Marriage Horoscope 2022: ಈ 5 ರಾಶಿಯವರಿಗೆ ಮದುವೆಯ ಯೋಗವಿದೆ, ನೀವೂ ಇದ್ದೀರಾ ನೋಡಿ

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಈ ವರ್ಷ 5 ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಸಂಗಾತಿಯು ಜೊತೆಯಾಗುವ ಅವಕಾಶಗಳಿವೆ.

2022ರ ಹೊಸ ವರ್ಷಕ್ಕೆ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೆಲವರು ಪ್ರಗತಿ ಮತ್ತು ಸ್ವಲ್ಪ ಹಣವನ್ನು ಬಯಸುತ್ತಾರೆ. ಇದೇ ಸಮಯದಲ್ಲಿ ಅನೇಕ ಜನರು ಜೀವನ ಸಂಗಾತಿಯನ್ನು ಪಡೆಯಲು ಕಾಯುತ್ತಿದ್ದಾರೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಈ ವರ್ಷ 5 ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಸಂಗಾತಿಯು ಜೊತೆಯಾಗುವ ಅವಕಾಶಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜೀವನ ಸಂಗಾತಿಯನ್ನು ಪಡೆಯಲು ಕಾಯುತ್ತಿರುವ ಕರ್ಕ ರಾಶಿಯವರಿಗೆ 2022 ಅದ್ಭುತವಾಗಿರಲಿದೆ. ಅವರು ಜೀವನ ಸಂಗಾತಿಯನ್ನು ಭೇಟಿಯಾಗುವುದು ಮಾತ್ರವಲ್ಲ, ಮದುವೆಯಾಗುತ್ತಾರೆ. ಏಪ್ರಿಲ್ ತಿಂಗಳ ನಂತರ ಈ ರಾಶಿಯವರು ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಗಳು ಹೆಚ್ಚಿದೆ.

2 /5

ಸಿಂಹ ರಾಶಿಯವರ ಮದುವೆಯಲ್ಲಿ ಇದುವರೆಗೆ ಬರುತ್ತಿದ್ದ ಅಡೆತಡೆಗಳು ಈಗ ನಿವಾರಣೆಯಾಗಲಿವೆ. ಶನಿಯ ರಾಶಿ ಬದಲಾದ ತಕ್ಷಣ ಮದುವೆಯ ಸಾಧ್ಯತೆಗಳು ರೂಪುಗೊಳ್ಳುತ್ತವೆ ಮತ್ತು ಏಪ್ರಿಲ್ ಮತ್ತು ಜುಲೈ ನಡುವೆ ಮದುವೆಯಾಗುವ ಹೆಚ್ಚಿನ ಅವಕಾಶಗಳಿವೆ.

3 /5

ಕನ್ಯಾ ರಾಶಿಯ ಜನರಿಗೆ ಹೊಸ ವರ್ಷದಲ್ಲಿ ಮದುವೆಯ ಸಂಭ್ರಮ ಜೋರಾಗಿರಲಿದೆ. ಜೀವನ ಸಂಗಾತಿಯ ಹುಡುಕಾಟ ಮುಗಿದು ಹೊಂದಾಣಿಕೆ, ಮದುವೆಯಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇವರು ಖುಷಿ ಖುಷಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

4 /5

ವೃಶ್ಚಿಕ ರಾಶಿಯ ಜನರು ಜೀವನ ಸಂಗಾತಿಯನ್ನು ಹುಡುಕಲು ಕೆಲವು ಪ್ರಯತ್ನಗಳನ್ನು ಮಾಡಬೇಕಾಗಬಹುದು ಆದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ. ಇದರೊಂದಿಗೆ ಈ ಸಂಬಂಧವು ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ. ಖುಷಿ ಖುಷಿಯಿಂದ ಈ ರಾಶಿಯವರು ಜೀವನ ಸಂಗಾತಿ ಜೊತೆಗೆ ಸಹಬಾಳ್ವೆಯನ್ನು ನಡೆಸುತ್ತಾರೆ.

5 /5

ಮೀನ ರಾಶಿಯವರ ಮದುವೆಯನ್ನು ಈ ವರ್ಷ ನಿಶ್ಚಿತವೆಂದು ಪರಿಗಣಿಸಬಹುದು. ಅವರು ವರ್ಷದ ಮೊದಲಾರ್ಧದಲ್ಲಿ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಮತ್ತು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.