ಈ ರಾಶಿಯವರ ಮೇಲಿರುತ್ತದೆ ಗಣೇಶನ ಆಶೀರ್ವಾದ ! ಯಾವ ಕೆಲಸ ಮಾಡಿದರೂ ವಿಘ್ನ ಎದುರಾಗುವುದೇ ಇಲ್ಲ

Ganesha blessing Zodiac sign : ಕೆಲವರು ಹುಟ್ಟುತ್ತಲೇ ಗಣೇಶನ ಆಶೀರ್ವಾದ ಪಡೆದುಕೊಂಡೇ ಬರುತ್ತಾರೆ. ಇವರ ಮೇಲೆ ಸದಾ ಗಣಪತಿ ಕೃಪಾ ಕಟಾಕ್ಷ ಇರುತ್ತದೆ. ಹೀಗಾಗಿ ಇವರು ಯಾವ ಕೆಲಸ ಮಾಡಿದರೂ ಅದರಲ್ಲಿ ಯಸಸ್ಸು ಪಡೆಯುವುದು ಗ್ಯಾರಂಟಿ. 
 

Ganesha blessing Zodiac sign : ಹಿಂದೂ ಧರ್ಮದಲ್ಲಿ, ಗಣೇಶನಿಗೆ ಮೊದಲ ಪೂಜೆ. ಯಾವುದೇ ಕಾರ್ಯ ಮಾಡಬೇಕಾದರೂ ವಿಘ್ನವಿನಾಶಕನನ್ನು ಮುಂದಿಟ್ಟುಕೊಂಡೆ ಹೆಜ್ಜೆ ಹಾಕುವುದು ಪದ್ಧತಿ. ಗಣೇಶನ ಕೃಪೆಯಿದ್ದರೆ ಪ್ರತಿಯೊಂದು ಕೆಲಸವೂ  ಸಾಂಘವಾಗಿ ನೆರವೇರುತ್ತದೆ. ಮಾತ್ರವಲ್ಲ ಮಾಡುವ ಕೆಲಸ ಸಂಪೂರ್ಣ ಸಫಲವಾಗುತ್ತದೆ ಎನ್ನುವುದು ನಂಬಿಕೆ. ಅದೇ ರೀತಿ ಕೆಲವರು ಹುಟ್ಟುತ್ತಲೇ ಗಣೇಶನ ಆಶೀರ್ವಾದ ಪಡೆದುಕೊಂಡೇ ಬರುತ್ತಾರೆ. ಇವರ ಮೇಲೆ ಸದಾ ಗಣಪತಿ ಕೃಪಾ ಕಟಾಕ್ಷ ಇರುತ್ತದೆ. ಹೀಗಾಗಿ ಇವರು ಯಾವ ಕೆಲಸ ಮಾಡಿದರೂ ಅದರಲ್ಲಿ ಯಸಸ್ಸು ಪಡೆಯುವುದು ಗ್ಯಾರಂಟಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ ಇರುತ್ತದೆ. ಮಂಗಳನ ಪ್ರಭಾವದಿಂದಾಗಿ, ಅವರು ಸಾಕಷ್ಟು ಧೈರ್ಯ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ಹೀಗಾಗಿ ಯಾವುದೇ ಕೆಲಸವನ್ನು ಮಾಡಬೇಕಾದರೂ ಹಿಂದೆ ಮುಂದೆ ಯೋಚನೆ ಮಾಡದೇ ಮುನ್ನುಗ್ಗುತ್ತಾರೆ. ಆ ಕಾರ್ಯದಲ್ಲಿ ಯಶಸ್ಸು ಕೂಡಾ ಪಡೆಯುತ್ತಾರೆ.  ಇವರು ಯಾವ ಕೆಲ್ಸಕ್ಕೆ ಕೈ ಹಾಕಿದರೂ ಆ ಕೆಲಸ ಸುಲಭವಾಗಿ ಕೈ ಗೂಡುತ್ತದೆ. ಗಣೇಶನ ಆಶೀರ್ವಾದದಿಂದ ಈ  ರಾಶಿಯವರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.

2 /3

ಜೋತಿಷ್ಯದಲ್ಲಿ ಬುಧ ಗ್ರಹವು ಗಣೇಶನಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಗಣಪತಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿರುತ್ತದೆ. ಈ ರಾಶಿಯವರು ಬಹಳ ಬುದ್ದಿವಂತರಾಗಿರುತ್ತಾರೆ.   ವ್ಯಾಪಾರ ಆರಂ ಭಿಸಿದರೆ ಅದರಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಉದ್ಯೋಗಕ್ಕೆ ಸೇರಿದರೂ ಉತ್ತಮ ಸ್ಥಾನವನ್ನು ಪಡೆಯುತ್ತಾರೆ. ಗಣೇಶನ ಕೃಪೆಯಿಂದ ಈ ರಾಶಿಯವರು ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ. 

3 /3

ಮಕರ ರಾಶಿಯ ಅಧಿಪತಿ ಶನಿ ದೇವರು. ಈ ರಾಶಿಯವರ ಮೇಲೆ ಶನಿ ದೇವನ ಜೊತೆಗೆ, ಗಣೇಶನ ಕೃಪೆಯೂ ಅಧಿಕವಾಗಿರುತ್ತದೆ. ಈ ರಾಶಿಯವರು ತುಂಬಾ ಶ್ರಮಶೀಲರಾಗದ್ದು, ತಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಏನೇ ಸವಾಲುಗಳು ಎದುರಾದರೂ ಅದನ್ನು ಎದುರಿಸಿ ಜಯಿಸುತ್ತಾರೆ.  ತಮ್ಮ ಜೀವನದಲ್ಲಿ  ಭಾರೀ ಯಶಸ್ಸು ಪಡೆಯುತ್ತಾರೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)