Coronavirus Fake News Alert: 'Corona Vaccine ಹಾಕಿಸಿಕೊಂಡ 2 ವರ್ಷಗಳೊಳಗೆ ಸಾವು!' ಏನಿದರ ಹಿಂದಿನ ಸತ್ಯಾಸತ್ಯತೆ?

Coronavirus Fake News Alert - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ.

 

ಇದನ್ನೂ ಓದಿ - Coronavirus Found In Water: ನೀರಿನಲ್ಲಿ ಪತ್ತೆಯಾದ ಕೊರೊನಾ ವೈರಸ್! ಭಾರಿ ಕೋಲಾಹಲ ಸೃಷ್ಟಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಸಾಮಾಜಿಕ ಮಾಧ್ಯಮಗಳ ಮೇಲೆ ವದಂತಿ - ಸಾಮಾಜಿಕ ಮಾಧ್ಯಮದ ಮೇಲೆ ಪ್ರಕಟಿಸಲಾಗಿರುವ ಒಂದು ಚಿತ್ರದಲ್ಲಿ ಕೊವಿಡ್-19 ವ್ಯಾಕ್ಸಿನ್ (Covid-19 Vaccine) ಕುರಿತು ಹೇಳಲಾಗಿರುವ ಸಂಗತಿಯನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ (PIB)ಖಂಡಿಸಿದೆ.  ಈ ಚಿತ್ರ ರೂಪದ ಸಂದೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರ ಹೆಸರನ್ನು ಉಲ್ಲೇಖಿಸಿ ವ್ಯಾಕ್ಸಿನ್ ಹಾಕಿಸಿಕೊಂಡ ಯಾವುದೇ ವ್ಯಕ್ತಿ ಬದುಕುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

2 /5

2. ಈ ವದಂತಿಯನ್ನು ಖಂಡಿಸಿದ PIB - ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ ಈ ಸಂದೇಶದ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಇದೊಂದು ಆಧಾರ ರಹಿತ ಪೋಸ್ಟ್ ಆಗಿದೆ ಎಂದಿದೆ. ಕೊವಿಡ್-19 ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಸರ್ಕಾರ ಹೇಳಿದೆ. ಇದಲ್ಲದೆ ಈ ರೀತಿಯ ಕಂಟೆಂಟ್ ಪ್ರಸಾರವನ್ನು ಮಾಡಬಾರದು ಎಂದು ಜನರಿಗೆ ಸರ್ಕಾರ ಆಗ್ರಹಿಸಿದೆ.

3 /5

3. ಸಾವು ಗ್ಯಾರಂಟಿಯ ವದಂತಿ ಶುದ್ಧ ಸುಳ್ಳು - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಆದರೆ, ದಿಒಂದು ಸಂಪೂರ್ಣ ತಪ್ಪು ಹಾಗೂ ಭ್ರಾಂತಿ ಹುಟ್ಟಿಸುವ ಮಾಹಿತಿಯಾಗಿದೆ. ಝೀ ಹಿಂದೂಸ್ತಾನ್ ಕನ್ನಡ ಕೂಡ ಈ ರೀತಿಯ ವದಂತಿಗಳಿಂದ ದೂರು ಉಳಿಯಲು ತನ್ನ ಓದುಗರಿಗೆ ಸಲಹೆ ನೀಡುತ್ತದೆ.

4 /5

4. ಭಾರತದಲ್ಲಿ ಕೊರೊನಾ ಮಹಾಮಾರಿಯ ಕಾರಣ 3 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ -ಪ್ರಸ್ತುತ ದೇಶಾದ್ಯಂತ ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ 69 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಇದುವರೆಗೆ ಸುಮಾರು 3 ಲಕ್ಷ 6 ಸಾವಿರಕ್ಕೂ ಅಧಿಕ ಜನರು ಈ ಮಾರದ ವೈರಸ್ ದಾಳಿಗೆ ಬಲಿಯಾಗಿದ್ದಾರೆ(Coronavirus Death).

5 /5

5. ಸಾವುಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ ಭಾರತ (India) - ದೇಶದಲ್ಲಿ ಸಾವಿನ ಸಂಖ್ಯೆಯನ್ನು ಗಮನಿಸಿದರೆ, ಅಮೇರಿಕಾ (America) ಹಾಗೂ ಬ್ರೆಜಿಲ್ (Brezil) ಬಳಿಕ ವಿಶ್ವದಲ್ಲಿ ಭಾರತ ಮೂರನೇ ಸ್ಥಾನವನ್ನು ತಲುಪಿದ್ದು, ಕೊರೊನಾ ವೈರಸ್ ಸೋಂಕಿನಿಂದ ಅಲ್ಲಿಯೂ ಕೂಡ ಮೂರು ಲಕ್ಷಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಮೇರಿಕಾದಲ್ಲಿ 6 ಲಕ್ಷ 4 ಸಾವಿರದ 82 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ, ಬ್ರೆಜಿಲ್ ನಲ್ಲಿ 4 ಲಕ್ಷ 49 ಸಾವಿರದ 185 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.