ರಾತ್ರಿ ವೇಳೆ ನಿದ್ದೆ ಬರ್ತಿಲ್ವಾ?: ಹಾಗಾದರೆ ಈ 10-3-2-1 ಸೂತ್ರವನ್ನು ಪಾಲಿಸಿ

ಸರಿಯಾಗಿ ನಿದ್ದೆ ಮಾಡದಿದ್ದರೆ ಹೃದ್ರೋಗ, ಮಧುಮೇಹ, ಸ್ಥೂಲಕಾಯ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

ನಿದ್ರಾಹೀನತೆ ಎಂಬುದು ಪ್ರಪಂಚದ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಹೃದ್ರೋಗ, ಮಧುಮೇಹ, ಸ್ಥೂಲಕಾಯ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಉತ್ತಮ ನಿದ್ದೆ ಮಾಡುವುದು ಬಹುಮುಖ್ಯ. ಪ್ರಪಂಚದಲ್ಲಿ ಅನೇಕ ಜನರು ರಾತ್ರಿಯಿಡೀ ಹಾಸಿಗೆಯ ಮೇಲೆ ಹೊರಾಡುತ್ತಲೇ ಟೈಮ್ ಪಾಸ್ ಮಾಡುತ್ತಾರೆ. ಇದರ ಹೊರತಾಗಿ ಅವರಿಗೆ ಸರಿಯಾದ ನಿದ್ರೆ ಬರುವುದಿಲ್ಲ. ಇದು ರೋಗವಲ್ಲ ಆದರೆ ಕೆಟ್ಟ ಜೀವನಶೈಲಿಯ ಪರಿಣಾಮವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ವೈದ್ಯರು ನಿದ್ರಾಹೀನತೆ ಸಮಸ್ಯೆಯನ್ನು ನಿಭಾಯಿಸಲು 10-3-2-1 ಸರಳ ಸೂತ್ರವನ್ನು ಕಂಡುಹಿಡಿದಿದ್ದಾರೆ. ಈ ಸೂತ್ರವನ್ನು ಅನುಸರಿಸುವ ಮೂಲಕ ಯಾವುದೇ ಔಷಧಿ ಅಥವಾ ಚಿಕಿತ್ಸೆಯಿಲ್ಲದೆ ನೀವು ಸುಲಭವಾಗಿ ಪ್ರತಿದಿನ ಉತ್ತಮ ನಿದ್ರೆ ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ವೈದ್ಯರ ಈ ಸೂತ್ರವನ್ನು ಬ್ರಿಟನ್‌ನಲ್ಲಿ ತೀವ್ರವಾಗಿ ಚರ್ಚಿಸಲಾಗುತ್ತಿದೆ.

2 /5

ವರದಿಗಳ ಪ್ರಕಾರ NHSನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವೈದ್ಯ ರಾಜ್ ಕರಣ್, ಟಿಕ್ ಟಾಕ್ ನಲ್ಲಿ ಈ ಸೂತ್ರವನ್ನು ಹಂಚಿಕೊಂಡಿದ್ದಾರೆ. 10-3-2-1 ಟ್ರಿಕ್ ಅನ್ನು ವಿವರವಾಗಿ ವಿವರಿಸಿರುವ ಅವರು, ಮಲಗುವ ಸಮಯಕ್ಕೆ 10 ಗಂಟೆಗಳ ಮೊದಲು ಕೆಫೀನ್ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಅಂದರೆ ಟೀ-ಕಾಫಿ, ತಂಪು ಪಾನೀಯಗಳ ಸೇವನೆ ತಪ್ಪಿಸಿ ಎಂದು ತಿಳಿಸಿದ್ದಾರೆ. ಕೆಫೀನ್ ಸೇವನೆಯಿಂದ ನಿದ್ರೆ ಓಡಿಹೋಗುತ್ತದೆ ಮತ್ತು ರಾತ್ರಿ ವೇಳೆ ವ್ಯಕ್ತಿಯು ಹೊರಾಡುತ್ತಳೇ ಸಮಯ ಕಳೆಯುತ್ತಾರಂತೆ. ಪ್ರತಿದಿನ ನೀವು ರಾತ್ರಿ 10 ಗಂಟೆಗೆ ಬೆಡ್ ಗೆ ಹೋಗುವುದನ್ನು ರೂಢಿಸಿಕೊಂಡಿದ್ದರೆ 12 ಗಂಟೆಯ ನಂತರ ಕೆಫೀನ್ ಗೆ ಸಂಬಂಧಿಸಿದ ಆಹಾರ ಸೇವಿಸುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.

