂಗಳು ತುಂಬಾ ಮಂಗಳಕರ; ನಿಮ್ಮ ಸಂಪತ್ತು ಹೆಚ್ಚಾಗುತ್ತದೆ!!

ಸಾವಿನ ಸಮಯದಲ್ಲಿ ಯಾರ ಕಣ್ಣುಗಳು ತಿರುಗುತ್ತವೆ?: 
ತನ್ನ ಜೀವನದುದ್ದಕ್ಕೂ ಮೋಹಗ್ರಸ್ತನಾಗಿರುತ್ತಾನೆ, ಯಾವ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾನೆ ಅಂತಃ ವ್ಯಕ್ತಿಯ ಆತ್ಮ ಕಣ್ಣಿನ ಮೂಲಕವೇ ಹೊರಬರುತ್ತದೆಯಂತೆ. ಸಾವಿನ ಸಮಯದಲ್ಲಿ ಕೆಲವರ  ಕಣ್ಣುಗಳು ತೆರೆದಿರಲು ಇದೇ ಕಾರಣವಂತೆ. ಇವರ ಆತ್ಮ ದೇಹ ಬಿಟ್ಟು ಹೋಗಲು ಇಚ್ಚಿಸುವುದಿಲ್ಲವಂತೆ. ಆದರೆ ಯಮರಾಜನು ಆತ್ಮವನ್ನು ಬಲವಂತವಾಗಿ ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲಾಗುತ್ತದೆ. 

ಪುಣ್ಯವಂತರು ಹೇಗೆ ಸಾಯುತ್ತಾರೆ? : 
ಯಾರು ತಮ್ಮ ಜೀವನದಲ್ಲಿ ಸತ್ಕಾರ್ಯಗಳನ್ನು ಮಾಡುತ್ತಾರೆ, ವಿಧಿ-ವಿಧಾನಗಳ ಪ್ರಕಾರ ದೇವರಿಗೆ ಭಕ್ತಿ ಮತ್ತು ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ ಅವರ ಸಾವು ಕೂಡಾ ಸುಖಕರವಾಗಿ ಇರುತ್ತದೆಯಂತೆ. ಅಂಥವರ ಆತ್ಮ ಮೂಗಿನ ಮೂಲಕವೇ ಹೊರಬರುತ್ತದೆ. ಈ ರೀತಿಯ ಮರಣವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಅಂತಹ ವ್ಯಕ್ತಿಯ ಆತ್ಮವು ಮರಣಾನಂತರ ವೈಕುಂಠ ಸೇರುತ್ತದೆಯಂತೆ. 

ಇದನ್ನೂ ಓದಿ :  ಇಂದು ಅಮವಾಸ್ಯೆ ರಾತ್ರಿ ಆಗಸದಲ್ಲಿ 'ಕಪ್ಪು ಚಂದಿರ' ಗೋಚರ..! ನೋಡುವುದು ಓಳ್ಳೆಯದಾ.. ಕೆಟ್ಟದ್ದಾ..?

ಈ ರೀತಿಯಾಗಿ ಪಾಪಿಗಳ ದೇಹದಿಂದ ಆತ್ಮವು ಹೊರಬರುತ್ತದೆ : 
ಗರುಡ ಪುರಾಣದ ಪ್ರಕಾರ, ತನ್ನ ಜೀವನದುದ್ದಕ್ಕೂ ಸ್ವಾರ್ಥವನ್ನು ಸಾಧಿಸಿದ ವ್ಯಕ್ತಿ, ಜನಕಲ್ಯಾಣ ಕಾರ್ಯಗಳಿಂದ ದೂರ ಉಳಿದಿರುವ ವ್ಯಕ್ತಿ ಲೈಂಗಿಕ ಬಯಕೆಯನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡ ವ್ಯಕ್ತಿ, ಕೊನೆಯ ಕ್ಷಣಗಳಲ್ಲಿ ತಮ್ಮ ಮುಂದೆ ಯಮದೂತರನ್ನು ನೋಡಿ ಭಯದಿಂದ ನಡುಗುತ್ತಾರೆಯಂತೆ.  ಆತಂಕದ ಕಾರಣದಿಂದಾಗಿ ಅವರ ದೇಹ ಕುಸಿದು ಬೀಳುತ್ತದೆಯಂತೆ. ಈ ಕಾರಣದಿಂದಾಗಿ ಅವರ ಪ್ರಾಣವು ದೇಹದ ವಿಸರ್ಜನೆಯ ಅಂಗಗಳ ಮೂಲಕ ಹೊರಬರುತ್ತದೆ. ಅಂದರೆ ಮೂತ್ರ ದ್ವಾರ ಅಥವಾ ಗುದದ್ವಾರದ ಮೂಲಕ. ಅಂಥವರು ಸಾವಿನ ಭಯದಿಂದ ಮಲ ಮೂತ್ರವನ್ನು ಮಾಡುವುದೂ ಇದೆಯಂತೆ.  

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News