Trivikram-Bhavya Gowda: ಬಿಗ್‌ಬಾಸ್ ಕನ್ನಡ ರನ್ನರ್ ಅಪ್ ತ್ರಿವಿಕ್ರಮ್ ಇತ್ತೀಚೆಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ಇದೇ ವೇಳೆ ಭವ್ಯ ಅವರೊಂದಿಗಿನ ಮದುವೆಯ ಸುದ್ದಿಗೂ ಪ್ರತಿಕ್ರಿಯೆ ನೀಡಿದ್ದಾರೆ..
ಪ್ರತಿ ಬಿಗ್‌ಬಾಸ್ ಸೀಸನ್‌ನಲ್ಲೂ ಒಂದೊಂದು ಲವ್ ಸ್ಟೋರಿ ಇದ್ದೇ ಇರುತ್ತದೆ.. ಅದರಂತೆ ಸೀಸನ್ ೧೧ರಲ್ಲೂ ಒಂದು ಪ್ರೇಮಕಥೆ ಶುರುವಾಗಿದೆ.. ಅದು ಬೇರಾರೂ ಅಲ್ಲ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಲವ್ ಸ್ಟೋರಿ.. ಈ ಜೋಡಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ..
ನಿನ್ನೆಯಷ್ಟೇ ಬಿಗ್‌ಬಾಸ್ ಸೀಸನ್ ೧೧ ಯಶಸ್ವಿಯಾಗಿ ಕೊನೆಗೊಂಡಿತು.. ಈ ವೇಳೆ ಹನುಮಂತ ವಿನ್ನರ್ ಆದರೇ ತ್ರಿವಿಕ್ರಮ್ ರನ್ನರ್‌ಅಪ್ ಆದರು.. ಸದ್ಯ ಅಪಾರ ಮೆಚ್ಚುಗೆ ಪಡೆದು ಹೊರಬಂದಿರುವ ತ್ರಿವಿಕ್ರಮ್ ಮಾತನಾಡಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ..
ಎಲ್ಲರೂ ನೋಡಿದಂತೆಯೇ ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯ ಅವರ ಒಡನಾಟ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು.. ಹೊರಗಡೆ ಅವರಿಬ್ಬರ ಪ್ಯಾನ್ ಪೇಜ್‌ಗಳು ಕ್ರಿಯೆಟ್ ಆಗಿವೆ.. ಇದೀಗ ಅವರಿಬ್ಬರು ಹೊರಬಂದ ಮೇಲೂ ಹೀಗೆ ಇರುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.. ಈ ಡೌಟ್‌ನ್ನು ಸ್ವತಃ ತ್ರಿವಿಕ್ರಮ್ ಕ್ಲಿಯರ್ ಮಾಡಿದ್ದಾರೆ..
ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತ್ರಿವಿಕ್ರಮ್ ನಾನು ಭವ್ಯ ಅವರನ್ನು ಮದುವೆ ಆಗೋದಿಲ್ಲ.. ಅವರು ನನಗಿಂತ ತುಂಬಾ ಚಿಕ್ಕವರು ಎಂದು ನೇರವಾಗಿ ಉತ್ತರ ನೀಡಿದ್ದಾರೆ.. ಇದರಿಂದ ಹರಡಿದ್ದ ಅವರಿಬ್ಬರ ಮದುವೆ ವದಂತಿಗಳಿಗೆ ಬ್ರೇಕ್ ಬಿದ್ದಂತಾಗಿದೆ..
ಸದ್ಯ ತ್ರಿವಿಕ್ರಮ್ ಅವರು ತಮ್ಮ ಮನದಾಳದ ಮಾತುಗಲನ್ನು ಹೇಳಿಕೊಂಡಿದ್ದಾರೆ ಆದರೆ ಈ ಪ್ರಶ್ನೆಗೆ ಭವ್ಯ ಅವರು ಏನು ಉತ್ತರ ಕೊಡುತ್ತಾರೆ ಎನ್ನುವುದುನ್ನು ಕಾದು ನೋಡಬೇಕಿದೆ.. ಒಟ್ಟಿನಲ್ಲಿ ಇವರಿಬ್ಬರ ಮದುವೆ ಸುದ್ದಿ ಮಾತ್ರ ಭರ್ಜರಿ ಸದ್ದು ಮಾಡುತ್ತಿದೆ..
ಸದ್ಯ ತ್ರಿವಿಕ್ರಮ್ ಅವರು ತಮ್ಮ ಮನದಾಳದ ಮಾತುಗಲನ್ನು ಹೇಳಿಕೊಂಡಿದ್ದಾರೆ ಆದರೆ ಈ ಪ್ರಶ್ನೆಗೆ ಭವ್ಯ ಅವರು ಏನು ಉತ್ತರ ಕೊಡುತ್ತಾರೆ ಎನ್ನುವುದುನ್ನು ಕಾದು ನೋಡಬೇಕಿದೆ.. ಒಟ್ಟಿನಲ್ಲಿ ಇವರಿಬ್ಬರ ಮದುವೆ ಸುದ್ದಿ ಮಾತ್ರ ಭರ್ಜರಿ ಸದ್ದು ಮಾಡುತ್ತಿದೆ..