3 /5

ಯಾರೇ ಆಗಲಿ ಮಲಗುವ 3 ಗಂಟೆಗಳ ಮೊದಲು ಹೆಚ್ಚಿನ ಆಹಾರ  ಸೇವಿಸುವುದು ಮತ್ತು Drinks ಮಾಡುವುದನ್ನು ತಪ್ಪಿಸಿ ಎಂದು ಹೇಳಿದ್ದಾರೆ. ಈ ಕಾರಣದಿಂದ 3 ಗಂಟೆಗಳ ಮೊದಲು ಸೇವಿಸಿದ ಆಹಾರ ಜೀರ್ಣಿಸಿಕೊಳ್ಳಲು ದೇಹವು ಸಾಕಷ್ಟು ಸಮಯ ಪಡೆಯುತ್ತದೆ ಮತ್ತು ರಾತ್ರಿಯಲ್ಲಿ ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ. ಸ್ವಲ್ಪ ಸಮಯದವರೆಗೆ ದೇಹವನ್ನು ನೇರವಾಗಿ ಹಾಸಿಗೆಯ ಮೇಲೆ ಇಟ್ಟುಕೊಂಡರೆ ನಂತರ ಕಣ್ಣುಗಳಿಗೆ ಬೇಗನೆ ನಿದ್ರೆ ಮಂಪರು ಆವರಿಸಿಕೊಳ್ಳುತ್ತದೆ. ಹೀಗಾಗಿ ಯಾವುದೇ ವ್ಯಕ್ತಿ ಸುಖನಿದ್ರೆಗೆ ಹೋಗುತ್ತಾನೆಂದು ಅವರು ತಿಳಿಸಿದ್ದಾರೆ.

4 /5

ಮಲಗುವ 2 ಗಂಟೆ ಮುಂಚಿತವಾಗಿ ನಿಮ್ಮ ನಿತ್ಯದ ಕೆಲಸವನ್ನು ಮುಗಿಸಬೇಕು ಎಂದು ಡಾಕ್ಟರ್ ರಾಜ್ ಕರಣ್ ಸಲಹೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಆದ್ದರಿಂದ ಹಾಸಿಗೆಯ ಮೇಲೆ ಮಲಗಿರುವಾಗ ನಿಮ್ಮ ಮನಸ್ಸಿನಲ್ಲಿ ಕಚೇರಿ ಅಥವಾ ಮನೆಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಅನಗತ್ಯ ತೊಂದರೆ ಉಂಟಾಗುವುದಿಲ್ಲ. ಇದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

5 /5

ನಿದ್ರೆಗೆ ಹೋಗುವ 1 ಗಂಟೆ ಮುಂಚಿತವಾಗಿ ನಿಮ್ಮ ಟಿವಿ, ಲ್ಯಾಪ್ ಟಾಪ್ ಮತ್ತು ಮೊಬೈಲ್ ಅನ್ನು ಆಫ್ ಮಾಡಬೇಕು. ಅಂದರೆ ಗ್ಯಾಜೆಟ್‌ಗಳಿಂದ ಆದಷ್ಟು ದೂರವಿಡಿ ಎಂದು ವೈದ್ಯ ರಾಜ್ ಕರಣ್ ಸಲಹೆ ನೀಡಿದ್ದಾರೆ. ವಾಸ್ತವವಾಗಿ ಪರದೆಯಿಂದ ಹೊರಹೊಮ್ಮುವ ನೀಲಿ ಬೆಳಕು ಕಣ್ಣುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದು ನಂತರ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮಲಗುವ 1 ಗಂಟೆ ಮೊದಲು ಎಲ್ಲಾ ಸ್ಕ್ರೀನ್ ಗಳನ್ನು ಆಫ್ ಮಾಡುವುದರಿಂದ ಕಣ್ಣು ಹಾಗೂ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ನೀವು ಬೇಗನೆ ನಿದ್ರೆಗೆ ಜಾರಬಹುದು.