ಬೆಂಗಳೂರು : ನಾಳೆ ಅಂದರೆ ಶನಿವಾರ ಶನೈಶ್ಚರ ಅಮಾವಾಸ್ಯೆ. ಮಾಘ ಮಾಸದ ಅಮಾವಾಸ್ಯೆಯನ್ನು ಸಾಮಾನ್ಯವಾಗಿ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ಅಮಾವಾಸ್ಯೆಯು ಜನವರಿ 21 ಅಂದರೆ ಶನಿವಾರ ಬೀಳುತ್ತಿದೆ. ಮೌನಿ ಅಮಾವಾಸ್ಯೆ ಶನಿವಾರದಂದು ಬೀಳುವುದರಿಂದ ಅದನ್ನು ಶನೈಶ್ಚರ ಅಮಾವಾಸ್ಯೆ ಅಥವಾ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯ ದಿನದಂದು ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯಲ್ಲಿ ಇರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಆದರೆ ಈ ದಿನ ಕೆಲವು ಕೆಲಸಗಳನ್ನು ಮಾಡಿದರೆ ಶನಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶನೈಶ್ಚರ ಅಮವಾಸ್ಯೆಯ ದಿನ ಮಾಂಸಾಹಾರ-ಮದ್ಯವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರುತ್ತದೆ. ಶನೈಶ್ಚರ ಅಮಾವಾಸ್ಯೆಯ ದಿನದಂದು ಸಾತ್ವಿಕ ಆಹಾರ ಸೇವಿಸಬೇಕು.
ಅಸಹಾಯಕರು, ಬಡವರು, ಅಂಗವಿಕಲರನ್ನು ಎಂದಿಗೂ ಹಿಂಸಿಸಬಾರದು ಅಥವಾ ಶ್ರಮಜೀವಿಗಳನ್ನು ಶೋಷಣೆ ಮಾಡಬಾರದು. ಶನೈಶ್ಚರ ಅಮಾವಾಸ್ಯೆಯ ದಿನ, ಈ ಅಸಹಾಯಕರನ್ನು ತೊಂದರೆಗೊಳಿಸುವ ತಪ್ಪನ್ನು ಮಾಡಲೇಬಾರದು. ಇದು ಶನಿದೇವನನ್ನು ಕೆರಳಿಸುತ್ತದೆ.
ಶನಿವಾರದಂದು ಹೊಸ ಚಪ್ಪಲಿ, ಶೂಗಳನ್ನು ಖರೀದಿಸಬಾರದು.ಶನೈಶ್ಚರ ಅಮಾವಾಸ್ಯೆಯಂದು ಪಾದರಕ್ಷೆಗಳನ್ನು ಖರೀದಿಸುವುದು ಭಾರೀ ನಷ್ಟವನ್ನು ಉಂಟುಮಾಡುತ್ತದೆ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿದೋಷ ಸೃಷ್ಟಿಯಾಗುತ್ತದೆ.
ಶನೈಶ್ಚರ ಅಮವಾಸ್ಯೆಯ ದಿನ ಎಣ್ಣೆ, ಕಬ್ಬಿಣವನ್ನು ಕೂಡಾ ಖರೀದಿಸಿ ತರಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ತಾಂಡವವಾಡುತ್ತದೆ. ಶನೈಶ್ಚರ ಅಮಾವಾಸ್ಯೆಯ ದಿನ ಶನಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಕೂಡಾ ಮನೆಗೆ ತರಬೇಡಿ.
ಶನೈಶ್ಚರ ಅಮಾವಾಸ್ಯೆಯ ದಿನ ಪುರುಷ ಮತ್ತು ಮಹಿಳೆ ದೈಹಿಕ ಸಂಬಂಧ ಬೆಳೆಸಬಾರದು. ಗರುಡ ಪುರಾಣದ ಪ್ರಕಾರ, ಅಮವಾಸ್ಯೆಯ ದಿನದಂದು ಜನಿಸಿದ ಮಗು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)