Shani Chandra Conjunction 2025: ಶನಿ-ಚಂದ್ರನ ಸಂಯೋಗವು ಮಾರ್ಚ್ 29ರ ರಾತ್ರಿ 11.01ಕ್ಕೆ ಕರ್ಮದಾರಕ ಶನಿಯು ಮೀನ ರಾಶಿಗೆ ಸಾಗುತ್ತಾನೆ. ಶನಿಯ ಸಂಚಾರಕ್ಕೂ ಮುನ್ನ ಮಾರ್ಚ್ 28ರ ಸಂಜೆ 4.47ಕ್ಕೆ ಚಂದ್ರನು ಮೀನ ರಾಶಿಗೆ ಸಾಗುತ್ತಾನೆ. ಮಾರ್ಚ್ 29ರಂದು ಮೀನ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗವಾಗಲಿದೆ.
Shani Chandra Conjunction 2025: ನವಗ್ರಹಗಳಲ್ಲಿ ಶನಿದೇವರು ಕರ್ಮಕ್ಕೆ ತಕ್ಕಂತೆ ಫಲ ನೀಡುವ ದೇವರಾಗಿದ್ದಾನೆ. ಹೀಗಾಗಿ ಜ್ಯೋತಿಷ್ಯದಲ್ಲಿ ಶನಿದೇವರಿಗೆ ವಿಶೇಷ ಮಹತ್ವವಿದೆ. ಈ ಶನಿ ಹಾಗೂ ಚಂದ್ರ ಗ್ರಹ ಒಟ್ಟಿಗೆ ತಮ್ಮ ಸ್ಥಾನ ಬದಲಾಯಿಸುವುದರಿಂದ 12 ರಾಶಿಗಳ ಮೇಲೂ ಇದರ ಪರಿಣಾಮ ಉಂಟಾಗಲಿದೆ. ಈ ಎರಡೂ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತವೆ. ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಂದೇ ಸಮಯದಲ್ಲಿ ನೆಲೆಗೊಂಡಾಗ ಅದನ್ನು ಸಂಯೋಗವೆಂದು ಕರೆಯಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶನಿ-ಚಂದ್ರನ ಸಂಯೋಗವು ಮಾರ್ಚ್ 29ರ ರಾತ್ರಿ 11.01ಕ್ಕೆ ಕರ್ಮದಾರಕ ಶನಿಯು ಮೀನ ರಾಶಿಗೆ ಸಾಗುತ್ತಾನೆ. ಶನಿಯ ಸಂಚಾರಕ್ಕೂ ಮುನ್ನ ಮಾರ್ಚ್ 28ರ ಸಂಜೆ 4.47ಕ್ಕೆ ಚಂದ್ರನು ಮೀನ ರಾಶಿಗೆ ಸಾಗುತ್ತಾನೆ. ಮಾರ್ಚ್ 29ರಂದು ಮೀನ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗವಾಗಲಿದೆ. ಇದರಿಂದ ಯಾವ ರಾಶಿಯ ಮೇಲೆ ಪರಿಣಾಮ ಉಂಟಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಶನಿ ಮತ್ತು ಚಂದ್ರನ ಸಂಯೋಗವು ವೃಷಭ ರಾಶಿಯ ಜನರ ಮೇಲೆ ಶುಭ ಪರಿಣಾಮ ಬೀರುತ್ತದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷವಾಗಿರುತ್ತಾರೆ. ಕುಟುಂಬಸ್ಥರ ಬೆಂಬಲದೊಂದಿಗೆ ಯುವಕರು ತಮ್ಮದೇಯಾದ ಕೆಲಸವನ್ನು ಶುರು ಮಾಡಲಿದ್ದಾರೆ. ಶನಿ ಮತ್ತು ಚಂದ್ರದೇವರ ವಿಶೇಷ ಆಶೀರ್ವಾದದಿಂದ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಶನಿ-ಚಂದ್ರನ ಸಂಯೋಗವು ಕರ್ಕಾಟಕ ರಾಶಿಯ ಜನರ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಂಚಾರದಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಶೀಘ್ರದಲ್ಲೇ ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಗಳು ಸಿಗಲಿವೆ. ಉದ್ಯಮಿಗಳ ಸಂಪತ್ತು, ಖ್ಯಾತಿ ಹೆಚ್ಚಾಗಲಿದೆ. ನಿಮ್ಮ ಆರ್ಥಿಕ ವ್ಯವಹಾರಗಳು ಸುಧಾರಿಸುತ್ತವೆ. ಆರೋಗ್ಯದ ದೃಷ್ಟಿಯಿಂದ ಈ ರಾಶಿಯ ಜನರಿಗೆ ಮುಂಬರುವ ಸಮಯ ಒಳ್ಳೆಯದಾಗಿರುತ್ತದೆ.
ಶನಿ ಮತ್ತು ಚಂದ್ರನ ಸಂಯೋಗವು ಕನ್ಯಾ ರಾಶಿಯ ಜನರ ಮೇಲೆ ಶುಭ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ವಿವಾಹಿತರ ಒತ್ತಡ ಕಡಿಮೆಯಾಗುತ್ತದೆ. ಉದ್ಯಮಿಗಳ ಪ್ರಮುಖ ವ್ಯವಹಾರಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಇದು ಅವರಿಗೆ ಮಾನಸಿಕ ಶಾಂತಿಯನ್ನು ನೀಡಲಿದೆ. ಹಳೆಯ ಹೂಡಿಕೆಗಳಿಂದ ನೀವು ಭಾರೀ ಲಾಭವನ್ನು ಪಡೆಯುತ್ತೀರಿ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)