ಅತಿ ಸಣ್ಣ ವಯಸ್ಸಿನಲ್ಲಿ ಮರಣಹೊಂದಿದ ಕನ್ನಡದ ನಟ - ನಟಿಯರು..! ಫೋಟೋಸ್‌ ನೋಡಿ

Kannada actors : ಸ್ಯಾಂಡಲ್‌ವುಡ್‌ನ ಅದೇಷ್ಟೋ ತಾರೆಗಳು ಚಿಕ್ಕವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಕನ್ನಡ ಸಿನಿರಂಗದಲ್ಲಿ ತಮ್ಮ ನಟನೆ, ಸಾಮಾಜಿಕ ಕಾರ್ಯದ ಮೂಲಕ ಇಂದಿಗೂ ಅವರು ಅಮರರಾಗಿದ್ದಾರೆ. ಇಂದು ನಿಧನರಾದ ಸ್ಪಂದನಾ ಅವರಿಂದ ಹಿಡಿದು ಅತಿ ಚಿಕ್ಕವಯಸ್ಸಿನಲ್ಲಿ ಮರಣಹೊಂದಿದ ನಟ ನಟಿಯರು ಯಾರು ಅಂತ ನೋಡೋಣ ಬನ್ನಿ..

1 /12

ನಟಿ ಕಲ್ಪನಾ ಅವರು 18 ಜುಲೈ 1943 ರಂದು ಜನಿಸಿದರು, 12 ಮೇ 1979 ರಂದು ನಿಧನರಾದರು. ವಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾದರು.  

2 /12

ಪುನೀತ್‌ ರಾಜ್‌ ಕುಮಾರ್‌ ಅವರು 17 ಮಾರ್ಚ್‌ 1975 ರಂದು ಜನಿಸಿದರು. 29 ಅಕ್ಟೋಬರ್‌ 2021 ರಂದು ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ತಮ್ಮ 46 ನೇ ವಯಸ್ಸಿಗೆ ನಿಧನರಾದರು.

3 /12

ನಟಿ ಮಂಜುಳಾ ಅವರು 8 ನವೆಂಬರ್‌ 1954 ನಿಧನ ಜನಿಸಿದರು. 12 ಸೆಪ್ಟೆಂಬರ್‌ 1986 ರಂದು ತಮ್ಮ 31 ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.  

4 /12

ನಟ ಶಂಕರ್‌ ನಾಗ್‌ ಅವರು 9 ನವೆಂಬರ್‌ 1954 ರಂದು ಜನಿಸಿದರು. ತಮ್ಮ 30ನೇ ವಯಸ್ಸಿಗೆ ಕಾರು ಅಪಘಾತದಲ್ಲಿ 30 ಸೆಪ್ಟೆಂಬರ್‌ 1990 ರಂದು ನಿಧನರಾದರು.  

5 /12

ನಟ ಸುನೀಲ್‌ ಅವರು 1 ಏಪ್ರಿಲ್‌ 1964 ರಂದು ಜನಿಸಿದರು. 24 ಜುಲೈ 1994 ರಂದು ತಮ್ಮ 30ನೇ ವಯಸ್ಸಿನಲ್ಲಿ ನಿಧನರಾದರು. 1994 ರಲ್ಲಿ ನಟಿ ಮಾಲಾಶ್ರೀ ಮತ್ತು ಸುನೀಲ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಮಾಲಾಶ್ರೀ ಅವರಿಗೆ ಗಾಯಗಳಾಗಿದ್ದವು. ಸುನೀಲ್‌ ಒಂದು ಗಂಟೆಯ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

6 /12

ನಟಿ ನಿವೇದಿತಾ ಜೈನ್‌ 17 ಮೇ 1979 ಜನಿಸಿದರು. 10 ಜೂನ್‌ 1998 ರಂದು ನಿಧನರಾದರು, 19ನೇ ವಯಸ್ಸಿನಲ್ಲಿ ಮಿಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಯಾಟ್‌ ವಾಕ್‌ ಅಭ್ಯಾಸ ಮಾಡುತ್ತಿದ್ದಾಗ ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಸಾವನ್ನಪ್ಪಿದರು.

7 /12

ನಟಿ ಸೌಂದರ್ಯ ಅವರು 18 ಜುಲೈ 1976 ರಂದು ಜನಿಸಿದರು. 17 ಏಪ್ರಿಲ್‌ 2004 ರಂದು ತಮ್ಮ 27 ನೇ ವಯಸ್ಸಿನಲ್ಲಿ ನಿಧನರಾದರು. ವಿಮಾನ ಅಪಘಾತದಿಂದ ಮರಣಹೊಂದಿದರು.

8 /12

ನಟ ರಾಘವ ಮತ್ತು ಅನಿಲ್‌ 1986/1984 ಜನಿಸಿದ ನಟರು 30/32 ನೇ ವಯಸ್ಸಿನಲ್ಲಿ ಮಾಸ್ತಿ ಗುಡಿ ಚಿತ್ರದ ಸಾಹಸ ದೃಶ್ಯ ಶೂಟಿಂಗ್‌ ವೇಳೆ ಸಾವನ್ನಪ್ಪಿದರು.

9 /12

ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅವರು 2 ಏಪ್ರಿಲ್‌ 1976 ರಂದು ಜನಿಸಿದರು. 6 ಏಪ್ರಿಲ್‌ 2020 ರಂದು ತಮ್ಮ 44ನೇ ವಯಸ್ಸಿಗೆ ನಿಧನರಾದರು. ಲಿವರ್‌ ಸೋಂಕಿನಿಂದ ಸಾವನ್ನಪ್ಪಿದರು.

10 /12

ಚಿರಂಜೀವಿ ಸರ್ಜಾ ಅವರು 17 ಅಕ್ಟೋಬರ್‌ 1984 ರಂದು ಜನಿಸಿದರು. 7 ಜೂನ್‌ 2020ರಂದು ತಮ್ಮ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.

11 /12

ಸಂಚಾರಿ ವಿಜಯ್‌ ಅವರು 17 ಜುಲೈ 1983 ರಂದು ಜನಿಸಿದರು. 15 ಜೂನ್‌ 2021 ರಂದು ತಮ್ಮ 37ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಮರಣ ಹೊಂದಿದರು.

12 /12

ಸ್ಪಂದನಾ 1986 ರಂದು ಜನಿಸಿದರು. 07 ಆಗಸ್ಟ್‌ 2023 ರಂದು ತಮ್ಮ 37 ನೇ ವಯಸ್ಸಿನಲ್ಲಿ ನಿಧನರಾದರು. ಹೃದಯಾಘಾತದಿಂದ ಕೊನೆಯುಸಿರೆಳೆದರು.