Oppo Reno 6 Pro : ಅರ್ಧ ಗಂಟೆಯಲ್ಲಿ ಆಗಲಿದೆ ಫುಲ್ ಚಾರ್ಜ್, ಬೆಲೆ ಎಷ್ಟು ತಿಳಿಯಿರಿ

ಫ್ಲಿಪ್‌ಕಾರ್ಟ್ ಈ ಫೋನ್‌ಗಾಗಿ ಟೀಸರ್ ಪೇಜ್ ಅನ್ನು ಕೂಡ ಲಾಂಚ್ ಮಾಡಿದೆ.  ಈ ಹಿನ್ನೆಲೆಯಲ್ಲಿ ಎರಡೂ ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.

ನವದೆಹಲಿ : Oppo Reno 6 Series:ಒಪ್ಪೋ ರೆಪೊ 6 ಸರಣಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕಂಪನಿಯು ಒಪ್ಪೋ ರೆನೋ 6 (Oppo Reno 6) ಮತ್ತು ಒಪ್ಪೋ ರೆನಾ 6 ಪ್ರೊ (Oppo Reno 6 Pro) ಜುಲೈ 14 ರಂದು ಮಧ್ಯಾಹ್ನ 3 ಗಂಟೆಗೆ (Oppo Reno 6 Series Launch Date) ಬಿಡುಗಡೆ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಫ್ಲಿಪ್‌ಕಾರ್ಟ್ ಈ ಫೋನ್‌ಗಾಗಿ ಟೀಸರ್ ಪೇಜ್ ಅನ್ನು ಕೂಡ ಲಾಂಚ್ ಮಾಡಿದೆ.  ಈ ಹಿನ್ನೆಲೆಯಲ್ಲಿ ಎರಡೂ ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಒಪ್ಪೊ ಟ್ವಿಟ್ಟರ್ನಲ್ಲಿ ಮೊಬೈಲ್ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದೆ. ಜೊತೆಗೆ ಅನೇಕ ಯೂಟ್ಯೂಬ್ ಪೇಜ್ ಗಳು ಅದರ ಬೆಲೆ ಮತ್ತು ಇತರ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. 

2 /5

ಫೋನ್‌ನಲ್ಲಿ ಅತ್ಯಂತ ಮುಖ್ಯವಾದ ವೈಶಿಷ್ಟ್ಯವೆಂದರೆ ಅದರ ಬ್ಯಾಟರಿ ಎಂದು ಒಪ್ಪೊ ತಿಳಿಸಿದೆ. ಚಾರ್ಜಿಂಗ್ ಮಾಡಿದ 5 ನಿಮಿಷಗಳಲ್ಲಿ 4 ಗಂಟೆಗಳ ವೀಡಿಯೊ ರೆಕಾರ್ಡಿಂಗ್ ಮಾಡಬಹುದು. ಅಲ್ಲದೆ, 35 ನಿಮಿಷಗಳಲ್ಲಿ ಫೋನ್ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

3 /5

ಫೋನ್ ಜೊತೆಗೆ ಚಾರ್ಜರ್, ಇಯರ್‌ಫೋನ್, ಯುಎಸ್‌ಬಿ ಕೇಬಲ್, ಸಿಂಗಲ್ ಎಜೆಕ್ಷನ್ ಟೂಲ್, ಪ್ರೊಟೆಕ್ಟಿವ್ ಕೇಸ್ ಮತ್ತು ಸೇಫ್ಟಿ ಗೈಡ್ ಇರುತ್ತದೆ.

4 /5

ಸೋರಿಕೆಯಾದ ಮಾಹಿತಿಯ ಪ್ರಕಾರ, ಈ ಫೋನ್‌ಗಳು 6.55 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. 4500 mAh ಬ್ಯಾಟರಿ ಸಹ ಇರುತ್ತದೆ.  ಪ್ರೈಮರಿ ಕ್ಯಾಮೆರಾ 64 ಮೆಗಾಪಿಕ್ಸೆಲ್‌ಗಲಾಗಿದ್ದು, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ಗಳು. ಉಳಿದ ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳಾಗಿರುತ್ತವೆ. 

5 /5

ಒಪ್ಪೋ ರೆನೋ 6 ಪ್ರೊನ 12 GB RAM ಮತ್ತು 256 GB ಸ್ಟೋರೇಜ್ ವೆರಿಯೇಂಟ್ ಬೆಲೆ 40 ಸಾವಿರದಿಂದ 50 ಸಾವಿರದೊಳಗೆ ಇರಬಹುದು.