ಸಲ್ಮಾನ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೇ ಮಹಿಳೆಯರನ್ನು ಮಾತ್ರ ಫಾಲೋ ಮಾಡುತ್ತಾರೆ, ಇವರಲ್ಲಿ ಐದನೇಯವರು ಪರಮಾಪ್ತೆಯಂತೆ ..

ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಕೆಲವಷ್ಟೇ ಜನರನ್ನು ಫಾಲೋ ಮಾಡುತ್ತಾರೆ. 

ನವದೆಹಲಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ ಬಹಳ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸಲ್ಮಾನ್ ಜನರನ್ನು ತನ್ನ ವೈಯಕ್ತಿಕ ಜೀವನದ ಭಾಗವಾಗಿಸುವುದು ಬಹಳ ಕಡಿಮೆ. ಹಾಗೆಯೇ, ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಕೆಲವಷ್ಟೇ ಜನರನ್ನು ಫಾಲೋ ಮಾಡುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಅಲಿಜೆ ಇನ್ನೂ ಬಾಲಿವುಡ್ ಪ್ರವೇಶಿಸಿಲ್ಲ, ಆದರೆ ಆಕೆಯ ಸಿದ್ಧತೆಗಳು ಪೂರ್ಣಗೊಂಡಿವೆ. ಅಲಿಜೆ ಸಲ್ಮಾನ್ ಖಾನ್ ಸಹೋದರಿಯ ಮಗಳು ಅಂದರೆ ಸಲ್ಮಾನ್ ಸೊಸೆ. 

2 /6

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರೂ ಒಟ್ಟಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರ ನಡುವೆ ಉತ್ತಮ ವೃತ್ತಿಪರ ಬಾಂಧವ್ಯವಿದ್ದು, ಈ ಕಾರಣದಿಂದಾಗಿ ಸಲ್ಮಾನ್ ಕತ್ರಿನಾಳನ್ನು ಇನ್‌ ಸ್ಟಾದಲ್ಲಿ ಫಾಲೋ ಮಾಡುತ್ತಾರೆ. ಇದಲ್ಲದೇ, ಇಬ್ಬರೂ ಒಳ್ಳೆಯ ಸ್ನೇಹಿತರು ಕೂಡ.  

3 /6

ಸಂಗೀತಾ ಬಿಜ್ಲಾನಿಯ ಹೆಸರು, ಸಲ್ಮಾನ್ ಖಾನ್ ಜೊತೆ ಕೇಳಿಬಂದಿತ್ತು. ನಂತರ ಸಂಗೀತಾ ಬಿಜಲಾನಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ವಿವಾಹವಾಗಿ, ವಿಚ್ಛೇದನ ಪಡೆದಿದ್ದಾರೆ. ಆದರೂ, ಸಲ್ಮಾನ್ ಖಾನ್ ಮತ್ತು ಸಂಗೀತಾ ಒಳ್ಳೆಯ ಸ್ನೇಹಿತರು ಮತ್ತು ಇಬ್ಬರೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಾರೆ.  

4 /6

ನಟಿ ಡೈಸಿ ಶಾ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದೇ ಸಲ್ಮಾನ್ ಖಾನ್. ಸಲ್ಮಾನ್ ಖಾನ್ ಅವರ 'ಜೈ ಹೋ' ಚಿತ್ರದ ಮೂಲಕ ಡೈಸಿ ಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಡೈಸಿ ಶಾ ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ಕೂಡಾ ಇನ್‌  ಸ್ಟಾದಲ್ಲಿ ಸಲ್ಮಾನ್ ಕೂಡ ಫಾಲೋ ಮಾಡುತ್ತಾರೆ.

5 /6

ಅರ್ಪಿತಾ ಖಾನ್ ಅವರನ್ನು ಸಲ್ಮಾನ್‌ ಫಾಲೋ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇವರು ಸಲ್ಮಾನ್‌ ಪ್ರೀತಿಯ ಸಹೋದರಿ ಅರ್ಪಿತಾ. ಸಲ್ಮಾನ್ ತನ್ನ ಸಹೋದರಿಯನ್ನು ತುಂಬಾ ಪ್ರೀತಿಸುತ್ತಾರೆ. ಹಾಗೂ ಅರ್ಪಿತಾ ಸಲ್ಮಾನ್‌ ಸಹೋದರ ಸಹೋದರಿಯರಲ್ಲಿ ಎಲ್ಲರಿಗಿಂತ ಚಿಕ್ಕವರು.    

6 /6

ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸಲ್ಮಾನ್ ಅವರ ಬಾಂಧವ್ಯ ಉತ್ತಮವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಜಾಕ್ವೆಲಿನ್ ಸಲ್ಮಾನ್ ಅವರ ಫಾರ್ಮ್ ಹೌಸ್‌ನಲ್ಲಿ ತಂಗಿದ್ದರು. ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಾರೆ