Vastu Tips: ಈ ವಸ್ತುಗಳನ್ನು ಇತರರಿಂದ ಪಡೆದರೆ ನಿಮ್ಮ ಜೀವನದಲ್ಲಿ ದುರಾದೃಷ್ಟ ತಾಂಡವವಾಡಬಹುದು!

Vastu Tips: ಜೀವನದಲ್ಲಿ ಯಶಸ್ಸು ಪಡೆಯಲು ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಈ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿಯು ಹರಿಯುತ್ತದೆ. ಮನುಷ್ಯನು ಯಶಸ್ಸಿನ ಏಣಿಯನ್ನು ಏರಲು ಪ್ರಾರಂಭಿಸುತ್ತಾನೆ ಮತ್ತು ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತಾನೆ. ಇನ್ನು ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಮಾಹಿತಿಗಳನ್ನು ನೀಡಲಾಗಿದೆ. ಅದೇನೆಂದರೆ, ಒಬ್ಬ ವ್ಯಕ್ತಿಯು ಇತರರಿಂದ ಎಂದಿಗೂ ಈ ವಸ್ತುಗಳನ್ನು ಕೇಳಬಾರದು. ಒಂದು ವೇಳೆ ಕೇಳಿದರೆ, ದುರದೃಷ್ಟದ ಬಾಗಿಲು ತೆರೆಯುತ್ತದೆ.

1 /5

ಪ್ರತಿಯೊಬ್ಬರೂ ಉಡುಗೊರೆಗಳನ್ನು ನೀಡಲು ಮತ್ತು ಸ್ವೀಕರಿಸಲು ಇಷ್ಟಪಡುತ್ತಾರೆ. ಅನೇಕ ಬಾರಿ ಜನರು ಇತರರಿಂದ ಪಡೆದ ಉಡುಗೊರೆಗಳನ್ನು ಬೇರೆಯವರಿಗೆ ನೀಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಒಳ್ಳೆಯದಲ್ಲ. ಇತರರಿಂದ ಪಡೆದ ಉಡುಗೊರೆಯನ್ನು ಯಾವುದೇ ವ್ಯಕ್ತಿಗೆ ನೀಡದಿರುವುದು ಉತ್ತಮ.

2 /5

ಆಫೀಸ್‌ನಲ್ಲಿ ನೀವು ಕೆಲಸದ ಕಾರಣ ಇತರರನ್ನು ಪೆನ್ನು ಅಥವಾ ಪೆನ್ಸಿಲ್‌ಗಾಗಿ ಕೇಳಿರಬೇಕು. ಅನೇಕ ಜನರು ಈ ವಸ್ತುಗಳನ್ನು ಕೇಳಿದ ನಂತರ ಹಿಂತಿರುಗಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಅಶುಭ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಕೆಲಸ ಮುಗಿದ ನಂತರ ಪೆನ್ ಅಥವಾ ಪೆನ್ಸಿಲ್ ಅನ್ನು ಹಿಂತಿರುಗಿಸುವುದು ಅವಶ್ಯಕ.

3 /5

ಒಬ್ಬ ವ್ಯಕ್ತಿಯ ಈಗಾಗಲೆ ಧರಿಸಿರುವ ಬಟ್ಟೆಗಳನ್ನು ಧರಿಸಬಾರದು. ಏಕೆಂದರೆ ಹೀಗೆ ಮಾಡುವುದರಿಂದ ಆ ವ್ಯಕ್ತಿಯ ದುರದೃಷ್ಟವು ನಿಮಗೆ ಬರಬಹುದು.

4 /5

ವಾಸ್ತು ಶಾಸ್ತ್ರದ ಪ್ರಕಾರ, ವ್ಯಕ್ತಿಯು ಇತರರು ಧರಿಸಿರುವ ಗಡಿಯಾರವನ್ನು ಎಂದಿಗೂ ತೆಗೆದುಕೊಳ್ಳಬಾರದು. ಇದನ್ನು ಕೆಟ್ಟದಾಗಿ ಪರಿಗಣಿಸಲಾಗಿದೆ. ಗಡಿಯಾರವನ್ನು ಜೀವನದ ಸ್ಥಿತಿಯೊಂದಿಗೆ ಸಂಯೋಜಿಸಲಾಗಿದೆ. ಯಾರಾದರೂ ಗಡಿಯಾರವನ್ನು ಧರಿಸಿದರೆ, ಅವರೊಂದಿಗೆ ದುರದೃಷ್ಟವೂ ಬರಬಹುದು.

5 /5

ರಾತ್ರಿ ಮಲಗಲು ನಿಮ್ಮ ಹಾಸಿಗೆಯನ್ನು ಬಳಸಬೇಕು. ಇತರರ ಹಾಸಿಗೆಯ ಮೇಲೆ ಮಲಗುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ ಮತ್ತು ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರರ ಹಾಸಿಗೆಯನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)