ನಾಳೆ ಮಾರ್ಚ್ 1 . ಹೊಸ ತಿಂಗಳ ಆರಂಭದೊಂದಿಗೆ, ಕೆಲವು ಹೊಸ ನಿಯಮಗಳು ಕೂಡಾ ನಾಳೆಯಿಂದ ಜಾರಿಗೆ ಬರಲಿದೆ. ಬದಲಾಗಲಿರುವ ನಿಯಮಗಳ ಬಗ್ಗೆ ತಿಳಿಯಿರಿ.
ನವದೆಹಲಿ : ನಾಳೆ ಮಾರ್ಚ್ 1 . ಹೊಸ ತಿಂಗಳ ಆರಂಭದೊಂದಿಗೆ, ಕೆಲವು ಹೊಸ ನಿಯಮಗಳು ಕೂಡಾ ನಾಳೆಯಿಂದ ಜಾರಿಗೆ ಬರಲಿದೆ. ಕರೋನಾ ವ್ಯಾಕ್ಸಿನೇಷನ್‌ನ (Corona vaccination) ಮುಂದಿನ ಹಂತವು ನಾಳೆಯಿಂದ ಆರಂಭವಾಗಲಿದೆ. ಇದರ ಅಡಿಯಲ್ಲಿ 60 ವರ್ಷಗಳಿಗಿಂತ ಮೇಲ್ಪಟ್ಟವರಿಗೆ ನಾಳೆಯಿಂದ ಕರೋನಾ ಲಸಿಕೆ ನೀಡಲಾಗುವುದು. ಇನ್ನು, ವಿಜಯ ಮತ್ತು ದೇನಾ ಬ್ಯಾಂಕ್‌ನ ಗ್ರಾಹಕರು, ನಾಳೆಯಿಂದ ಹಳೆಯ ಐಎಫ್‌ಎಸ್‌ಸಿ ಕೋಡ್‌ನಿಂದ (IFSC) ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬ್ಯಾಂಕ್ ಆಫ್ ಬರೋಡಾದ ಜೊತೆ ಈ ಬ್ಯಾಂಕುಗಳು ವಿಲೀನಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ಹೊಸ ನಿಯಮಗಳು ಅನ್ವಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಾರ್ಚ್ 1 ರಿಂದ ಅಂದರೆ ನಾಳೆಯಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆ ನೀಡಲಾಗುವುದು. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ 250 ರೂಪಾಯಿ ಪಾವತಿಸಬೇಕಾಗುತ್ತದೆ.
ವಿಜಯ ಮತ್ತು ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸಿ ಕೇಂದ್ರ ಸರ್ಕಾರ ಗಾಗಲೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ನಾಳೆಯಿಂದ ಹಳೆಯ ಐಎಫ್‌ಎಸ್‌ಸಿ ಕೋಡ್ ಕಾರ್ಯನಿರ್ವಹಿಸುವುದಿಲ್ಲ. ವಿಜಯ ಮತ್ತು ದೇನಾ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಆಫ್ ಬರೋಡಾದಿಂದ ಹೊಸ ಐಎಫ್‌ಎಸ್‌ಸಿ ಕೋಡ್ ಪಡೆಯಬೇಕಾಗುತ್ತದೆ.
ವಿಜಯ ಮತ್ತು ದೇನಾ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ www.bankofbaroda.in ಗೆ ಭೇಟಿ ನೀಡಬಹುದು. ಅಲ್ಲದೆ, ಬ್ಯಾಂಕ್ ಆಫ್ ಬರೋಡಾದ ಹತ್ತಿರದ ಶಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಹೊಸ ಐಎಫ್‌ಎಸ್‌ಸಿ ಕೋಡ್ ಪಡೆಯಬಹುದು.
ಪ್ರತಿ ತಿಂಗಳ ಮೊದಲ ದಿನಾಂಕದಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ನಿಗದಿಪಡಿಸುತ್ತವೆ. ನಾಳೆ ಅಡುಗೆ ಅನಿಲದ ಸಿಲಿಂಡರ್ ನ ಹೊಸ ಬೆಲೆ ತಿಳಿಯುತ್ತದೆ. ಫೆಬ್ರವರಿ ತಿಂಗಳಲ್ಲಿ ತೈಲ ಕಂಪೆನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಹೆಚ್ಚಿಸಿತ್ತು.
ಪೆಟ್ರೋಲ್ ಡೀಸೆಲ್‌ನ ಹೊಸ ಬೆಲೆಗಳನ್ನು ಪ್ರತಿದಿನ ನಿಗದಿಪಡಿಸಲಾಗುತ್ತದೆ. ಆದರೂ ಫೆಬ್ರವರಿ ತಿಂಗಳ ಕೊನೆಯ ದಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಾರ್ಚ್ ತಿಂಗಳಲ್ಲೂ ಇದು ಮುಂದುವರೆಯುತ್ತದೆಯೋ, ಅಥವಾ ಮತ್ತೆ ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತದೆಯೋ ನೋಡಬೇಕು.