Peepal Tree health benefits : ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಅಲ್ಲದೆ, ಈ ಮರ ಆಯುರ್ವೇದದ ವಿಷಯದಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಶೀತ, ಕೆಮ್ಮು ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳನ್ನು ನಿವಾರಿಸುತ್ತದೆ. ಈ ಕುರಿತು ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ..
Peepal Tree : ಹಿಂದೂ ಧರ್ಮದಲ್ಲಿ ಅನೇಕ ಮರಗಳಿಗೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಅದರಂತೆ ಅರಳಿ ಮರಕ್ಕೂ ಸಹ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಮರ ಆಯುರ್ವೇದದ ದೃಷ್ಟಿಕೋನದಿಂದ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಅನೇಕ ಋತುಮಾನದ ಕಾಯಿಲೆಗೆ ಮನೆ ಮದ್ದಾಗಿದೆ.
ಅರಳಿ ಮರದ ಬಲಿತ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ತೊದಲುವಿಕೆಯ ಸಮಸ್ಯೆಯೂ ದೂರವಾಗುತ್ತದೆ.
ಅರಳಿ ಮರದ ಎಲೆಗಳು ಮತ್ತು ತೊಗಟೆಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಮರದ ಎಲೆಗಳನ್ನು ದಿನವೂ ಜಗಿಯುತ್ತಿದ್ದರೆ ಒತ್ತಡ ದೂರವಾಗುತ್ತದೆ. ವಯಸ್ಸಿನೊಂದಿಗೆ ಬರುವ ವಯಸ್ಸಾದ ಚಿಹ್ನೆಗಳನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ ಈ ಎಲೆಯ ರಸದಿಂದ ಪಾದಗಳ ಬಿರುಕು ಸಮಸ್ಯೆ ನಿವಾರಿಸಬಹುದು.
ಅರಳಿ ಮರದ ಎಲೆಗಳ ರಸದಿಂದ ಶೀತ, ಜ್ವರ ಮತ್ತು ಕೆಮ್ಮು ಗುಣವಾಗುತ್ತದೆ. ಇದರ ಎಲೆಗಳ ರಸದಿಂದ ಮಸಾಜ್ ಮಾಡುವುದರಿಂದ ಚರ್ಮವು ಕಾಂತಿಯುತವಾಗುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ.
ಆಯುರ್ವೇದದ ಪ್ರಕಾರ ಅರಳಿ ಮರಕ್ಕೆ ಬಹಳ ಮಹತ್ವವಿದೆ. ಇದರಲ್ಲಿರುವ ಔಷಧೀಯ ಗುಣಗಳು ವಿವಿಧ ರೋಗಗಳನ್ನು ಗುಣಪಡಿಸುತ್ತದೆ. ಇದರ ಎಲೆಗಳು ಪಿತ್ತವನ್ನು ನಾಶಪಡಿಸುವ ಗುಣಗಳನ್ನು ಹೊಂದಿವೆ.
ಅರಳಿ ಮರದ ಎಲೆಗಳು ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ದೂರಮಾಡುತ್ತವೆ. ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ.